ROCKING STAR YASH:ಮಗಳಿಗೆ ಅ,ಆ,ಇ,ಈ ಕಲಿಸಿದ ರಾಕಿಂಗ್ ಸ್ಟಾರ್ ಯಶ್;

ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್‌ ಅವರಂತೆಯೇ ಅವರ ಮಕ್ಕಳು ಕೂಡ ಫೇಮಸ್. ಐರಾ ಮತ್ತು ಯಥರ್ವ್ ಇಬ್ಬರು ಕೂಡ ಕರುನಾಡ ಜನರ ಮುದ್ದಿನ ಮಕ್ಕಳು. ತಮ್ಮ ಮಕ್ಕಳು ಫೋಟೊ ಮತ್ತು ವಿಡಿಯೋಗಳನ್ನು ಯಶ್ ಹಾಗು ರಾಧಿಕ ಪಂಡಿತ್ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

KGF 2 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಅಧೀರ ಸಂಜಯ್ ದತ್

ಐರಾ ಮತ್ತು ಯಥರ್ವ್ ಇಬ್ಬರ ಮುದ್ದಾದ ಫೋಟೊ ಮತ್ತು ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಮಕ್ಕಳ ಹೊಸ ವಿಡಿಯೋಗಳು ರಿವೀಲ್ ಆಗುತ್ತಲೇ, ಸಿಕ್ಕಪಟ್ಟೆ ವೈರಲ್ ಆಗಿ ಬಿಡುತ್ತವೆ. ಅಂತೆಯೇ ಈಗ ಯಶ್‌ ಮತ್ತು ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಈ ವಿಡಿಯೋ ವಿಶೇಷತೆ ಇಂದ ಕೂಡಿದೆ. ಯಾಕೆಂದರೆ ಯಶ್ ಈ ವಿಡಿಯೋದಲ್ಲಿ ತಮ್ಮ ಮಗಳಿಗೆ ಕನ್ನಡ ಪಾಠ ಮಾಡಿದ್ದಾರೆ. ಐರಾ ಕೂಡ ಮುದ್ದಾಗಿ ಕನ್ನಡ ಅಕ್ಷರಗಳನ್ನು ಹೇಳಿದ್ದಾಳೆ.

ಮಗಳಿಗೆ ಕನ್ನಡ ಪಾಠ ಮಾಡಿದ ರಾಕಿಂಗ್ ಸ್ಟಾರ್ ಯಶ್!ಯಶ್ ಮಗಳು ಐರಾ ಜೊತೆಗಿನ ವಿಡಿಯೋ ಒಂದನ್ನು ರಾಧಿಕಾ ಪಂಡಿತ್‌ ಹಂಚಿಕೊಂಡಿದ್ದಾರೆ. ರಾಧಿಕಾ ಅವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಅವರು ತಮ್ಮ ಮಗಳು ಐರಾಗೆ ಅ,ಆ,ಇ,ಈ ಹೇಳಿ ಕೊಡುತ್ತಿದ್ದಾರೆ. ಐರಾ ಕೂಡ ಈಗಾಗಲೇ ಕೊಂಚ ಕೊಂಚ ಕಲಿತಿದ್ದು, ಅಪ್ಪನ ಜೊತೆಗೆ ಅ,ಆ,ಇ,ಈ ಯನ್ನು ಹೇಳಿದ್ದಾಳೆ.

ರಾಧಿಕಾ ಕೊಂಕಣಿ ಕಲಿಸಿದ್ದಕ್ಕೇ ಗರಂ ಆಗಿದ್ದ ನೆಟ್ಟಿಗರು!

ಈ ಹಿಂದೆ ರಾಧಿಕಾ ಅವರು ಮಗಳು ಐರಾಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಐರಾ ಅಪ್ಪಾ ಮತ್ತು ಅಮ್ಮನ್ನು ಗುರುತಿಸಿದ್ದಳು. ವಿಡಿಯೋದಲ್ಲಿ ರಾಧಿಕಾ ಅವರು ಅಪ್ಪಾ ಎಲ್ಲಿ ಹೇಳು, ಅಮ್ಮ ಎಲ್ಲಿ ಹೇಳು ಎಂದು ಮಗಳನ್ನು ಕೊಂಕಣಿಯಲ್ಲಿ ಕೇಳಿದ್ದರು. ಆಗ ಸಾಕಷ್ಟು ಜನ ಇದನ್ನು ವಿರೋಧಿಸಿದ್ದರು. ಮಗುವಿಗೆ ಮೊದಲು ಕನ್ನಡ ಕಲಿಸಿ ಎಂದು ಕಮೆಂಟ್‌ ಮಾಡಿದ್ದರು. ಆದರೆ ಈಗ ಐರಾ ಸರಾಗವಾಗಿ ಕನ್ನಡ ಮಾತನಾಡುವುದನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

ಮ್ಯೂಜಿಕ್‌ ಹಾಕಿ ಡಾನ್ಸ್‌ ಮಾಡಿದ ಯಥರ್ವ್!

ಐರಾ ಮತ್ತು ಯಥರ್ವ್ ಇಬ್ಬರ ವಿಡಿಯೋಗಳು ವೈರಲ್ ಆಗುತ್ತವೆ. ಇತ್ತೀಚೆಗೆ ಪುಟ್ಟ ಪೋರ ಯಥರ್ವ್ ಮ್ಯೂಜಿಕ್‌ ಹಾಕಿ ಡಾನ್ಸ್ ಮಾಡಿದ ವಿಡಿಯೋ ಕೂಡ ಈ ಹಿಂದೆ ರಾಧಿಕಾ ಪಂಡಿತ್‌ ಹಂಚಿಕೊಂಡಿದ್ದರು. ಗೂಗಲ್‌ಗೆ ಮ್ಯೂಜಿಕ್‌ ಪ್ಲೇ ಮಾಡಲು ಹೇಳಿ ಯಥರ್ವ್ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಡಾನ್ಸ್‌ ಮಾಡಿದ್ದ. ಯಥರ್ವ್ ಜೊತೆಗೆ ಐರಾ ಕೂಡ ಡಾನ್ಸ್‌ ಮಾಡಿದ್ದಳು. ಈ ವಿಡಿಯೋಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಸೆಲೆಬ್ರೇಷನ್ ಗೆ ಬ್ರೇಕ್ ಹಾಕಿದ ನಟ ನಿಖಿಲ್ ಕುಮಾರಸ್ವಾಮಿ;

Sat Jan 22 , 2022
ಬೆಂಗಳೂರು : ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವದು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹುಟ್ಟುಹಬ್ಬಕ್ಕಿಂತ ಒಂದು ದಿನ ಮುಂಚಿತವಾಗಿ, ಅಂದರೆ ಜ.21ರಂದು ನಿಖಿಲ್ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಅಭಿಮಾನಿಗಳು, ಕಾರ್ಯಕರ್ತರು ಕೋವಿಡ್ ಸಂಕಷ್ಟದಲ್ಲಿರುವವರಿಗೆ ತಮ್ಮ […]

Advertisement

Wordpress Social Share Plugin powered by Ultimatelysocial