ಆರ್ಯನ್ ಡ್ರಗ್ ಪ್ರಕರಣದಲ್ಲಿ 18 ಕೋಟಿ ರೂ. ಡೀಲ್.!?

ಮಾದಕವಸ್ತು ಹಗರಣದಲ್ಲಿ ಬಂತನಾಗಿರುವ ಬಾಲಿವುಡ್ ನಟ ಶಾರುಖ್ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದಲ್ಲಿ 18 ಕೋಟಿ ರೂ.ಗಳ ಡೀಲ್ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಆರ್ಯನ್ ಖಾನ್ ಪ್ರಕರಣದಲ್ಲಿ ದಿನೇ ದಿನೇ ಹೊಸ ತಿರುವುಗಳು ಎದುರಾಗುತ್ತಿವೆರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ದಳ(ಎನ್ಸಿಬಿ) ಅಕಾರಿ ಸಮೀರ್ ವಾಖಡೆ ವಿರುದ್ಧ ಮಹಾರಾಷ್ಟ್ರದ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದರು.

ಈಗ ಪ್ರಭಾಕರ್ ಸಾಲಿ ಎಂಬುವರು ಹೊಸ ಆರೋಪ ಮಾಡಿದ್ದು, ಖಾಸಗಿ ಪತ್ತೆದಾರ ಕೆ.ಪಿ.ಗೋಸಾವಿ ಮತ್ತು ಸ್ಯಾಮ್ ಡಿಸೋಜ ಎಂಬುವರ ನಡುವೆ 18 ಕೋಟಿ ರೂ.ಗಳ ಡೀಲ್ ನಡೆದಿದೆ. ಅದರಲ್ಲಿ 8 ಕೋಟಿ ರೂ.ಗಳನ್ನು ಸಮೀರ್ ವಾಖಡೆ ಅವರಿಗೆ ನೀಡಲು ಸ್ಯಾಮ್ ಡಿಸೋಜ ಅವರಿಗೆ ಕೊಡಲಾಗಿತ್ತು.

ಅಂತಿಮವಾಗಿ ಹಣ ಸಮೀರ್ ಅವರಿಗೆ ತಲುಪಿದೆ ಎಂದು ಹೇಳಿದ್ದಾರೆ.
ಆದರೆ ಆರೋಪವನ್ನು ಎನ್ಸಿಬಿ ತಳ್ಳಿ ಹಾಕಿದೆ. ಒಂದು ವೇಳೆ ಹಣ ಪಡೆದಿದ್ದೇ ಆಗಿದ್ದರೆ ಆರ್ಯನ್ ಖಾನ್ ಜೈಲಿನಲ್ಲಿ ಇರುತ್ತಿರಲಿಲ್ಲ. ಆಧಾರ ರಹಿತವಾದ ಆರೋಪಗಳನ್ನು ಮಾಡಿ ಎನ್ಸಿಬಿ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

ರೋಮ್‌ನಲ್ಲಿ ಅ. 30ರಿಂದ ಜಿ-20 ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

Sun Oct 24 , 2021
ನವದೆಹಲಿ: ಇಟಲಿಯ ರಾಜಧಾನಿ ರೋಮ್‌ನಲ್ಲಿ ಇದೇ 30ರಿಂದ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಅಫ್ಗನ್‌ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಜಾಗತಿಕವಾಗಿ ಸಂಘಟಿತ ಕಾರ್ಯತಂತ್ರದ ಅವಶ್ಯಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ ಎಂದು ಮೂಲಗಳು ಭಾನುವಾರ ಹೇಳಿವೆ. ಈ ವೇಳೆ ಹವಾಮಾನ ಬದಲಾವಣೆ ಮತ್ತು ಕೋವಿಡ್‌ ಪಿಡುಗಿನ ಸವಾಲುಗಳನ್ನು ಎದುರಿಸುವ ಬಗ್ಗೆಯೂ ಮಾತನಾಡಲಿದ್ದಾರೆ ಎಂದೂ ಹೇಳಲಾಗಿದ ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial