ಅಕ್ರಮವಾಗಿ ಕಿಸಾನ್ ಸಮ್ಮಾನ್ ಯೋಜನೆ ಹಣ ಪಡೆಯುತ್ತಿರುವ ರೈತರಿಗೆ ಬಿಗ್ ಶಾಕ್

ಬೆಂಗಳೂರು: ಜಮೀನು ಮಾರಾಟ ಮಾಡಿದ್ದರೂ ಅಕ್ರಮವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯುತ್ತಿದ್ದ ರೈತರನ್ನು ಪತ್ತೆ ಮಾಡಿ ಹಣ ಪಾವತಿ ಸ್ಥಗಿತಗೊಳಿಸಲಾಗಿದೆ.

ಕೃಷಿ ಇಲಾಖೆ ಈ ರೀತಿಯ 1.50 ಲಕ್ಷ ರೈತರನ್ನು ಪತ್ತೆ ಮಾಡಿದೆ. ಇವರಲ್ಲದೆ ಮೃತಪಟ್ಟಿದ್ದ 200ಕ್ಕೂ ಅಧಿಕ ರೈತರ ಖಾತೆಗೆ ಪಾವತಿಯಾಗುತ್ತಿದ್ದ ಹಣಕ್ಕೆ ತಡೆ ನೀಡಲಾಗಿದೆ.

ಇದುವರೆಗೆ ಸಂದಾಯವಾದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ಸುಮಾರು 53 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಕೂಡ ಸೌಲಭ್ಯ ಪಡೆಯುತ್ತಿರುವುದನ್ನು ತಡೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಭೂಮಿ ತಂತ್ರಾಂಶ, ಫ್ರೂಟ್ಸ್ ಮೊದಲಾದ ದತ್ತಾಂಶಗಳನ್ನು ಆಧರಿಸಿ ಕೃಷಿ ಇಲಾಖೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಮೀನು ಮಾರಿದ ರೈತರು, ಮೃತಪಟ್ಟವರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಅನರ್ಹರು ಕಿಸಾನ್ ಸಮ್ಮಾನ್ ಹಣ ಪಡೆಯುತ್ತಿರುವುದು ಗೊತ್ತಾಗಿದೆ. ಅಂತಹವರ ಖಾತೆಗೆ ಹಣ ಜಮಾ ಮಾಡುವುದನ್ನು ನಿಲ್ಲಿಸಿದ್ದು, ಹಣ ವಾಪಸ್ ಪಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಕ್ಕೆ ವಕ್ಕರಿಸಿತು ಮತ್ತೊಂದು ಮಹಾಮಾರಿ.! ಮಕ್ಕಳನ್ನು ಬಾಧಿಸುವ ಟೊಮೊಟೊ ಜ್ವರ ವೈರಸ್ ಪತ್ತೆ

Mon May 16 , 2022
ಬೆಂಗಳೂರು : ಕೊರೊನಾ ಬೆನ್ನಲ್ಲೇ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆಯಾ ಎನ್ನುವ ಆತಂಕ ಇದೀಗ ಕಾಡುತ್ತಿದೆ. ಹೌದು ಶಂಕಿತ ಟೊಮೊಟೊ ವೈರಸ್ ರಾಜ್ಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗ ಉಡುಪಿಯಲ್ಲಿ ವೈರಸ್ ಪತ್ತೆಯಾಗಿದೆ.ಇದೀಗ ಕೇರಳ ಗಡಿ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಕರ್ನಾಟಕ ಗಡಿ ರಾಜ್ಯವಾದ ಕೇರಳದಲ್ಲಿ ಕಳೆದ ಕೆಲವು ಸಮಯಗಳಿಂದ ಮಕ್ಕಳಲ್ಲಿಟೊಮೊಟೋ ಜ್ವರಕಾಣಿಸಿಕೊಂಡಿದೆ. ಐದು ವರ್ಷದ ಕೆಳಗಿನ ಮಕ್ಕಳನ್ನು ಈ ಟೊಮೊಟೋ ಜ್ವರ ಬಾಧಿಸುತ್ತಿದೆ. ಇದೀಗ ರಾಜ್ಯದಲ್ಲಿಯೂ ಶಂಕಿತ […]

Advertisement

Wordpress Social Share Plugin powered by Ultimatelysocial