ಸಾರ್ವಜನಿಕರ ಹಿತದೃಷ್ಟಿ ಮತ್ತು ಜನರಿಂದ ಹೆಚ್ಚಿನ ಬೇಡಿಕೆ!

ಬೆಂಗಳೂರು,ಏ.8- ಸಾರ್ವಜನಿಕರ ಹಿತದೃಷ್ಟಿ ಮತ್ತು ಜನರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕಡಿತಗೊಳಿಸಿರುವ ಶೇ.10ರಷ್ಟು ನೋಂದಣಿ ಶುಲ್ಕದ ಮಾರ್ಗಸೂಚಿ ದರ ವನ್ನು ಪುನಃ ಮೂರು ತಿಂಗಳು ವಿಸ್ತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಘೋಷಣೆ ಮಾಡಿರುವ ಅವಧಿಯು ಮಾ.31ಕ್ಕೆ ಮುಕ್ತಾಯವಾಗಲಿದೆ. ಸಾರ್ವಜನಿಕರಿಂದ ಭಾರೀ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಬೇಕೆಂಬ ಚಿಂತನೆಯಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಆದೇಶ ಹೊರಡಿಸುತ್ತೇವೆ ಎಂದರು.

ಮಾ.31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂದಾಯ ಇಲಾಖೆ ಗುರಿ ಮೀರಿದ ಸಾಧನೆ ಮಾಡಿದೆ. ಕಳೆದ ವರ್ಷ ನಾವು 1200 ಕೋಟಿ ಆದಾಯ ಗುರಿಯನ್ನು ನೀಡಿದ್ದೆವು. ಆದರೆ ನಮ್ಮ ಅಕಾರಿಗಳು 1300 ಕೋಟಿ ಆದಾಯವನ್ನು ಸಂಗ್ರಹಿಸಿದ್ದಾರೆ. ಇದು ಗುರಿ ಮೀರಿದ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂದಾಯ ಇಲಾಖೆಯಲ್ಲಿ ನಾವು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಇಲಾಖೆಯನ್ನು ಜನೋಪಯೋಗಿ ಮಾಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. OnlineCasino is the best online casino in deutschland where you can play all https://clickmiamibeach.com/ your favorite online casino games free of charge without any hidden gaming software or restrictions. ಇದಕ್ಕಾಗಿಯೇ ನೋಂದಣಿ ಶುಲ್ಕದ ಮಾರ್ಗಸೂಚಿ ದರವನ್ನು ಶೇ.10ರಷ್ಟು ಕಡಿಮೆ ಮಾಡಿದ್ದೆವು. ಈಗ ಇಲಾಖೆಯು ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.ಐಟಿಬಿಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿಗೆ ಚೀನಾ-ಅಮೆರಿಕ ಸ್ಪರ್ಧೆಯೇ ಹೊರತು ಬೇರೆ ನಗರಗಳಲ್ಲ ಎಂದು ಅಶೋಕ್ ತಿರುಗೇಟು ನೀಡಿದರು. ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುತ್ತದೆ. ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ಐಟಿಬಿಟಿ, ಬಾಹ್ಯಾಕಾಶ, ರಕ್ಷಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ. ನಮಗೆ ಸ್ಪರ್ಧೆಯಿದ್ದರೆ ಅಮೆರಿಕ, ಚೀನಾ ಹೊರತು, ಹೈದರಾಬಾದ್-ಚೆನ್ನೈ ನಗರಗಳಲ್ಲ ಎಂದರು.

ದೇಶದ ಬೇರೆ ಬೇರೆ ಭಾಗಗಳಲ್ಲಿ ಉದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಾರೆ. ಆದರೆ ನಮ್ಮಲ್ಲಿ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು ಇರುವುದರಿಂದ ಇಲ್ಲಿ ಮುಕ್ತವಾಗಿ ಬರುತ್ತಾರೆ. ಬೇರೆ ಕಡೆ ಭಾಷೆ ಸಮಸ್ಯೆಯಿದ್ದರೆ ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದರು.
ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಬದ್ದವಾಗಿದೆ. ಹಿಂದಿನ ಯಾವ ಸರ್ಕಾರಗಳು ಕೂಡ ನಗರ ಅಭಿವೃದ್ಧಿಗೆ ನಾವು ಕೊಟ್ಟಷ್ಟು ಕೊಡುಗೆಗಳನ್ನು ಕೊಟ್ಟಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರಗಳು ನಗರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದವು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಹೆಚ್ಚಿನ ಅನುದಾನವನ್ನು ಕೊಟ್ಟಿದ್ದಾರೆ.ಸ ಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಸಹ ಸರಿಪಡಿಸಲಾಗುವುದು. ಈಗಲೂ ಕೂಡ ಬೆಂಗಳೂರು ಉದ್ಯಮಿಗಳ ಪಾಲಿಗೆ ನಂ.1 ನಗರ ಎಂದು ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಹಳ ವರ್ಷಗಳಿಂದಲೂ ಲವಂಗ ತನ್ನ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ.

Fri Apr 8 , 2022
ಕೆಮ್ಮಿಗೆ, ಹೊಟ್ಟೆಯ ಸಮಸ್ಯೆಗೆ, ವಾಂತಿ ಮತ್ತು ಭೇಧಿ ನಿವಾರಣೆಗೆ ಲವಂಗದ ಪ್ರಭಾವದಿಂದ ಅತ್ಯಂತ ಸರಳವಾಗಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ಸಾಧಾರಣವಾಗಿ ಲವಂಗವನ್ನು ಗಿಡಮೂಲಿಕೆಯ ರೂಪದಲ್ಲಿ ಮಾರಾಟ ಮಾಡುತ್ತಾರೆ. ಲವಂಗ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದರೂ ಸಕಾರಾತ್ಮಕ ಹಾಗು ಕೆಲವು ಅಡ್ಡ ಪರಿಣಾಮಗಳನ್ನು ಬೀರುವಂತಹ ಕಾರಣಗಳಿಂದ ಲವಂಗದ ಬಳಕೆಯಲ್ಲಿ ಸ್ವಲ್ಪ ಜಾಗರೂಕತೆ ವಹಿಸಬೇಕಾಗುತ್ತದೆ. ಲವಂಗವು ಆಹಾರ ಮತ್ತು ಪಾನೀಯಗಳಲ್ಲಿ ಬಳಸುವ ಒಂದು ಸುವಾಸನೆಯುಕ್ತ ಮಸಾಲೆ ಪದಾರ್ಥವಾಗಿದೆ. ಟೂತ್ಪೇಸ್ಟ್, ಸಾಬೂನುಗಳು ಮತ್ತು ಸೌಂದರ್ಯವರ್ಧಕಗಳಂತಹ […]

Advertisement

Wordpress Social Share Plugin powered by Ultimatelysocial