ಅಲೋವೆರಾದ ಆರೋಗ್ಯ ಪ್ರಯೋಜನಗಳು !!!!

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ : ಅಲೋವೆರಾ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಮಟ್ಟವನ್ನು ಹೆಚ್ಚಿಸುತ್ತದೆ.

ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ: ಅಧ್ಯಯನದ ಪ್ರಕಾರ, ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ಅಲೋವೆರಾ ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಕಾರಿ: ಅಲೋವೆರಾವನ್ನು ಸೇವಿಸುವುದರಿಂದ ವ್ಯಕ್ತಿಯ ತೂಕವನ್ನು ನಿಯಂತ್ರಿಸಬಹುದು.  ಇದರ ಜೆಲ್ ನಿರ್ವಿಶೀಕರಣ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ . ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲೋವೆರಾವನ್ನು ಹೇಗೆ ಸೇವಿಸುವುದುಅಲೋವೆರಾ ಜ್ಯೂಸ್​:ಅಲೋವೆರಾವನ್ನು ಸೇವಿಸಲು ಸುಲಭವಾದ ಮಾರ್ಗವೆಂದರೆ ಅದರ ಜ್ಯೂಸ್.  ಅಲೋವೆರಾ ಎಲೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಎಲೆಯ ಮೇಲಿನ ಹಸಿರು ಪದರವನ್ನು ತೆಗೆದುಹಾಕಿ. ನಂತರ ಜೆಲ್ ಅನ್ನು ತೆಗೆಯಿರಿ. ಜೆಲ್ ಅನ್ನು ತೊಳೆಯಿರಿ ಮತ್ತು ಅದನ್ನು ಸೋಸಿ. ಬಳಿಕ ಎಳನೀರು, ಸ್ವಲ್ಪ ಜೇನುತುಪ್ಪ ಹಾಕಿ ಜ್ಯೂಸ್​ ಮಾಡಿ. ಇದರ ಹೊರತಾಗಿ ಸೇಬು ಅಥವಾ ಸೌತೆಕಾಯಿ ಜ್ಯೂಸ್​ ಅನ್ನು ಇದಕ್ಕೆ ಸೇರಿಸಬಹುದು.

ಸಲಾಡ್‌ಗೆ ಸೇರಿಸಿ :ಅಲೋವೆರಾ ಎಲೆಗಳನ್ನು ತೊಳೆದು, ಕತ್ತರಿಸಿ ಸಲಾಡ್ ಆಗಿ ಸೇರಿಸಿ ಅವುಗಳನ್ನು ಸೇವಿಸಬಹುದು. ಅಲೋವೆರಾ ಜೆಲ್ ಅನ್ನು ಸಲಾಡ್​ಗೆ ಸೇರಿಸಬಹುದು. ಇದರ ಜೆಲ್​ ಅನ್ನು  ಸುಲಭವಾಗಿ ಆಲಿವ್ ಎಣ್ಣೆ, ವಿನೆಗರ್ ನಂತಹ ಪದಾರ್ಥಗಳೊಂದಿಗೆ ಬೆರೆಸಬಹುದು.

 ಐಸ್ ಕ್ಯೂಬ್: ಅಲೋವೆರಾ ಜೆಲ್ ಅನ್ನು ಐಸ್ ಕ್ಯೂಬ್ ಟ್ರೇಗೆ ಸುರಿಯಬಹುದು ಮತ್ತು ಫ್ರಡ್ಜ್​ ಅಲ್ಲಿ ಇಟ್ಟು ಬಳಸಬಹುದು. ಈ ರೀತಿ ಐಸ್​ ಕ್ಯೂಬ್​ ಅನ್ನು ಮೊಡವೆಗಳ ಮೇಲೆ ಇಡುವುದರಿಂದ ಮೊಡವೆ ಬೇಗ ಗುಣವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

RED WINE:ಚರ್ಮಕ್ಕಾಗಿ ರೆಡ್ ವೈನ್, ಮುಖದ ತ್ವಚೆಗಾಗಿ ಇದನ್ನು ಬಳಸುವ ವಿಧಾನಗಳು;

Wed Jan 12 , 2022
ಕೆಂಪು ವೈನ್ ಅತ್ಯಂತ ಜನಪ್ರಿಯ ಆಲ್ಕೊಹಾಲ್ಯುಕ್ತ ಪಾನೀಯಗಳಲ್ಲಿ ಒಂದಾಗಿದೆ. ಅನಾದಿ ಕಾಲದಿಂದಲೂ ಮನುಷ್ಯರು ಮಾಣಿಕ್ಯ ಕೆಂಪು ವಿನೋವನ್ನು ಸೇವಿಸುತ್ತಿದ್ದಾರೆ. ವೈನ್ ಪ್ರಿಯರಿಗೆ ವಿರಾಮ ಮತ್ತು ವಿಶ್ರಾಂತಿಯ ಸಾಧನವಾಗಿರುವ ಪಾನೀಯವು ಹಲವಾರು ಆರೋಗ್ಯ ಪ್ರಯೋಜನಗಳೊಂದಿಗೆ ಬರುತ್ತದೆ. ಕೆಂಪು ವೈನ್‌ನ ಕೆಲವು ಪ್ರಸಿದ್ಧ ಪ್ರಯೋಜನಗಳು ಪಾನೀಯದಲ್ಲಿ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಗೆ ಸಲ್ಲುತ್ತದೆ. ಚರ್ಮಕ್ಕೆ ಉತ್ತಮವಾದುದಲ್ಲದೆ, ಕೆಂಪು ವೈನ್ ಹೃದಯದ ಆರೋಗ್ಯಕರ ಮತ್ತು ತೂಕ ನಷ್ಟದ ಆಹಾರದಲ್ಲಿ ಪಾಲ್ಗೊಳ್ಳಲು ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ ಎಂದು […]

Advertisement

Wordpress Social Share Plugin powered by Ultimatelysocial