ಆಸೀಸ್‌ ಎದುರು ಭಾರತದ ಸೋಲಿಗೆ 5 ಪ್ರಮುಖ ಕಾರಣಗಳು!.

 

ದಕ್ಷಿಣ ಆಫ್ರಿಖಾದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಅಭಿಯಾನ ಸೆಮಿಫೈನಲ್‌ಗೆ ಅಂತ್ಯಗೊಂಡಿದೆ. ಗುರುವಾರ ನಡೆದ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಹಾಗೂ ಡಿಫೆಂಡಿಂಗ್‌ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಎದುರು ಜಿದ್ದಾಜಿದ್ದಿನ ಹೋರಾಟ ನಡೆಸಿದ ಟೀಮ್ ಇಂಡಿಯಾ, ಕೊನೇ ಓವರ್‌ನಲ್ಲಿ 5 ರನ್‌ ಅಂತರದ ವೀರೋಚಿತ ಸೋಲುಂಡಿತು.
ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿ ದೊಡ್ಡ ಮೊತ್ತ ದಾಖಲಿಸಿತು. ಓಪನರ್‌ ಬೆತ್‌ ಮೂನಿ (37 ಎಸೆತಗಳಲ್ಲಿ 54 ರನ್‌) ಮತ್ತು ನಾಯಕಿ ಮೆಗ್‌ ಲ್ಯಾನಿಂಗ್‌ (34 ಎಸೆತಗಳಲ್ಲಿ ಅಜೇಯ 49 ರನ್‌) ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172 ರನ್‌ಗಳ ದೊಡ್ಡ ಸ್ಕೋರ್‌ ಕಲೆಹಾಕಿತು.ಬಳಿಕ ಗುರಿ ಬೆನ್ನತ್ತಿದ ಭಾರತ ತಂಡ ಆರಂಭಿಕ ಆಘಾತ ತಂಡರೂ ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್‌ ಕೌರ್‌ (52) ಮತ್ತು ಜೆಮಿಮಾ ರೊಡ್ರಿಗಸ್‌ (43) ಅವರ ಹೋರಾಟದಿಂದ ಚೇತರಿಸಿತು. ಕೊನೇ ಎರಡು ಓವರ್‌ಗಳಲ್ಲಿ 20 ರನ್‌ ಗಳಿಸುವ ಒತ್ತಡ ಎದುರಾದಾಗ 5 ರನ್‌ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು.ಟೂರ್ನಿಯುದ್ದಕ್ಕೂ ಭಾರತ ತಂಡದ ಬೌಲಿಂಗ್‌ ಪ್ರದರ್ಶನ ಭರ್ಜರಿಯಾಗಿತ್ತು. ಆದರೆ, ಸೆಮಿಫೈನಲ್‌ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪ್ರಮುಖ ವೇಗಿ ರೇಣುಕಾ ಸಿಂಗ್‌ 4 ಓವರ್‌ಗಳಲ್ಲಿ ವಿಕೆಟ್‌ ಪಡೆಯಲಾಗದೆ 41 ರನ್‌ ಕೊಟ್ಟರು. ಸ್ಟಾರ್‌ ಆಲ್‌ರೌಂಡರ್‌ ದೀಪ್ತಿ ಶರ್ಮಾ (30ಕ್ಕೆ 1) ಮತ್ತು ಅನುಭವಿ ವೇಗಿ ಶಿಖಾ ಪಾಂಡೆ (32ಕ್ಕೆ 2) ವಿಕೆಟ್‌ ಪಡೆದರೂ ಆಸೀಸ್‌ ರನ್‌ ಗಳಿಕೆಯ ಓಟಕ್ಕೆ ಬ್ರೇಕ್‌ ಹಾಕಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ವೇಳೆ ತನ್ನ ಕೊನೇ ಓವರ್‌ನಲ್ಲಿ 18 ರನ್‌ ದಕ್ಕಿಸಿಕೊಂಡಿತು. ಭಾರತ ತಂಡದ ಸ್ಟಾರ್‌ ವೇಗಿ ರೇಣುಕಾ ಸಿಂಗ್‌ ಅಂತಿಮ ಓವರ್‌ ಬೌಲಿಂಗ್‌ ಮಾಡಿ 2 ಸಿಕ್ಸರ್‌ ಸಹಿತ 18 ರನ್‌ ಕೊಟ್ಟರು. ಪರಿಣಾಮ ಆಸ್ಟ್ರೇಲಿಯಾದ ಸ್ಕೋರ್‌ 170 ರನ್‌ಗಳ ಗಡಿ ದಾಟಿತು.ಹೈ-ವೋಲ್ಟೇಜ್ ಪಂದ್ಯದಲ್ಲಿ ದೊಡ್ಡ ಸ್ಕೋರ್‌ ಬೆನ್ನತ್ತಿದ್ದ ಸಂದರ್ಭದಲ್ಲಿ ಭಾರತಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ಆದರೆ ಓಪನರ್‌ಗಳಾದ ಶಫಾಲಿ ವರ್ಮಾ (9) ಮತ್ತು ಸ್ಮೃತಿ ಮಂಧಾನಾ (2) ಇಬ್ಬರೂ ಕೂಡ ಒಂದಂಕಿಯ ಸ್ಕೋರ್‌ಗೆ ವಿಕೆಟ್‌ ಒಪ್ಪಿಸಿದ್ದು ಭಾರತದ ಸೋಲಿಗೆ ಬಹುಮುಖ್ಯ ಕಾರಣವಾಯಿತು. ಇಬ್ಬರೂ ಕೂಡ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು ಕೋರ್ಟ್ ಗೆ ಹಾಜರಾದ ಬಾಲಿವುಡ್ ನಟಿ ರಾಖಿ ಸಾವಂತ್.

Fri Feb 24 , 2023
ಕೌಟುಂಬಿಕಕಲಹಪ್ರಕರಣ‌ಕ್ಕೆಸಂಬಂಧಿಸಿದಂತೆಬಾಲಿವುಡ್ನಟಿರಾಖಿಸಾವಂತ್ಮೈಸೂರುಕೋರ್ಟ್ಗೆಹಾಜರಾಗಿದ್ದಾರೆ. ಈಸಂದರ್ಭದಲ್ಲಿಮಾಧ್ಯಮಗಳಜೊತೆಮಾತನಾಡಿದರಾಖಿ, ‘ನನ್ನಪತಿಯನ್ನುಮುಂಬೈಪೊಲೀಸರುಅರೆಸ್ಟ್ಮಾಡಿದ್ದಾರೆ. ಕೋರ್ಟ್ಅವರಿಗೆಏಳುದಿನಪೊಲೀಸ್ ಕಸ್ಟಡಿ ನೀಡಿದೆ . ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ ‌.ನನಗೆನ್ಯಾಯಬೇಕು, ಆತನಿಗೆಜಾಮೀನುಯಾವುದೇಕಾರಣಕ್ಕೂಸಿಗಬಾರದು’ಎಂದುಹೇಳಿದರು.ಆದಿಲ್ನನನ್ನುಕಾನೂನುಬದ್ಧವಾಗಿಮದುವೆಯಾಗಿದ್ದಾನೆ.ಅದರಎಲ್ಲಾದಾಖಲಾತಿನನ್ನಬಳಿಇದೆ.ನಾನುಇಂದುಬೆಳಿಗ್ಗೆಆದಿಲ್ಖಾನ್ತಂದೆಜೊತೆಮಾತನಾಡಿದೆ‌.ನಾನುಹಿಂದೂಎಂಬಕಾರಣಕ್ಕೆಅವರುಸ್ವೀಕಾರಮಾಡುತ್ತಿಲ್ಲ. ಹಾಗಾದ್ರೆನಾನುಏನುಮಾಡಲಿ. ನನ್ನಬಳಿ 1.65 ಕೋಟಿಹಣಪಡೆದಿದ್ದಾನೆ‌. ಆದರೆನನಗೆಒಂದುಪೈಸೆಕೂಡಕೊಟ್ಟಿಲ್ಲ‌ ಎಂದುಆರೋಪಿಸಿದರು.ಆದಿಲ್ಮೈಸೂರುಜನಸರಿಇಲ್ಲ, ಅದಕ್ಕಾಗಿಯೇಮುಂಬೈಗೆಬರುತ್ತೇನೆಎಂದುಹೇಳಿದ್ದ. ಆನಂತರಮುಂಬೈನಲ್ಲಿಸಾಕಷ್ಟುಬಾರಿನನ್ನಮೇಲೆಹಲ್ಲೆಮಾಡಿದ್ದ. ಮೈಸೂರುಕೋರ್ಟ್ಮೇಲೆವಿಶ್ವಾಸಇದೆ. ನನಗೆನ್ಯಾಯಕೊಡಿಸಿಎಂದುಮಾಧ್ಯಮಗಳಮುಂದೆರಾಖಿಕಣ್ಣೀರುಹಾಕಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial