ಅಪರಿಚಿತನ ಕೈಗೆ ATM ಕಾರ್ಡ್​ ಕೊಟ್ಟು 500 ರೂ. ಡ್ರಾ ಮಾಡಿಸ್ಕೊಂಡು ಮನೆಗೆ ಬಂದ ವ್ಯಕ್ತಿಗೆ ಮರುದಿನವೇ ಕಾದಿತ್ತು ಶಾಕ್​!

 

ಕೊಳ್ಳೇಗಾಲ: ಎಟಿಎಂ ಉಪಯೋಗಿಸಲು ಬರದೆ ಇರುವವರು ಅಪರಿಚಿತರ ಕೈಗೆ ಕಾರ್ಡ್ ಕೊಟ್ಟರೆ ಆಗೋ ಮೋಸಕ್ಕೆ ಈ ಪ್ರಕರಣ ಉದಾಹರಣೆ‌.

 

ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಕಳೆದ ಎರಡ್ಮೂರು‌ ದಿನಗಳ ಹಿಂದೆ ಜಾಗೇರಿ ಗ್ರಾಮದ‌ ಶೇಶುರಾಜ್ ಹೋಗಿದ್ದರು.

ಎಟಿಎಂ ಬಳಕೆ ಮಾಡೋಕೆ ಬಾರದ ಕಾರಣ ಅಲ್ಲೇ ಇದ್ದ ಅಪರಿಚಿತನ ಕೈಗೆ ಕಾರ್ಡ್ ಕೊಟ್ಟು 500 ರೂ. ಪಡೆದು ಕೊಂಡು ಮನೆಗೆ ತೆರಳಿದ್ದರು.

ಒಂದು ದಿನದ ಬಳಿಕ ಇವರಿಗೆ ನಿಮ್ಮ ಖಾತೆಯಿಂದ 19 ಸಾವಿರ ರೂ. ಡ್ರಾ ಆಗಿದೆ ಎಂಬ ಮೆಸೇಜ್ ಮೊಬೈಲ್​ಗೆ ಬಂದಿದೆ. ತನ್ನ ಬಳಿಯೇ ಎಟಿಎಂ ಕಾರ್ಡ್ ಇದ್ದರೂ‌ ಹೇಗೆ ಹಣ ಡ್ರಾ ಆಗಿದೆ ಎಂದು ಶೇಶುರಾಜ್​ಗೆ ಆಶ್ಚರ್ಯವಾಗಿದೆ‌. ಜೇಬಲ್ಲಿದ್ದ ಎಟಿಎಂ ಕಾರ್ಡ್ ತೆಗೆದು ನೋಡಿದಾಗ ಅದು ಬೇರೆ ಕಾರ್ಡ್ ತನ್ನದಲ್ಲ ಎಂದು ಗೊತ್ತಾಗಿದೆ. ಈ‌ ಹಿಂದೆ ಯಾರ ಕೈಗೆ ಕಾರ್ಡ್ ಕೊಟ್ಟಿದ್ದೆ ಅನ್ನೋದು ನೆನಪಾಗಿದೆ.

ಮಾ.24ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೇಶುರಾಜ್ ದೂರು ದಾಖಲಿಸಿದ್ದಾರೆ. ಎರಡ್ಮೂರು ದಿನಗಳ‌ ಹಿಂದೆ ಎಟಿಎಂಗೆ ತೆರಳಿ 500 ರೂ. ತೆಗೆದುಕೊಡೋಕೆ ಅಂತ ಅಪರಿಚಿತ ವ್ಯಕ್ತಿಗೆ ಕಾರ್ಡ್ ಕೊಟ್ಟಿದ್ದೆ. ಆಗ ಅವನು ನನ್ನ ಕಾರ್ಡ್ ಬದಲಾಯಿಸಿ ಬೇರೆ ಕಾರ್ಡ್ ಕೊಟ್ಟಿದ್ದಾನೆ. ಇದು ನನಗೆ ಗೊತ್ತಾಗಿಲ್ಲ‌.‌ ಒಂದು ದಿನದ ಬಳಿಕ ಯಳಂದೂರಿನ ಎಟಿಎಂವೊಂದರಲ್ಲಿ 19 ಸಾವಿರ ರೂ.ಡ್ರಾ ಮಾಡಿದ್ದಾನೆ. ಅವನನ್ನು ಹುಡುಕಿ ಹಣ ವಾಪಸ್ ಕೊಡಿಸಿ ಎಂದು ಕೋರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯವು 2 ವರ್ಷಗಳಲ್ಲಿ ವಿಮಾನ ನಿರ್ವಹಣೆಗೆ 19.53 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ!!

Fri Mar 25 , 2022
ರಾಜ್ಯ ಸರ್ಕಾರವು 2019 ರಲ್ಲಿ ಖರೀದಿಸಿದ ಹೊಸ ವಿಮಾನದ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ 19.53 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ವಿಮಾನವನ್ನು 197.90 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ ಮತ್ತು ಸುಮಾರು 10 ಪ್ರತಿಶತ ಮೊತ್ತವನ್ನು ನಿರ್ವಹಣೆಗೆ ಖರ್ಚು ಮಾಡಲಾಗಿದೆ. ವಾವ್ ಕಾಂಗ್ರೆಸ್ ಶಾಸಕ ಜೆನಿಬೆನ್ ಠಾಕೋರ್ ಅವರ ಹೊಸ ವಿಮಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ನಾಗರಿಕ ವಿಮಾನಯಾನ ಸಚಿವ ಪೂರ್ಣೇಶ್ ಮೋದಿ ಅವರು ಜನವರಿ 2020 […]

Advertisement

Wordpress Social Share Plugin powered by Ultimatelysocial