ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯದತ್ತ ಧಾವಿಸಿ ಬರುತ್ತಿದೆ ‘ಮಹಾ’ ಜಲಾಶಯದ ನೀರು

VIDEO: ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯದತ್ತ ಧಾವಿಸಿ ಬರುತ್ತಿದೆ 'ಮಹಾ' ಜಲಾಶಯದ ನೀರು: ಹೈ ಅಲರ್ಟ್‌ ಘೋಷಣೆ

ಕೊಲ್ಹಾಪುರ (ಮಹಾರಾಷ್ಟ್ರ): ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ಜಲಾಶಯ ಗೇಟ್ ರಿಪೇರಿ ವೇಳೆ ಅವಘಡ ಸಂಭವಿಸಿದ್ದು, ತಾಂತ್ರಿಕ ದೋಷದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದುಬಂದಿದೆ.

ಸುಮಾರು 18 ಅಡಿಗಳಷ್ಟು ಗೇಟ್ ಎತ್ತರಿಸಿ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದರು.

ಈ ವೇಳೆ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ, ಅಧಿಕಾರಿಗಳ ಎಡವಟ್ಟಿನಿಂದ ನದಿ ತೀರದ ಜನರು ಕಂಗೆಟ್ಟು ಹೋಗಿದ್ದು, ಇಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ವೇದಗಂಗಾ ನದಿ ತೀರದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಕಂಗಾಲಾಗಿ ಹೋಗಿದ್ದಾರೆ. ಅಧಿಕಾರಿಗಳು ಮಾಡಿರುವ ಈ ಎಡವಟ್ಟಿನಿಂದ ಕರ್ನಾಟಕದತ್ತ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಒಟ್ಟಾರೆ ಎಂಟು ಟಿ ಎಂ‌ ಸಿ ಸಾಮರ್ಥ್ಯ ಇರುವ ಜಲಾಶಯ ಇದಾಗಿದೆ. ಆರು ಗೇಟ್‌ಗಳ ಪೈಕಿ ಒಂದು ಗೇಟ್ ದುರಸ್ಥಿ ಮಾಡುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನೇರ ಮಾರಾಟ ಉದ್ಯಮಕ್ಕೆ ಕೇಂದ್ರದ ಹೊಸ ನಿಯಮ; ಪಿರಮಿಡ್‌ ಸ್ಕೀಂಗಳಿಗೆ ಕಡಿವಾಣ

Wed Dec 29 , 2021
ನವದೆಹಲಿ: ಆಯಮ್‌ವೇ, ಟಪ್ಪರ್‌ವೇರ್ ಹಾಗೂ ಓರಿಫ್ಲೇಮ್‌ ರೀತಿಯ ನೇರ ಮಾರಾಟ ಕಂಪನಿಗಳು ಪಿರಮಿಡ್ ಸ್ಕೀಂಗಳಿಗೆ ಅಥವಾ ಹಣ ಚಲಾವಣೆಯ ಸ್ಕೀಂಗಳ ಪ್ರಚಾರ ಮಾಡುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಕಂಪನಿಗಳು 90 ದಿನಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಉತ್ಪನ್ನಗಳ ನೇರ ಮಾರಾಟ ಅಥವಾ ಸೇವೆಗಳಿಂದ ಎದುರಾಗುವ ಕುಂದು ಕೊರತೆಗಳಿಗೆ (ಅಹವಾಲು) ಕಂಪನಿಗಳು ಹೊಣೆಗಾರರಾಗಿರುತ್ತಾರೆ. ಗ್ರಾಹಕ ಸಂರಕ್ಷಣಾ (ನೇರ ಮಾರಾಟ) ನಿಯಮಗಳು, […]

Advertisement

Wordpress Social Share Plugin powered by Ultimatelysocial