ಆಧಾರ್-ಪ್ಯಾನ್ ಲಿಂಕ್‌ ಮಾಡಲು ದಂಡ ಹೇಗೆ ಪಾವತಿಸುವುದು?

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಮಾರ್ಚ್ 31, 2022 ರಿಂದ ಮಾರ್ಚ್ 31, 2023 ರವರೆಗೆ ಗಡುವನ್ನು ವಿಸ್ತರಿಸಿದೆ. ಆದರೆ ಎರಡು ದಾಖಲೆಗಳನ್ನು ಲಿಂಕ್ ಮಾಡಲು ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಆದರೆ ಹಲವಾರು ಮಂದಿಗೆ ಈ ದಂಡವನ್ನು ಹೇಗೆ ಪಾವತಿ ಮಾಡುವುದು ಎಂಬುವುದು ತಿಳಿದಿಲ್ಲ.

ಈವರೆಗೆ ಅಂದರೆ ಏಪ್ರಿಲ್ 1, 2022 ರಿಂದ ನೀವು ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ರೂ 500 ಶುಲ್ಕ ಪಾವತಿ ಮಾಡಬೇಕಾಗಿತ್ತು. ಆದರೆ ನೀವು ಜುಲೈ 1, 2022 ರಿಂದ ಪ್ಯಾನ್ ಆಧಾರ್ ಅನ್ನು ಲಿಂಕ್ ಮಾಡಬೇಕಾದರೆ ದುಪ್ಪಟ್ಟು ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಆದಾಯ ತೆರಿಗೆ ಇಂಡಿಯಾದ ವೆಬ್‌ಸೈಟ್ ಕೂಡ “CBDT ಸುತ್ತೋಲೆಯ ಪ್ರಕಾರ F.No. 370142/14/22-TPL ದಿನಾಂಕ 30ನೇ ಮಾರ್ಚ್ 2022 ರಂದು, 1ನೇ ಜುಲೈ 2017 ರಂತೆ ಪ್ಯಾನ್ ಅನ್ನು ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು 31ನೇ ಮಾರ್ಚ್, 2022 ರಂದು ಅಥವಾ ಮೊದಲು ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕಾಗಿದೆ. ತೆರಿಗೆದಾರರು ಹಾಗೆ ಮಾಡುವಲ್ಲಿ ವಿಫಲವಾದರೆ 30 ಜೂನ್, 2022 ರವರೆಗೆ ರೂ. 500 ಶುಲ್ಕವನ್ನು ಪಾವತಿಸಬೇಕು. ಜುಲೈ ಬಳಿಕ ಪ್ಯಾನ್-ಆಧಾರ್ ಲಿಂಕ್ ಮಾಡಲು ರೂ.1000 ಶುಲ್ಕವನ್ನು ಪಾವತಿಸಬೇಕು,” ಎಂದು ತಿಳಿಸಿದೆ.

ಹಾಗಾದರೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ದಂಡವನ್ನು ಹೇಗೆ ಪಾವತಿ ಮಾಡುವುದು ಎಂದು ತಿಳಿಯಲು ಮುಂದೆ ಓದಿ…

ಪ್ಯಾನ್-ಆಧಾರ್ ಲಿಂಕ್‌ ಮಾಡಲು ದಂಡ ಹೇಗೆ ಪಾವತಿಸುವುದು?

* “CHALLAN NO./ITNS 280” ವಿಭಾಗದಲ್ಲಿ “Proceed” ಮೇಲೆ ಕ್ಲಿಕ್ ಮಾಡಿ

* ನಿಗಮ ತೆರಿಗೆ (ಕಂಪನಿಗಳು) ಅಥವಾ ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ) ಎಂದು ತೆರಿಗೆಯನ್ನು ಆಯ್ಕೆಮಾಡಿ

* Type of Payment ಅಡಿಯಲ್ಲಿ Other Receipts ಮೇಲೆ ಕ್ಲಿಕ್ ಮಾಡಿ, ಪಾವತಿ ವಿಧಾನ ಆಯ್ಕೆ ಮಾಡಿ

* ಪ್ಯಾನ್ ನಮೂದಿಸಿ, ಮೌಲ್ಯಮಾಪನ ವರ್ಷವನ್ನು 2023-24 ಎಂದು ಆಯ್ಕೆಮಾಡಿ

* ವಿಳಾಸ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ Proceed ಕ್ಲಿಕ್ ಮಾಡಿ

* ಇಲ್ಲಿಗೆ ಪಾವತಿ ಪ್ರಕ್ರಿಯೆ ಮುಗಿಯಲಿದೆ, ಇದಾದ 4-5 ದಿನಗಳ ಬಳಿಕ ಆಧಾರ್-ಪ್ಯಾನ್ ಲಿಂಕ್ ಮಾಡಿಕೊಳ್ಳಿ

ಆದಾಯ ತೆರಿಗೆ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ನಿಗದಿತ ಮೊತ್ತಕ್ಕಿಂತ ಕಡಿಮೆ ಅಥವಾ ಹೆಚ್ಚಿನ ಮೊತ್ತವನ್ನು ಪಾವತಿ ಮಾಡಿದ್ದರೆ, ಆಧಾರ್-ಪ್ಯಾನ್ ಲಿಂಕ್ ಮಾಡುವ ಉದ್ದೇಶಕ್ಕಾಗಿ ಮಾಡಿದ ಪಾವತಿಯನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಿಪಟೂರು ನಗರ ಮೇಲುಸೇತುವೆ ಗೆ ಆಗ್ರಹಿಸಿ ಇಂದು ಪ್ರತಿಭಟನೆ

Sat Jun 4 , 2022
ತಿಪಟೂರು ನಗರ ದಿಂದ ಹಾಸನಕ್ಕೆ ಹೋಗುವ ದಾರಿಯಲ್ಲಿ ಇರುವ ರೈಲ್ವೆ ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಇಂದು ತಿಪಟೂರು ಕಾಂಗ್ರೆಸ್ ನಾಯಕರಾದ ಕೆ.ಟಿ. ಶಾಂತಕುಮಾರ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ಹೊರಭಾಗದಲ್ಲಿ ಇರುವ ಶಾರದಾ ನಗರ. ಲಿಂಗದಹಳ್ಳಿ. ಮಾರನಗೆರೆ. ಮತ್ತು ಹಾಸನ ಮಾರ್ಗವಾಗಿ ಆಗಮಿಸುವ ರೈತರು, ವಿದ್ಯಾರ್ಥಿಗಳು, ಸರ್ಕಾರಿ ಕೆಲಸ ನಿಮಿತ್ತವಾಗಿ ಹೋಗುವ ನೌಕರರಿಗೆ ಅತಿ ಹೆಚ್ಚು ತೊಂದರೆಯಾಗುವ ಕಾರಣ ರೈಲು ಹೋಗುವಾಗ ಹಾಕುವ ಗೇಟಿನಿಂದ ಅರ್ಧಗಂಟೆಗೂ ಹೆಚ್ಚು […]

Advertisement

Wordpress Social Share Plugin powered by Ultimatelysocial