ದಿನನಿತ್ಯದ ಈ ಕೆಲಸದಿಂದ ಬೇಸತ್ತು ನಿಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಇಂದು ನಾವು ನಿಮಗೆ ಕೇವಲ 50 ಸಾವಿರ ರೂಪಾಯಿಗಳಲ್ಲಿ ಪ್ರಾರಂಭಿಸಬಹುದಾದ ವ್ಯಾಪಾರದ ಬಗ್ಗೆ ಹೇಳಲಿದ್ದೇವೆ. ಕೆಲವೇ ವರ್ಷಗಳಲ್ಲಿ ಈ ವ್ಯವಹಾರದಿಂದ ನೀವೂ ಲಕ್ಷಾಂತರ ರೂಪಾಯಿ ಗಳಿಸುತ್ತೀರಾ.ಈ ವ್ಯವಹಾರವು ಆನ್‌ಲೈನ್ ಸಂಗ್ರಹಣೆಯಾಗಿದೆ. ಈ ಡಿಜಿಟಲ್ಯುಗದಲ್ಲಿ ಆನ್‌ಲೈನ್ ಹೋರ್ಡಿಂಗ್ಸ್ ವ್ಯವಹಾರವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಇದನ್ನು ನೀವು ಆರಂಭಿಸಿ ಕೈ ತುಂಬಾ ಹಣ ಗಳಿಸಬಹುದು.ಜಸ್ಟ್​ 50 ಸಾವಿರದಿಂದ ಈ […]

ಸಂಸ್ಥೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಮಾಡಿದ ಕಾರಣ, ಅವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿ ಆದೇಶಿಸಿದೆ.34ರ ಹರೆಯದ ಚಾರ್ಲೊಟ್ ಲೀಚ್, ಗರ್ಭಿಣಿಯಾಗುತ್ತಿದ್ದಂತೆಯೇ ಆ ವಿಷಯವನ್ನು ತಮ್ಮ ಮ್ಯಾನೇಜರ್‌ಗೆ ತಿಳಿಸಿದ್ದರು.ಇದು ತಿಳಿಯುತ್ತಲೇ ಆಕೆ ಇನ್ನು ಕೆಲಸಕ್ಕೆ ಯೋಗ್ಯವಲ್ಲ ಎನ್ನುವ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆಕೆ ಬಹಳ ನೊಂದುಕೊಂಡಿದ್ದರು.ಈ ಹಿಂದೆ ಚಾರ್ಲೊಟ್‌ ಇದೇ ಕಾರಣಕ್ಕೆ ಹಲವು ಬಾರಿ ಗರ್ಭಪಾತ […]

ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ಹೊರಬಂದ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮುಂದೆ ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸರ್ ಗೆ ಆಡಲಿದ್ದಾರೆ. ಇದರ ಬಗ್ಗೆ ಕ್ಲಬ್ ಅಧಿಕೃತವಾಗಿ ಘೋಷಣೆ ಮಾಡಿದೆ.ಸಂದರ್ಶನವೊಂದರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಮಾಲಕರು ಮತ್ತು ಕೋಚ್ ಬಗ್ಗೆ ಹೇಳಿಕೆ ನೀಡಿದ್ದರು.ಈ ವಿವಾದದ ಬಳಿಕ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯುವುದು ಖಚಿತವಾಗಿತ್ತು. ಆದರೆ ಯಾವ ತಂಡ ಈ ದಿಗ್ಗಜ ಆಟಗಾರನನ್ನು ಖರೀದಿ ಮಾಡುತ್ತದೆ […]

ಸ್ಯಾಂಡಲ್​​ವುಡ್​ ನಲ್ಲಿ 2022 ರಲ್ಲಿ 180 ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಿವೆ. ಕಟ್ಟಕಡೆಯದಾಗಿ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ. ಜಮಾಲಿಗುಡ್ಡ, ಪದವಿ ಪೂರ್ವ, ಮೇಡ್ ಇನ್ ಬೆಂಗಳೂರು, ಜೋರ್ಡನ್ ಅನ್ನೋ ಸಿನಿಮಾ ತೆರೆಗೆ ಬರ್ತಿವೆ.ಆದರೆ ಮುಂದಿನ ವರ್ಷ 2023 ರಲ್ಲಿ ಕನ್ನಡದ ಯಾವ ಸಿನಿಮಾ ರಿಲೀಸ್ ಆಗುತ್ತಿವೆ. ಅದರಲ್ಲಿ ಬಹು ನಿರೀಕ್ಷಿತ ಸಿನಿಮಾಗಳಾವವು. ಕಿಚ್ಚ ಸುದೀಪ್ ಸಿನಿಮಾ ಅನೌನ್ಸ್ ಆಗುತ್ತದೆಯೇ? ರಾಕಿಂಗ್ ಸ್ಟಾರ್ ಯಶ್ ಚಿತ್ರ ಜನವರಿ-8ಕ್ಕೆ ಅನೌನ್ಸ್ […]

ದೇಶದ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ನೂತನ ಸಹಕಾರ ನೀತಿ ರೂಪಿಸಲಾಗುತ್ತಿದ್ದು, ಅದಕ್ಕಾಗಿ ಕೇಂದ್ರದ ಮಾಜಿ ಸಚಿವ ಸುರೇಶ್‌ ಪ್ರಭು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಹಕಾರ ಸಂಘಗಳನ್ನು ಕಂಪೆನಿ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿದರು.ರಾಜ್ಯದ ಸಹಕಾರ ಕ್ಷೇತ್ರ ದೇಶಕ್ಕೇ ಮಾದರಿಯಾಗಿದೆ. ಆದರೆ, ಇಲ್ಲಿನ ಸಹಕಾರ ಕ್ಷೇತ್ರದಿಂದ ಸಾಹುಕಾರರಾದವರು ಸಾಕಷ್ಟು ಜನರಿದ್ದಾರೆ. ಬಂಡವಾಳ ವೃದ್ಧಿಗಾಗಿಯೇ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರೂ ಇದ್ದಾರೆ. ಸಹಕಾರ […]

ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ.ಬೆಂಗಳೂರು: ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್​ ಮೆಟ್ಟಿಲೇರಿದ್ದುಂಟು.ಅವು ಬೇಗ ಇತ್ಯರ್ಥಗೊಳ್ಳದೇ ಕುಟುಂಬದಲ್ಲಿ ಬಿರುಕು, ಜಗಳವುಂಟಾಗಿ ಆಸ್ತಿಗಳು ಪ್ರಯೋಜನಕ್ಕೆ ಬಾರದಿರುವ ಹಲವು ಪ್ರಕರಣಗಳನ್ನು ಕಾಣುತ್ತೇವೆ. ಆದರೆ, ಸಾಮಾನ್ಯ ಪರಿಭಾಷೆಯಲ್ಲಿ ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಮತ್ತು ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ವಿಂಗಡಿಸಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.ಹೆಣ್ಣುಮಕ್ಕಳ ಪಾಲು: […]

ಶಾಲೆ ಮುಗಿಸಿಕೊಂಡು ಮನೆಗೆ ಬಂದ 9 ವರ್ಷದ ಬಾಲಕನೊಬ್ಬ ಸೀರೆಯಲ್ಲಿ ಜೋಲಿ ಕಟ್ಟಿಕಂಡು ಖುಷಿಯಿಂದ ಆಟವಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ.ಬೇವಿನಹಳ್ಳಿ ಕೊಪ್ಪಲು ಗ್ರಾಮದ ಶ್ರೀನಿವಾಸ ಅವರ ಪುತ್ರ ಸಮರ್ಥ್​(9) ಮೃತ ಬಾಲಕ.ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಸಮರ್ಥ್ ಬಂದಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಜೋಕಾಲಿ ಆಟವಾಡಬೇಕು ಅನ್ನಿಸಿ, ಅಮ್ಮನ ಸೀರೆ ತೆಗೆದುಕೊಂಡು ಈತನೇ ಜೋಲಿ ಕಟ್ಟಿದ್ದಾನೆ. […]

ಯಶಸ್ವಿನಿ ಯೋಜನೆ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಲಕ್ಷಾಂತರ ರೈತರು ಇನ್ನೂ ನೋಂದಣಿ ಮಾಡಿಸಿಕೊಂಡಿಲ್ಲ.ಸಹಕಾರ ಸಂಘಗಳಲ್ಲಿ ಖಾತೆ ಹೊಂದಿದ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಷೇರುದಾರರಾಗಿಲ್ಲದ ಕಾರಣ ದಿನಾಂಕ ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.ಗ್ರಾಮಾಂತರ ಪ್ರದೇಶಗಳಲ್ಲಿ ಸ್ತ್ರೀಶಕ್ತಿ ಸಹಕಾರ ಸಂಘಗಳ ಮಹಿಳೆಯರು ಸಂಘದ ಖಾತೆ ಹೊಂದಿದ್ದರೂ ವೈಯಕ್ತಿಕವಾಗಿ ಷೇರುದಾರರಾಗಿಲ್ಲ. ಅಂತಹ ಮಹಿಳೆಯರಿಗೆ ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಇನ್ನೂ ಅನೇಕ ರೈತರು ನೋಂದಣಿ ಮಾಡಿಸಿಕೊಂಡಿಲ್ಲ. ರಾಜ್ಯದಲ್ಲಿ ಸುಮಾರು 45,000 ವಿವಿಧ ರೀತಿಯ […]

ದೇಶದಲ್ಲಿ ನಕಲಿ ಔಷಧಗಳು ಪೂರೈಕೆಯಾಗುತ್ತಿವೆ ಎಚ್ಚರ! ಇಂಥದ್ದೊಂದು ಅಲರ್ಟ್‌ ರವಾನಿಸಿದ್ದು ಬೇರ್ಯಾರೂ ಅಲ್ಲ ಭಾರತೀಯ ಔಷಧಗಳ ಮಹಾನಿರ್ದೇಶನಾಲಯ (ಡಿಸಿಐಜಿ).ಹಿಮಾಚಲ ಪ್ರದೇಶ ಮೂಲದ ಕಂಪನಿಯೊಂದು ಉತ್ಪಾದಿಸುತ್ತಿರುವ ನಕಲಿ ಔಷಧಗಳಿಗೆ ಸಂಬಂಧಿಸಿ ಭಾರತೀಯ ಔಷಧ ನಿರ್ದೇಶನಾಲಯ ಶುಕ್ರವಾರ ಎಲ್ಲ ರಾಜ್ಯಗಳ ಔಷಧ ನಿರೀಕ್ಷಕರಿಗೆ ಎಚ್ಚರಿಕೆ ಸಂದೇಶ ಕಳುಹಿಸಿದೆ.ಮೇಲಿನ ಪಟ್ಟಿಯಲ್ಲಿರುವ ಔಷಧಗಳನ್ನು ವಾಸ್ತವದಲ್ಲಿ ಪ್ರಮುಖ ಔಷಧ ಕಂಪನಿಗಳಾದ ಸಿಪ್ಲಾ, ಝೈಡಸ್‌ ಹೆಲ್ತ್‌ಕೇರ್‌, ಐಪಿಸಿಎ ಲ್ಯಾಬ್ಸ್, ಮ್ಯಾಕ್ಲಿಯೋಡ್ಸ್‌ ಫಾರ್ಮಾ ಮತ್ತು ಟೊರೆಂಟ್‌ ಫಾರ್ಮಾಸುಟಿಕಲ್ಸ್‌ ಉತ್ಪಾದನೆ ಮಾಡುತ್ತಿವೆ. […]

ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಅಂಗನವಾಡಿ ನೇಮಕಾತಿಗೆ ಮಾನದಂಡ ಬದಲಿಸುತ್ತಿದೆ.ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಯುಸಿ ಮತ್ತು ಸಹಾಯಕರ ಹುದ್ದೆಗಳಿಗೆ ಎಸ್‌ಎಸ್‌ಎಲ್ಸಿ ಕಡ್ಡಾಯಗೊಳಿಸಲಾಗುವುದು.ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಸಿಬ್ಬಂದಿಗಳಿಗೆ ಬಡ್ತಿಗೆ ನಿಯಮ ಬದಲಾವಣೆ ಮಾಡಲಾಗುವುದು. ಹೊಸ ಕಾರ್ಯಕರ್ತೆಯರ ಆಯ್ಕೆ ಮಾಡುವ ಸಂದರ್ಭದಲ್ಲಿ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಕೋರ್ಸ್ ಪೂರ್ಣಗೊಳಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಎಸ್‌ಎಸ್‌ಎಲ್ಸಿ ಮತ್ತು ಸಹಾಯಕಿಯರ ಹುದ್ದೆಗಳಿಗೆ ಏಳನೇ ತರಗತಿ ಮಾನದಂಡ ಇತ್ತು. […]

Advertisement

Wordpress Social Share Plugin powered by Ultimatelysocial