ಅತಿಯಾಗಿ ಪ್ರೋಟೀನ್ ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ! ಏನೆಲ್ಲ ಸಮಸ್ಯೆ ಆಗುತ್ತೆ?

ಒಬ್ಬ ಮನುಷ್ಯ ಸಾಮಾನ್ಯವಾಗಿ ಅವನ ದೇಹದ ತೂಕಕ್ಕೆ ಪ್ರತಿ ಕಿಲೋಗೆ 0.8 ಗ್ರಾಂ ಪ್ರೋಟೀನ್ (Protein) ತಿನ್ನಬೇಕು ಅಂದು ವೈದ್ಯರು (Doctor) ಹೇಳುವುದನ್ನು ಕೇಳಿರುತ್ತೇವೆ. ಆರೋಗ್ಯಕರವಾಗಿರಲು ಮತ್ತು ಸದೃಢವಾಗಿರಲು (Good Health) ಪ್ರಯತ್ನಿಸುತ್ತಿರುವ ಎಲ್ಲರಿಗೂ ಇದು ಅತ್ಯಗತ್ಯ.
ನೀವು ನಿಮ್ಮ ದೇಹದ ತೂಕ (Body Weight) ಕಡಿಮೆ ಮಾಡಿಕೊಳ್ಳುತ್ತಿದ್ದರೆ (Reduce Weight) ಮತ್ತು ನಿಮ್ಮ ಸ್ನಾಯು ದ್ರವ್ಯರಾಶಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಇದರ ಪ್ರಮಾಣವು 1.5 ಗ್ರಾಂ ಗಳಿಗೆ ಹೆಚ್ಚಿಸಿಕೊಳ್ಳಬಹುದು. ಅಮೃತವು ಸಹ ಹೆಚ್ಚಾದರೆ ಅದು ಸಹ ವಿಷವಾಗುತ್ತದೆ ಎಂಬಂತೆ ಯಾವುದು ಜಾಸ್ತಿಯಾಗಬಾರದು, ಹಾಗೆಯೇ ಪ್ರೋಟೀನ್ ಸಹ.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದು ಅತ್ಯಗತ್ಯ, ಏಕೆಂದರೆ ಇದು ಜೀವಕೋಶಗಳನ್ನು ಸರಿಪಡಿಸಲು ಮತ್ತು ಸ್ನಾಯು ದ್ರವ್ಯರಾಶಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಆದರೆ ಕೆಲವೊಮ್ಮೆ, ಅವಶ್ಯಕತೆಗೆ ಮೀರಿ ಪ್ರೋಟೀನ್ ಅನ್ನು ನಾವು ಸೇವಿಸಿದರೆ, ಅದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಗಮನದಲ್ಲಿರಬೇಕು. ನೀವು ಹೆಚ್ಚು ಹೆಚ್ಚು ಪ್ರೋಟೀನ್ ಸೇವಿಸುತ್ತಿದ್ದರೆ ಸಂಭವಿಸಬಹುದಾದ 5 ಅಸ್ವಸ್ಥತೆಗಳು ಇಲ್ಲಿವೆ ನೋಡಿ.

1. ನೀವು ತುಂಬಾ ಬಾಯಾರಿಕೆ ಅನುಭವಿಸುತ್ತೀರಿ

ಅತಿಯಾದ ಪ್ರೋಟೀನ್ ಸೇವನೆಯು ದೇಹದ ನೀರಿನ ಬೇಡಿಕೆಯನ್ನು ಹೆಚ್ಚಿಸಬಹುದು. ಪ್ರೋಟೀನ್ ಸೇವನೆಗೆ ಅನುಗುಣವಾಗಿ ನೀವು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯದಿದ್ದರೆ, ನೀವು ಯಾವಾಗಲೂ ಬಾಯಾರಿಕೆ ಅನುಭವಿಸಬಹುದು. ರಕ್ತದಲ್ಲಿ ಅತಿಯಾದ ಸಾರಜನಕದ ಉಪಸ್ಥಿತಿಯಿಂದಾಗಿ ಇದು ಸಂಭವಿಸುತ್ತದೆ.

ಪ್ರೋಟೀನ್ ನ ಒಂದು ಘಟಕವೆಂದರೆ ನೈಟ್ರೋಜನ್ ಮತ್ತು ಅದರ ಅತಿಯಾದ ಸೇವನೆಯು ನಿಮ್ಮ ಮೂತ್ರಪಿಂಡವನ್ನು ಅದನ್ನು ಪದೇ ಪದೇ ಖಾಲಿ ಮಾಡಲು ಹೆಚ್ಚಿನ ಪ್ರಯತ್ನ ಮಾಡುವಂತೆ ಒತ್ತಾಯಿಸುತ್ತದೆ. ಇದರ ಪರಿಣಾಮವಾಗಿ, ಪದೇ ಪದೇ ಮೂತ್ರ ವಿಸರ್ಜನೆಗೆ ನೀವು ಹೋಗುತ್ತೀರಿ ಮತ್ತು ನೀವು ನಿರ್ಜಲೀಕರಣವನ್ನು ಸಹ ಅನುಭವಿಸುತ್ತೀರಿ.

2. ನೀವು ದುರ್ಬಲರಾಗುತ್ತೀರಿ ಮತ್ತು ತಲೆನೋವಿನಿಂದ ಬಳಲುತ್ತೀರಿ

ನಿರ್ಜಲೀಕರಣದ ಅಡ್ಡ ಪರಿಣಾಮಗಳಲ್ಲಿ ಮುಖ್ಯವಾದವುಗಳು ಒಂದು ದುರ್ಬಲರಾಗುವುದು ಮತ್ತೊಂದು ತಲೆನೋವು ಬರುವುದು. ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರಿನ ಕೊರತೆಯು ನಮ್ಮನ್ನು ದುರ್ಬಲರನ್ನಾಗಿಸುತ್ತದೆ ಮತ್ತು ನಮ್ಮ ತಲೆನೋವಿಗೆ ಕಾರಣವಾಗುತ್ತದೆ. ಇದು ಕಡಿಮೆ ಕಾರ್ಬ್ಸ್ ಸೇವನೆ ಅಥವಾ ಕಾರ್ಬ್ಸ್ ಅನ್ನು ಪ್ರೋಟೀನ್ ನೊಂದಿಗೆ ಬದಲಾಯಿಸುವುದು ಸಹ ಕಾರಣವಾಗಿರಬಹುದು.

ದೇಹವು ಶಕ್ತಿಗಾಗಿ ಕಾರ್ಬ್ಸ್ ಅನ್ನು ಪಡೆಯದಿದ್ದಾಗ, ಅದು ಕೀಟೋಸಿಸ್ ಪ್ರಕ್ರಿಯೆಗೆ ಹೋಗುತ್ತದೆ, ಅಲ್ಲಿ ಅದು ಸಂಗ್ರಹಿಸಿದ ಕೊಬ್ಬನ್ನು ಶಕ್ತಿಗಾಗಿ ಬಳಸಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು ನಿಮ್ಮನ್ನು ದುರ್ಬಲಗೊಳಿಸುತ್ತದೆ ಮತ್ತು ನಿಮ್ಮ ತಲೆನೋವಿಗೂ ಸಹ ಇದು ಕಾರಣವಾಗಬಹುದು.

3. ನಿಮ್ಮ ಉಸಿರು ದುರ್ವಾಸನೆ ಬೀರುತ್ತದೆ

ಹೆಚ್ಚಿನ ಪ್ರೋಟೀನ್ ಆಹಾರವು ನಿಮ್ಮ ಉಸಿರಾಟವನ್ನು ದುರ್ವಾಸನೆ ಬೀರುವಂತೆ ಮಾಡುತ್ತದೆ. ಹೆಚ್ಚು ಪ್ರೋಟೀನ್ ಸೇವನೆಯು ನಿಮ್ಮ ಉಸಿರನ್ನು ಕೊಳೆತ ಹಣ್ಣಿನಂತೆ ವಾಸನೆ ಬರುವಂತೆ ಮಾಡುತ್ತದೆ, ಇದು ಕೀಟೋಸಿಸ್ ಪ್ರಕ್ರಿಯೆಯಿಂದಾಗಿ ಸಂಭವಿಸುತ್ತದೆ. ಕೀಟೋಸಿಸ್ ಪ್ರಕ್ರಿಯೆಯ ಆರಂಭವು ಉಸಿರಿನಲ್ಲಿ ಅಸಿಟೋನ್ ರಚನೆಗೆ ಕಾರಣವಾಗುತ್ತದೆ.

ಇದು ನಿಮ್ಮ ಉಸಿರನ್ನು ವಾಸನೆಗೀಡು ಮಾಡುತ್ತದೆ. ಇದಲ್ಲದೆ, ಪ್ರೋಟೀನ್ ನಲ್ಲಿ ಎರಡು ಅಮೈನೋ ಆಮ್ಲಗಳಿವೆ, ಅದು ವಾಸನೆಯ ಉಸಿರಾಟಕ್ಕೆ ಕಾರಣವಾಗಬಹುದು. ನೀವು ನೀರು ಕುಡಿದರೂ ಅಥವಾ ಪುದೀನಾವನ್ನು ಅಗಿಯುತ್ತಿದ್ದರೂ ಈ ವಾಸನೆ ಹೋಗುವುದಿಲ್ಲ.

4. ಇದು ಮಲಬದ್ಧತೆಗೆ ಕಾರಣವಾಗಬಹುದು

ಪ್ರೋಟೀನ್ ಭರಿತ ಆಹಾರಗಳು ನೀವು ಚೆನ್ನಾಗಿ ಮಲಮೂತ್ರವನ್ನು ಮಾಡಲು ಅಗತ್ಯವಿರುವ ಫೈಬರ್ ಅನ್ನು ಹೊಂದಿರುವುದಿಲ್ಲ. ಕಾರ್ಬೋಹೈಡ್ರೇಟ್ ಗಳು ಫೈಬರ್ ಅನ್ನು ಹೊಂದಿರುತ್ತವೆ. ನೀವು ಸಾಕಷ್ಟು ಕಾರ್ಬೋಹೈಡ್ರೇಟ್ ಗಳನ್ನು ಸೇವಿಸದಿದ್ದರೆ ಮತ್ತು ಪ್ರೋಟೀನ್ ಅನ್ನು ಮಾತ್ರ ತೆಗೆದುಕೊಂಡಿದ್ದರೆ, ನೀವು ದಿನವಿಡೀ ಮಲಬದ್ಧತೆಯನ್ನು ಅನುಭವಿಸುತ್ತೀರಿ. ಶಕ್ತಿಯುತವಾಗಿರಲು ಮತ್ತು ನಿಯಮಿತವಾಗಿ ನೀವು ಮಲಮೂತ್ರವನ್ನು ಮಾಡಲು ಸ್ವಲ್ಪ ಪ್ರಮಾಣದ ಕಾರ್ಬ್ ಸೇವನೆ ಅತ್ಯಗತ್ಯ.

5. ನೀವು ತೂಕವನ್ನು ಹೆಚ್ಚಿಸಬಹುದು

ಹೌದು.. ಅತಿಯಾದ ಪ್ರೋಟೀನ್ ಸೇವನೆಯು ಕೊಬ್ಬಿನ ಅತಿಯಾದ ಸೇವನೆಯಂತೆಯೇ ನಿಮ್ಮ ತೂಕವನ್ನು ಹೆಚ್ಚಿಸಬಹುದು. ಕೆಂಪು ಮಾಂಸ, ಹುರಿದ ಆಹಾರಗಳು ಅಥವಾ ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಮೂಲಗಳಿಂದ ನೀವು ಹೆಚ್ಚು ಪ್ರೋಟೀನ್ ತೆಗೆದುಕೊಂಡಾಗ, ಅದು ತೂಕ ಇಳಿಸುವ ಬದಲು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಹೆಚ್ಚು ಪ್ರೋಟೀನ್ ಎಂದರೆ ನಿಮ್ಮ ತೂಕ ಇಳಿಸುವ ಯೋಜನೆಗಳನ್ನು ಸುಲಭವಾಗಿ ಹಾಳುಮಾಡುವ ಹೆಚ್ಚಿನ ಕ್ಯಾಲೋರಿ ಸೇವನೆಯನ್ನು ಸಹ ಅರ್ಥೈಸಬಹುದು. ಆದ್ದರಿಂದ, ಮಿತವಾಗಿ ತಿನ್ನುವುದು ಅತ್ಯಗತ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುತ್ರನಿಗಾಗಿ 1400 ಕಿಮೀ ಸ್ಕೂಟಿ ರೈಡ್​ ಮಾಡಿದ್ದ ತಾಯಿಗೆ ಇದೀಗ ಮತ್ತೊಂದು ಸಂಕಷ್ಟ..!

Sat Mar 5 , 2022
    2020 ರಲ್ಲಿ ಮೊದಲ ಬಾರಿಗೆ ಕೊರೊನಾ ಲಾಕ್​ಡೌನ್​ ಜಾರಿ ಮಾಡಿದ ಸಂದರ್ಭದಲ್ಲಿ ತಾಯಿಯೊಬ್ಬರು ತಮ್ಮ ಮಗನನ್ನು ಮನೆಗೆ ಕರೆತರಲು ಬರೋಬ್ಬರಿ 1400 ಕಿಲೋಮೀಟರ್​ ದೂರದವರೆಗೆ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದರು, ಇದೀಗ ಇದೇ ತಾಯಿ ಉಕ್ರೇನ್​ನಲ್ಲಿ ಸಿಲುಕಿರುವ ತನ್ನ 19 ವರ್ಷದ ಮಗನ ಬಗ್ಗೆ ಆತಂಕ ಹೊಂದಿದ್ದಾರೆ. ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿರುವ ರಜಿಯಾ ಬೇಗಂ ತನ್ನ ಪುತ್ರ ನಿಜಾಮುದ್ದೀನ್​ ಅಮಾನ್​ ಉಕ್ರೇನ್​​ನಿಂದ ಸುರಕ್ಷಿತವಾಗಿ ಮರಳಲಿ ಎಂದು […]

Advertisement

Wordpress Social Share Plugin powered by Ultimatelysocial