ನಟಿ ಶಿಲ್ಪಾ ಶೆಟ್ಟಿ ಮಗಳ ಬರ್ತ್ ಡೇ ಬಲು ಜೋರು!

ನಟಿ ಶಿಲ್ಪಾ ಶೆಟ್ಟಿ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ.

ಈಗ ಮಗಳಿಗೆ ಮೂರು ವರ್ಷ ಕಂಪ್ಲೀಟ್ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೋವಿಡ್ನಿಂದಾಗಿ ಶಿಲ್ಪಾ ಶೆಟ್ಟಿ ಅವರ ಮುದ್ದು ಮಗಳ ಹುಟ್ಟುಹಬ್ಬವನ್ನು ಎರಡು ವರ್ಷಗಳಿಂದ ಮನೆಯಲ್ಲೇ ಆಚರಿಸಲಾಗಿತ್ತು. ಹಾಗಾಗಿ ಈ ವರ್ಷ ನಟಿ ತನ್ನ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಶಿಲ್ಪಾ ಶೆಟ್ಟಿ ಅಭಿಮಾನಿಗಳೊಂದಿಗೆ ಸಮೀಷಾ ಅವರ ಹುಟ್ಟುಹಬ್ಬದ ಪಾರ್ಟಿಯ ಒಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿಯಲ್ಲಿ ಟ್ಯಾಟೂ ಸ್ಟೇಷನ್ ಮತ್ತು ಡ್ಯಾನ್ಸ್ ಫ್ಲೋರ್ ಜೊತೆಗೆ ಫೋಟೋಬೂತ್, ವಿಡಿಯೋ ಗೇಮ್ಗಳನ್ನು ಸಹ ನಿರ್ಮಿಸಿ ಮಕ್ಕಳಿಗೆ ಒಳ್ಳೆಯ ಮನರಂಜನೆ ನೀಡಿದ್ದಾರೆ.

ಸಮೀಷಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ಅವರ ಚಿಕ್ಕಮ್ಮ ಶಮಿತಾ ಶೆಟ್ಟಿ ಕೂಡ ಭಾಗವಹಿಸಿದ್ದರು. ಸಮೀಷಾ ಬರ್ತಡೇಯಲ್ಲಿ ಪ್ರತಿಯೊಬ್ಬರೂ ಸಖತ್ ಎಂಜಾಯ್ ಮಾಡಿದ್ದಾರೆ.

ಮಗಳ ಹುಟ್ಟುಹಬ್ಬದ ಫೋಟೋ ನೋಡಿದ ಶಿಲ್ಪಾ ಶೆಟ್ಟಿ ಅಭಿಮಾನಿಗಳು, ‘ನಿಮ್ಮ 3 ವರ್ಷದ ಮಗಳ ಹುಟ್ಟುಹಬ್ಬದ ಆಚರಣೆ ಮಿನಿ ಮದುವೆ ಆಚರಣೆಯಂತೆ ಕಾಣ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಶಿಲ್ಪಾ ಆಯೋಜಿಸಿರುವ ಈ ಅದ್ಧೂರಿ ಪಾರ್ಟಿ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ.

ಭಾರತದ ಅತ್ಯಂತ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ, ಬಾಲಿವುಡ್ನಲ್ಲಿ ತನ್ನದೇ ಇಮೇಜ್ ಉಳಿಸಿಕೊಂಡಿದ್ದಾರೆ. ಮಾಡೆಲಿಂಗ್ ಮಾಡುತ್ತಾ ಹಲವು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ. 1993ರಲ್ಲಿ ಥ್ರಿಲ್ಲರ್ ಬಾಜಿಗರ್ ನಲ್ಲಿ ಚೊಚ್ಚಲ ನಟನೆಗಾಗಿ ಫಿಲಂ ಫೇರ್ ಅವಾರ್ಡ್ ನಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.

2000 ಶಿಲ್ಪಾ ಶೆಟ್ಟಿ ಅಭಿನಯದ ಧಡಕನ್ ಸಿನಿಮಾ ಸೂಪರ್ ಹಿಟ್ ಆಗ್ತಿದ್ದಂತೆ ಶಿಲ್ಪಾ ಶೆಟ್ಟಿ ರೇಂಜ್ ಬದಲಾಯ್ತು. ಶಿಲ್ಪಾ ಶೆಟ್ಟಿಗೆ ಬಾಲಿವುಡ್ ಸಿನಿಮಾ ಆಫರ್ ಗಳು ಹರಿದು ಬಂದ್ವು. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಶಿಲ್ಪಾ ಶೆಟ್ಟಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

2009 ರಲ್ಲಿ ಉದ್ಯಮಿ ರಾಜ್ ಕುಂದ್ರಾರನ್ನು ಶಿಲ್ಪಾ ಶೆಟ್ಟಿ ವಿವಾಹವಾದರು. ಈ ದಂಪತಿಗೆ ಒಬ್ಬ ಮಗ, ಬಬ್ ಮಗಳಿದ್ದಾಳೆ. ಶಿಲ್ಪಾ ಶೆಟ್ಟಿ 2009 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಜಸ್ಥಾನ ರಾಯಲ್ಸ್ ಸಹ ಮಾಲೀಕಿಯಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನ ಮರುಳೋ ಜಾತ್ರೆ ಮರುಳೋ!

Tue Feb 21 , 2023
ಹಬ್ಬ ಹರಿದಿನಗಳು ಬಂದ್ರೆ ಜನರು ಕಲ್ಲು ನೀರು ಸೇರಿದಂತೆ ದೇವರಿಗೆ ವಿಶೇಷ ಪೂಜೆ ಮಾಡೋದು ಸಹಜ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಶಿವರಾತ್ರಿ ನಂತರದ ಅಮಾವಾಸ್ಯೆಗೆ ಜನರೆಲ್ಲ ಕಾಡಿಗೆ ತೆರಳುತ್ತಿದ್ದು ಕಾಡಿನಲ್ಲಿರುವ 300 ವರ್ಷಗಳಷ್ಟು ಹಳೆಯ ಬೃಹತ್ ಮರಕ್ಕೆ ಪೂಜೆ ನೆರವೇರಿಸುವ ಮೂಲಕ ವಿಶಿಷ್ಟ ಆಚರಣೆ ಮಾಡ್ತಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like […]

Advertisement

Wordpress Social Share Plugin powered by Ultimatelysocial