ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇಲ್ಲಿದೆ ಟಿಪ್ಸ್

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇಲ್ಲಿದೆ ಟಿಪ್ಸ್

‘ಸೈಲೆಂಟ್ ಕಿಲ್ಲರ್‌’ ಎಂದೇ ಕರೆಯಲಾಗುವ ಹೈಪರ್‌ಟೆನ್ಷನ್‌ ಜಗತ್ತಿನಲ್ಲಿರುವ ಅತ್ಯಂತ ಸಾಮಾನ್ಯ ಅನಾರೋಗ್ಯಗಳಲ್ಲಿ ಒಂದಾಗಿದೆ. ಅಧಿಕ ರಕ್ತದೊತ್ತಡ ಎಂದು ಕರೆಯಲಾಗುವ ಈ ಪರಿಸ್ಥಿತಿಯಲ್ಲಿ, ಅಪಧಮನಿಯಲ್ಲಿ ಹರಿಯುವ ರಕ್ತದ ಮೇಲೆ ಅಧಿಕ ಒತ್ತಡವಿರುತ್ತದೆ.

30-79 ವರ್ಷಗಳ ನಡುವಿನ ಮಂದಿಯಲ್ಲಿ 1.28 ಕೋಟಿಯಷ್ಟು ಜನರಿಗೆ ಹೈಪರ್‌ಟೆನ್ಷನ್ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಿದೆ. ಅಧಿಕ ರಕ್ತದೊತ್ತಡ ನಿರ್ವಹಣೆಗೆ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ಸಕಾರಾತ್ಮಕ ಪರಿಣಾಮಗಳು ಆಗುವುದಿಲ್ಲ.

ರಕ್ತದೊತ್ತಡವನ್ನು ಸಮತೋಲಿತವಾಗಿ ಕಾಪಾಡಿಕೊಳ್ಳಲು ಏನೆಲ್ಲಾ ಸರಳ ಯತ್ನಗಳನ್ನು ಮಾಡಬಹುದು ಎಂದು ಹಾರ್ವಡ್‌ ವಿವಿಯ ಆರೋಗ್ಯ ಮತ್ತು ಜೀವನಶೈಲಿ ತಜ್ಞರು ಕೆಲವೊಂದು ಸಲಹೆ-ಸೂಚನೆಗಳನ್ನು ಕೊಟ್ಟಿದ್ದಾರೆ.

ಹೈಪರ್‌ಟೆನ್ಷನ್‌ ಇದ್ದಲ್ಲಿ, ಅದರ ಸೂಕ್ತ ನಿರ್ವಹಣೆ ತುಂಬಾ ಮುಖ್ಯ. ಆ ನಿಟ್ಟಿನಲ್ಲಿ, ಹಾರ್ವರ್ಡ್ ವಿವಿಯ ತಜ್ಞರು ನೀಡಿರುವ ಕೆಲವೊಂದು ಸಲಹೆಗಳು ಇಲ್ಲಿವೆ.

ಜೀವನಶೈಲಿಯ ಬಗ್ಗೆ ಕಾಳಜಿ ವಹಿಸುವುದು

ಆರೋಗ್ಯಯುತ ರಕ್ತದೊತ್ತಡದ ಮಟ್ಟಗಳನ್ನು ಕಾಪಾಡಲು ಬರೀ ಮದ್ದುಗಳನ್ನೇ ನಂಬಲು ಸಾಧ್ಯವಿಲ್ಲ. ಸಸ್ಯಜನ್ಯ ಪಥ್ಯ ಮತ್ತು ನಿಯಮಿತ ವ್ಯಾಯಾಮಗಳಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಅಧ್ಯಯನಗಳು ತೋರಿವೆ. ಹಾಗಾಗಿ, ನಿಯಂತ್ರಿತ ಜೀವನಶೈಲಿ ಮೂಲಕ ಹೈಪರ್‌ಟೆನ್ಷನ್‌ಗೆ ಕಡಿವಾಣ ಹಾಕುವುದು ಸೂಕ್ತ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ 'ಮನೆ ಮದ್ದು' ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ

Wed Dec 22 , 2021
ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಥವಾ ಕೆಲವೊಮ್ಮೆ ಹೊರಗಡೆ ಆಹಾರ ತಿನ್ನುವುದರಿಂದ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಮಾತ್ರೆಗಳನ್ನು ತಿನ್ನುವ ಬದಲು ಮನೆಯಲ್ಲಿಯೇ ಇರುವ ಔಷಧಿಗಳನ್ನು ಉಪಯೋಗಿಸುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. 1 ಕಪ್ ಮೊಸರಿಗೆ 1 ಬಾಳೆಹಣ್ಣನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ. ಇನ್ನು ಒಂದು ಗ್ಲಾಸ್ ಮಜ್ಜಿಗೆಗೆ 1 ಟೀ ಸ್ಪೂನ್ ನಷ್ಟು […]

Advertisement

Wordpress Social Share Plugin powered by Ultimatelysocial