ಔರಂಗಾಬಾದ್, ಉಸ್ಮಾನ್ ನಗರಗಳ ಹೆಸರು ಬದಲು.

 

ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.ಔರಂಗಾಬಾದ್ ಗೆ ಛತ್ರಪತಿ ಸಂಭಾಜಿ ನಗರ ಎಂದು ಮತ್ತು ಒಸ್ಮಾನಾಬಾದ್ ನಗರಕ್ಕೆ ಧಾರಾಶಿವ ಎಂದೂ ಮರುನಾಮಕರಣ ಮಾಡಲಾಗಿದೆ. ಈ ಎರಡೂ ನಗರಗಳ ಮರು ನಾಮಕರಣ ಪ್ರಸ್ತಾಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕೇಂದ್ರ ಸರ್ಕಾರದ ಎದುರು ಇಟ್ಟಿದ್ದರು. ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿದ್ದು, ಹೆಸರು ಬದಲಾವಣೆಗೆ ನಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ನಗರಗಳ ಮರುನಾಮಕರಣ ಅನುಮೋದಿಸಿದ್ದಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಂದುಕೊಂಡಿದ್ದನ್ನು ಸಾಧಿಸಿದೆ ಎಂದು ಹೇಳಿದ್ದಾರೆ.ಮೊಘಲ್ ದೊರೆ ಔರಂಗಜೇಬನ ಹೆಸರನ್ನು ಔರಂಗಾಬಾದ್‌ಗೆ ಇಡಲಾಗಿತ್ತು. ಹೈದರಾಬಾದ್‌ನ ೭ ನೇ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಹೆಸರನ್ನು ಉಸ್ಮಾನಾಬಾದ್‌ಗೆ ಇಡಲಾಗಿತ್ತು. ಈ ಪ್ರದೇಶವು ೧೯೪೮ರವರೆಗೆ ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು.ಸದ್ಯ ಔರಂಗಬಾದ್‌ಗೆ ಛತ್ರಪತಿ ಸಾಂಭಾಜಿ ನಗರ ಎಂದು ಮರುನಾಮಕರಣ ಮಾಡಲಾಗಿದೆ. ಸಂಭಾಜಿಯು ಛತ್ರಪತಿ ಶಿವಾಜಿಯ ಹಿರಿಯ ಮಗ. ತನ್ನ ತಂದೆ ಸ್ಥಾಪಿಸಿದ ಮರಾಠ ರಾಜ್ಯದ ಎರಡನೇ ರಾಜನೂ ಹೌದು. ೧೬೮೯ ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಸಂಭಾಜಿಯನ್ನು ಗಲ್ಲಿಗೇರಿಸಲಾಗಿತ್ತು. ಇನ್ನು ಧಾರಾಶಿವ ಎಂಬುದು ಉಸ್ಮಾನಾಬಾದ್ ಬಳಿಯ ಗುಹೆಗಳ ಹೆಸರು. ಇವು ೫ ರಿಂದ ೮ ನೇ ಶತಮಾನದಷ್ಟು ಹಳೆಯವು ಎಂದು ನಂಬಲಾಗಿದೆ.ಅಲ್ಲದೆ, ಸಂಘ ಪರಿವಾರದ ಸಂಘಟನೆಗಳು ಎರಡು ನಗರಗಳ ಹೆಸರು ಬದಲಾಯಿಸಲು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದವು. ಅದರಂತೆ ಈಗ ಹೆಸರು ಬದಲಾಯಿಸಲಾಗಿದ್ದು, ಕೇಂದ್ರದಿಂದಲೂ ಸಮ್ಮತಿ ದೊರೆತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2024ರಲ್ಲಿ ಮೋದಿ ಮುಂದುವರಿಕೆ ಅಮಿತ್ ಶಾ.

Sun Feb 26 , 2023
  ದೇಶದಲ್ಲಿ ಪ್ರಧಾನಿ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಇನ್ನೂ ಕೆಲವು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ಹುದ್ದೆ ಖಾಲಿ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.2024 ರ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದುವರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿಂದು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿ ಅವರು, ವಿರೋದ ಪಕ್ಷಗಳ […]

Advertisement

Wordpress Social Share Plugin powered by Ultimatelysocial