ಕೊನೆಗೂ ಮದುವೆ ವಿಷಯ ಅನೌನ್ಸ್ ಮಾಡಿದ ಆದಿಲ್.

ಆದಿಲ್ ಖಾನ್ ದುರಾನಿ ಕೊನೆಗೂ ತಮ್ಮ ಮದುವೆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮುಂದೆ ಅನೌನ್ಸ್ ಮಾಡಿದ್ದಾರೆ.ಇಲ್ಲಿಯವರೆಗೂ ರಾಖಿ ಸಾವಂತ್ ಅವರು ಮದುವೆ ಮುಚ್ಚಿಟ್ಟ ಬಗ್ಗೆ ಪಬ್ಲಿಕ್ ಸ್ಥಳಗಳಲ್ಲಿ ರೋದಿಸುತ್ತಿದ್ದರು. ಈಗ ಆದಿಲ್ ನಾನೇ ರಾಖಿಯ ಗಂಡ ಎಂದು ಒಪ್ಪಿಕೊಂಡಿದ್ದಾನೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಶೇರ್ ಮಾಡಿದ ಆದಿಲ್ ಖಾನ್ ಕೊನೆಗೂ ನಾನು ಈ ಮದುವೆಯನ್ನು ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ಯಾವತ್ತೂ ರಾಖಿಯನ್ನು ಮದುವೆಯಾಗಿದ್ದಾಗಿ ಹೇಳಿರಲಿಲ್ಲ. ಅದಕ್ಕೆ ಕೆಲವು ಕಾರಣಗಳಿತ್ತು ಎಂದಿದ್ದಾರೆ. ಕೆಲವೊಂದು ಕಾರಣಗಳಿಂದ ನಮ್ಮ ಮದುವೆ ಸುದ್ದಿ ಮುಚ್ಚಿಟ್ಟೆ. ರಾಖಿ ನಮಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಬರೆದಿದ್ದಾರೆ. ಆವರಣದ ಒಳಗಡೆ ಪಾಪ್ಪುಡಿ ಎಂದು ಬರೆದಿದ್ದು ಬಹುಶಃ ಆದಿಲ್ ಇದೇ ಹೆಸರಿನಿಂದ ರಾಖಿ ಅವರನ್ನು ಕರೆಯುತ್ತಾರೆ ಅನಿಸುತ್ತದೆ. ಆದಿಲ್ ಅವರ ಮದುವೆ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಇದರಲ್ಲಿ ಆದಿಲ್ ಬ್ಲೂ ಜೀನ್ಸ್ ಹಾಗೂ ಬ್ಲಾಕ್ ಶರ್ಟ್ ಧರಿಸಿದ್ದರು. ರಾಖಿ ಸಾವಂತ್ ಸಂಪ್ರದಾಯಿಕ ಉಡುಗೆ ಧರಿಸಿದ್ದು ಕುಂಕುಮ ಅಥವಾ ಬಿಂದಿ ಇಟ್ಟಿರಲಿಲ್ಲ. ತಲೆಯ ಮೇಲೆ ದುಪಟ್ಟಾ ಕವರ್ ಮಾಡಿದ್ದರು. ಮದುವೆ ಪೋಸ್ಟ್​ಗೆ ಕಮೆಂಟ್ ಮಾಡಿದ ರಾಖಿ ಸಾವಂತ್ ಥ್ಯಾಂಕ್ಸ್ ಜಾನ್, ಲಾಟ್ಸ್ ಆಫ್ ಲವ್ ಎಂದು ಬರೆದಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಂಡಾಲಾದಲ್ಲಿ ಅಥಿಯಾ ಶೆಟ್ಟಿ-ಕೆ ಎಲ್ ರಾಹುಲ್ ಅದ್ಧೂರಿ ಕಲ್ಯಾಣ.

Mon Jan 16 , 2023
          ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಕೆ.ಎಲ್ ರಾಹುಲ್ ಹಾಗೂ ಅಥಿಯಾಶೆಟ್ಟಿ ತುದಿಗಾಲಿನಲ್ಲಿ ನಿಂತಿದ್ದಾರೆ. ಇ-ಟೈಮ್ಸ್ ವರದಿ ಪ್ರಕಾರ ಜನವರಿ 20ರ ಬಳಿಕ ಕೆಎಲ್ ರಾಹುಲ್, ಅಥಿಯಾ ವಿವಾಹ ಅದ್ಧೂರಿಯಾಗಿ ನಡೆಯಲಿದೆಯಂತೆ.ರಾಹುಲ್, ಅಥಿಯಾ ಜೋಡಿಯ ಡೇಟಿಂಗ್, ಮದುವೆ ಬಗ್ಗೆ ನಾನಾ ವದಂತಿಗಳು ಹಬ್ಬಿತ್ತು, ಇದೀಗ ಈ ಜೋಡಿ ಜನವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದೆ. ಸುನೀಲ್ ಶೆಟ್ಟಿಯ ಭವ್ಯ ಬಂಗಲೆಯಲ್ಲಿ ಅದ್ಧೂರಿಯಾಗಿ ಸಪ್ತಪದಿ […]

Advertisement

Wordpress Social Share Plugin powered by Ultimatelysocial