ತಾಯಿಯಾಗುತ್ತಿರುವ ಸಂತೋಷ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

 

ಮುಂಬೈ: ಇತ್ತಿಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಬಾಲಿವುಡ್ ಸೆಲೆಬ್ರೆಟಿಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಆಲಿಯಾ ಭಟ್ ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಆಸ್ಪತ್ರೆಯ ಬೆಡ್ ನಲ್ಲಿ ಮಲಗಿ ತಮ್ಮ ಮುಂಬರುವ ಮಗುವಿನ ಅಲ್ಟ್ರಾಸೌಂಡ್ ಅನ್ನು ತೋರಿಸುವ ಪರದೆಯತ್ತ ನೋಡುವ ಚಿತ್ರವನ್ನು ಆಲಿಯಾ ಭಟ್ ಪೋಸ್ಟ್ ಮಾಡಿದ್ದಾರೆ. ಅಲ್ಲದೆ “ನಮ್ಮ ಮಗು.. ಕಮಿಂಗ್ ಸೂನ್” ಎಂದು ಬರೆದುಕೊಂಡಿದ್ದಾರೆ.

ಆಲಿಯಾ ಮತ್ತು ರಣಬೀರ್ ಈ ವರ್ಷ ಏಪ್ರಿಲ್ 14 ರಂದು ಬಾಂದ್ರಾದಲ್ಲಿರುವ ಆರ್‌ಕೆ ನಿವಾಸದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಅವರಿಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದರು.

29 ವರ್ಷದ ಆಲಿಯಾ ಭಟ್ ಅವರ ನಟನೆಯ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಡಾರ್ಲಿಂಗ್ಸ್, ತಕ್ತ್ ಮುಂತಾದ ಚಿತ್ರಗಳಲ್ಲಿ ಆಲಿಯಾ ನಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾಹ್ನವಿ ಕಪೂರ್‌ಗೆ ಸದಾ ನಗಿಸುವ ಹುಡುಗನೇ ಬೇಕಂತೆ!

Mon Jun 27 , 2022
ಬಾಲಿವುಡ್‌ನಲ್ಲಿ ಸ್ಟಾರ್‌ ಮಕ್ಕಳ ಹಾವಳಿಯೇ ಹೆಚ್ಚು. ಅದರಲ್ಲಿ ಸ್ಟಾರ್ ನಟಿ ಶ್ರೀದೇವಿ ಮತ್ತು ಸ್ಟಾರ್ ನಿರ್ಮಾಪಕ ಬೋನಿ ಕಪೂರ್ ಮಕ್ಕಳು ಕೂಡ ಇದ್ದಾರೆ. ಈಗಾಗಲೇ ಇವರ ಮೊದಲ ಮಗಳು ಜಾಹ್ನವಿ ಕಪೂರ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಸಾಲು, ಸಾಲು ಸಿನಿಮಾಗಳನ್ನು ಕೂಡ ಮಾಡುತ್ತಿದ್ದಾರೆ. ಶ್ರೀದೇವಿ ಸೌತ್ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಮಿಂಚಿದವರು. ಸ್ಟಾರ್ ನಟಿಯಾಗಿ ದಶಕಗಳ ಕಾಲ ಚಿತ್ರರಂಗವನ್ನು ಆಳಿದವರು. ಆದರೆ ಅವರ ಮಕ್ಕಳಿಗೆ ಇನ್ನೂ ಆ ಭಾಗ್ಯ […]

Advertisement

Wordpress Social Share Plugin powered by Ultimatelysocial