BLOODY ಮಾಫೀಯಾ….!-ಕಿಕ್‌ ಏರಿಸೋ RAW ಸ್ಟಾರ್ಸ್

ಸಿನಿಮಾದಲ್ಲಿ ಒಬ್ಬ ಸ್ಟಾರ್‌ ಇದ್ರೆನೇ ಧೂಳ್‌ ಧೂಳ್‌ ಇನ್ನು ಇಬ್ಬರು ಸ್ಟಾರ್‌ ನಟರು ಒಂದೇ ಸಿನಿಮಾದಲ್ಲಿ ಕೇಳೊಕೆ ಥ್ರೀಲ್‌ ಆಗ್ತಿದೆ ಅಲ್ವ. ಇನ್ನು ನೋಡುದ್ರೆ ಡಬಲ್‌ ಧಮಾಕ.  ವೊಡ್ಕ ಜೊತೆ ನೀರ್‌ ಕಾಂಬಿನೇಷನ್‌ ಹೇಗೊ ಈ ಚಿತ್ರದ ಸ್ಟಾರ್‌ ನಟರ  ಕಾಂಬಿನೇಷನ್‌ ಕೂಡ ಒಂತರ ಕಿಕ್‌ ಏರಿಸೊ raw ಇದ್ದಂಗೆ. ಎಸ್‌ ನಾವ್‌ ಈಗ ಹೇಳ್ತಿರೊದು ಲುಕ್‌ ಅಲ್ಲೇ ಲಕ್‌ ಹೊಡಿಸಿ,ಸ್ಟೈಲ್‌ ಅಲ್ಲೇ ಸ್ಟಾರ್ಡಂಮ್‌  ಗಿಟ್ಟಿಸಿಕೊಂಡ  badsha ಸುದೀಪ ಹಾಗೂ ಡೈಲಾಗ್‌ ನಿಂದಲೇ ಮೈ ಚಲಕದಿಂದ ಪುಳಕಗೊಳಿಸೊ  ಕಲಕಾರ ಉಪೇಂದ್ರ.

ಎಸ್‌ ಉಪ್ಪಿ ನಟಿಸಿ, ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ ಅದ್ಧೂರಿ, ಬಹುನಿರೀಕ್ಷಿತ ಸಿನಿಮಾ ‘ಕಬ್ಜ’ದ ಐದನೇ ಹಂತದ ಚಿತ್ರೀಕರಣ ಅಕ್ಟೋಬರ್ 04ರಿಂದ ಆರಂಭವಾಗುತ್ತಿದೆ.

ಸಿನಿ ಚಿತ್ರೀಕರಣಕ್ಕಾಗಿ ಮಿನರ್ವಾ ಮಿಲ್‌ನಲ್ಲಿ ಅದ್ಧೂರಿಯಾಗಿ ಸೆಟ್ ಹಾಕಲಾಗಿದ್ದು ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್ ನಟ ನವಾಬ್ ಶಾ ಸೇರಿದಂತೆ ಹಲವು ಖ್ಯಾತ ನಟರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಚಿತ್ರೀಕರಣಕ್ಕಾಗಿ ಕೆ.ಜಿ.ಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್  ನೇತೃತ್ವದಲ್ಲಿ ಸುಮಾರು ಒಂದು ತಿಂಗಳಿನಿಂದ ಮಿನರ್ವ ಮಿಲ್ ನಲ್ಲಿ ಅದ್ದೂರಿಯಾಗಿ ಸೆಟ್ ನಿರ್ಮಾಣವಾಗಿದೆ. ಇದೇ ಸೆಟ್ ನಲ್ಲಿ ಸುಮಾರು 42ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ರಿಯಲ್ ಸ್ಟಾರ್ ಉಪೇಂದ್ರ , ಬಾಲಿವುಡ್ ನಟ ನವಾಬ್ ಶಾ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಹಂತದ ಚಿತ್ರೀಕರಣ ಮುಗಿದರೆ, ಬಹುತೇಕ ಚಿತ್ರೀಕರಣ ಮುಗಿದಂತೆ.

ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ.ನಿರ್ದೇಶಕ ಆರ್.ಚಂದ್ರು ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯಾಂಗ್‌ badsha ಕಿಚ್ಚ‌ ಸುದೀಪ  ಬಾರ್ಗವ್‌ ಬಕ್ಷಿ  ಅವತಾರ ಕಾಣಿಸಿಕೊಳ್ಳಲಿದ್ದಾರೆ . ಕಿಚ್ಚನ ಡ್ರೆಸ್ಸಿಂಗ್‌ ಸ್ಟೈಲ್‌ ಅಂತಿದದಲ್ಲ ನೋಡುದ್ರೆ ಕಾಳದೊಗ್ಬೇಕು ಅದು ಅವರ  ಲಕ್ಷಣ .ಚಿತ್ರ ಬಿಡುಗಡೆಗೆ ಕರ್ನಾಟಕವಷ್ಟೇ ಅಲ್ಲದೇ ಇತರ ರಾಜ್ಯಗಳಲ್ಲೂ ಬುದ್ದಿವಂತನ ಪ್ಯಾನ್ಸ್‌ ಡೈಲಾಗ್‌ ಅಲ್ಲೇ ಡೈ ಹೊಡಿಸೊ ಉಪ್ಪಿ  ಸಿನಿಮಾಗೆ ತುದಿಗಾಲಿನಲ್ಲಿ ಕಾದಿದ್ದಾರೆ. ಕಬ್ಜ ಕನ್ನಡ ಸೇರಿದಂತೆ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ  ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

‘ಕಬ್ಜ’ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕತೆಯನ್ನು ಫೈನ್ ಟ್ಯೂನ್ ಮಾಡಿಕೊಟ್ಟಿರುವುದು ‘ಬಾಹುಬಲಿ’ಗೆ ಕತೆ ಬರೆದಿರುವ ವಿಜಯೇಂದ್ರ ಪ್ರಸಾದ್ .ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.. ಎ.ಜೆ.ಶೆಟ್ಟಿ ಛಾಯಾಗ್ರಹಣ ಹಾಗೂ  ಮಹೇಶ್ ಸಂಕಲನ ಮಾಡಿದ್ದು .ಉಪೇಂದ್ರ, ಕಿಚ್ಚ ಸುದೀಪ್, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವಾಬ್ ಶಾ, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಸುಬ್ಬರಾಜು ಮುಂತಾದವರಿದ್ದಾರೆ.

ಕಬ್ಜ ಸಿನಿಮಾ underworld ನ ಹೊಸ ರೂಪ ಪರಿಚಯಿಸಲಿದೆ. ಭೂಗತ ಲೋಕದ ಕರಾಳ ಸತ್ಯ ಕರಾಳವಾಗಿ ನಿಮ್ಮ ಮುಂದೆ ಬರಲು ಸಿದ್ದವಾಗಿದೆ. ಇನ್ನು ಈ ಚಿತ್ರದ 4 ಮೋಷನ್‌ ಪೊಸ್ಟರ್‌ ರಿಲೀಸ್‌ ಮಾಡಿದ್ದಾರೆ. ಆದ್ರು ಅಭಿಮಾನಿಗಳಲ್ಲಿ ಕೊಂಚ ಬೇಸರವಿದೆ ಯಾಕೆ ಇನ್ನು ಕಬ್ಜ ಚಿತ್ರತಂಡದಿಂದ ಟ್ರೇಲರ್‌ ಟೀಸರ್‌ ಯಾವುದೇ ಅಪ್ಡೇಟ್ಸ್‌ ಕೊಡುತ್ತಿಲ್ಲ ಬರಿ ಪೊಸ್ಟರ್ ಗಳಿಂದ ಅಭಿಮಾನಿಗಳ ಹೊಟ್ಟೆ ತುಂಬಿಸುತ್ತಿದ್ದಾರೆ ಎನ್ನುವ ಸಿನಿಪ್ರೀಯರೇ ನಿಮಗಿದೆ ಐಸ್‌ ಅಂತೆ ಮೆಲ್ಟ್‌ ಆಗುವ ಐಸ್‌ ಕೇಕ್‌ ಸುದ್ದಿ .ಹೌದು ಈ ದೀಪಾವಳಿಗೆ ಟೀಸರ್‌  ಬಿಡುಗಡೆ ಮಾಡುವುದಾಗಿ  ಚಿತ್ರತಂಡ ಘೊಷಿಸಿದ್ದಾರೆ .ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಪುಲ್ ಸ್ಟಾಪ್‌  ಕೊಡಲು ಕಬ್ಜ ಇಸ್‌  ರೇಡಿ.

 

Please follow and like us:

Leave a Reply

Your email address will not be published. Required fields are marked *

Next Post

ಗುಳಿಕೆನ್ನೆಯ “ಬುಲ್‌ ಬುಲ್‌” ನ ಹೊಸ ಸುದ್ದಿ ಏನ್ ಗೊತ್ತಾ..?

Sun Oct 3 , 2021
ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೌದು ಸಿನಿಪ್ರೀಯರ ಮನಸ್ಸು ಗೆದ್ದ ಗುಳಿಕೆನ್ನೆಯ ಹುಡುಗಿ 29 ರ ವಂಸತಕ್ಕೆ ಕಾಲಿಟ್ಟಿದಾರೆ. ಇತ್ತಿಚಿಗೆಷ್ಟೆ ಐ ಲವ್‌ ಯೂ ಮೂವಿಯಲ್ಲಿ ನಟ ಉಪ್ಪಿ ಸಿನಿಮಾದ ಮೂಲಕ ಸದ್ದು ಮಾಡಿದ್ದರು. ಅದಷ್ಟೇ ಅಲ್ಲದೇ ಹಲವು ಖಾಸಗಿ ವಾಹಿನಿಗಳ ತೀರ್ಪುಗಾರರಾಗಿ ಕಾಮಿಡಿ ಶೋಗಳಲ್ಲಿ ಮಿಂಚಿದ ತಾರೆ ಇವರು. ಇನ್ನೂ ರಚ್ಚು ಸಿನಿಮಾದ ಅನೇಕ ಹಾಡುಗಳಂತು ಬಂದಕ್ಕಿಂತ ಒಂದು ಫುಲ್‌ ಫೇಮಸ್ಸ್. ದರ್ಶನ ಚಿತ್ರದ ಬುಲ್‌ […]

Advertisement

Wordpress Social Share Plugin powered by Ultimatelysocial