ಆಲಿವ್ ಆಯಿಲ್‌ ಆರೋಗ್ಯಕ್ಕೆ ತುಂಬಾ ಉಪಯುಕ್ತ.

 

 

ಆಲಿವ್ ಆಯಿಲ್‌ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹೃದಯವನ್ನು ಸುರಕ್ಷಿತವಾಗಿಡಲು ಈ ಎಣ್ಣೆಯು ತುಂಬಾ ಪ್ರಯೋಜನಕಾರಿ. ಈ ಎಣ್ಣೆಯನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ.

ಆಲಿವ್‌ ಆಯಿಲ್‌ ಬಳಸುವುದರಿಂದ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.

ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿಡುವುದರಿಂದ ಹೃದಯಾಘಾತದ ಅಪಾಯ ಸಹ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್ ಸಂಯುಕ್ತಗಳಿವೆ. ಇದು ಹೃದಯದ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಬಲ್ಲದು. ಪ್ರತಿದಿನ ಅರ್ಧ ಟೀ ಚಮಚದಷ್ಟು ಆಲಿವ್ ಆಯಿಲ್‌ ಸೇವಿಸುವುದರಿಂದ ಹೃದಯ ರಕ್ತನಾಳಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುವುದಿಲ್ಲ.

ಒಮೆಗಾ-3 ಕೊಬ್ಬಿನಾಮ್ಲಗಳು ಈ ಎಣ್ಣೆಯಲ್ಲಿ ಕಂಡುಬರುತ್ತವೆ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಕಾರಿ. ಇದರ ಹೊರತಾಗಿ ಹೃದಯದ ಆರೋಗ್ಯ ಮತ್ತು ಕಾರ್ಯವನ್ನು ಸಹ ಸುಧಾರಿಸುತ್ತದೆ. ಆಲಿವ್‌ ಆಯಿಲ್‌ನಲ್ಲಿ ಹೆಚ್ಚಿನ ಪ್ರಮಾಣದ ಪಾಲಿಫಿನಾಲ್‌ ಇರುವುದರಿಂದ ಇದು ಉತ್ತಮ ಲಿಪಿಡ್ ಪ್ರೊಫೈಲ್‌ಗೆ ಸಹಾಯ ಮಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಆಲಿವ್ ಆಯಿಲ್‌ನಲ್ಲಿರುವ ಪಾಲಿಫಿನಾಲ್‌ಗಳು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಆಲಿವ್‌ ಆಯಿಲ್‌ ಬಳಸುವುದು ಒಳ್ಳೆಯದು. ಇದರಲ್ಲಿರುವ ಪಾಲಿಫಿನಾಲ್‌ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.

ಈ ಎಣ್ಣೆಯಲ್ಲಿ ನೀವು ಅಡಿಗೆ ಮಾಡಿದ್ರೆ, ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಆಲಿವ್ ಎಣ್ಣೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಇ ಕೂಡ ಇದೆ. ಆಲಿವ್‌ ಆಯಿಲ್‌ನಿಂದ ಮಸಾಜ್‌ ಮಾಡಿದ್ರೆ ಕೂದಲು ಸಹ ದಟ್ಟವಾಗಿ ಬೆಳೆಯುತ್ತದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮೊಸರು ಆರೋಗ್ಯಕರ ಆಹಾರ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ.

Sun Apr 24 , 2022
ಮೊಸರು ಆರೋಗ್ಯಕರ ಆಹಾರ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಮೊಸರಿನ ಜೊತೆಗೆ ಇನ್ನು ಕೆಲವೊಂದು ಪದಾರ್ಥಗಳನ್ನು ಬೆರೆಸಿ ಸೇವಿಸಿದ್ರೆ ಹಲವಾರು ಕಾಯಿಲೆಗಳು ಗುಣವಾಗುತ್ತವೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳು ಸಮೃದ್ಧವಾಗಿದೆ. ಜೊತೆಗೆ ಲ್ಯಾಕ್ಟೋಸ್, ಕಬ್ಬಿಣ ಮತ್ತು ರಂಜಕವೂ ಇದರಲ್ಲಿದೆ. ಇವೆಲ್ಲವೂ ನಿಮ್ಮ ದೇಹಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು. ಮೊಸರು ಮತ್ತು ಜೀರಿಗೆ: ಮೊಸರು ಮತ್ತು ಜೀರಿಗೆ ಬೆಸ್ಟ್‌ ಕಾಂಬಿನೇಷನ್‌, ದಿನೇ ದಿನೇ ಏರ್ತಾ ಇರೋ ತೂಕ ನಿಮಗೆ ತಲೆನೋವಾಗಿದ್ದರೆ ಮೊಸರಿನ ಜೊತೆಗೆ […]

Advertisement

Wordpress Social Share Plugin powered by Ultimatelysocial