ಅಲ್ ನಾಸರ್ ಪಾಲಾದ ರೊನಾಲ್ಡೊ: ವರ್ಷಕ್ಕೆ ಬರೋಬ್ಬರಿ 1770 ಕೋಟಿ ರೂ ನೀಡುತ್ತೆ ಸೌದಿ ಕ್ಲಬ್

ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ಹೊರಬಂದ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮುಂದೆ ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸರ್ ಗೆ ಆಡಲಿದ್ದಾರೆ. ಇದರ ಬಗ್ಗೆ ಕ್ಲಬ್ ಅಧಿಕೃತವಾಗಿ ಘೋಷಣೆ ಮಾಡಿದೆ.ಸಂದರ್ಶನವೊಂದರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಮಾಲಕರು ಮತ್ತು ಕೋಚ್ ಬಗ್ಗೆ ಹೇಳಿಕೆ ನೀಡಿದ್ದರು.ಈ ವಿವಾದದ ಬಳಿಕ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯುವುದು ಖಚಿತವಾಗಿತ್ತು. ಆದರೆ ಯಾವ ತಂಡ ಈ ದಿಗ್ಗಜ ಆಟಗಾರನನ್ನು ಖರೀದಿ ಮಾಡುತ್ತದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.“ಯುರೋಪಿಯನ್ ಫುಟ್ಬಾಲ್‌ ನಲ್ಲಿ ನಾನು ಗೆಲ್ಲಲು ಯೋಜಿಸಿದ್ದನ್ನೆಲ್ಲಾ ಗೆದ್ದಿರುವುದು ನನ್ನ ಅದೃಷ್ಟ. ಇದೀಗ ಏಷ್ಯಾದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸರಿಯಾದ ಕ್ಷಣ ಎಂದು ಭಾವಿಸುತ್ತೇನೆ. ನನ್ನ ಹೊಸ ತಂಡದ ಸದಸ್ಯರನ್ನು ಸೇರಲು ನಾನು ಎದುರು ನೋಡುತ್ತಿದ್ದೇನೆ ಮತ್ತು ಅವರೊಂದಿಗೆ ಕ್ಲಬ್‌ ಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತೇನೆ” ಎಂದು ಎಂದು ರೊನಾಲ್ಡೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.ವರದಿಯ ಪ್ರಕಾರ ಅಲ್ ನಾಸರ್ ಕ್ಲಬ್ ರೊನಾಲ್ಡೊ ಅವರಿಗೆ ವಾರ್ಷಿಕವಾಗಿ 1770 ಕೋಟಿ ರೂ ನೀಡಲಿದೆ. ಎರಡುವರೆ ವರ್ಷಗಳ ಕಾಲ ಒಪ್ಪಂದ ಮಾಡಿಕೊಳ್ಳಲಾಗಿದೆ.ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ಒಪ್ಪಂದದ ಸಮಯದಲ್ಲಿ ರೊನಾಲ್ಡೊ ವಾರಕ್ಕೆ 5 ಕೋಟಿ ಗಳಿಸುತ್ತಿದ್ದರು ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ಮತ್ತೊಂದು ಕ್ಲಬ್ ಅಲ್ ಹಿಲಾಲ್‌ ಈ ಯುನೈಟೆಡ್ ದಿನಗಳಲ್ಲಿ ಅವರಿಗೆ 3,000 ಕೋಟಿ ವಾರ್ಷಿಕ ಒಪ್ಪಂದವನ್ನು ನೀಡಲಾಗಿತ್ತು ಆದರೆ ಅವರು ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ

Sat Dec 31 , 2022
  ದೇವರು ವರ ಕೊಡಲ್ಲ, ಶಾಪವೂ ಕೊಡಲ್ಲ. ಆದರೆ ಅವಕಾಶ ಕೊಡುತ್ತಾನೆ. ಅದರಂತೆ ಕಾಂಗ್ರೆಸ್ ಆಯ್ಕೆ ಒಂದು ಅವಕಾಶ ಇದ್ದಂತೆ, ಅದನ್ನು ರಾಜ್ಯದ ಸದುಪಯೋಗ ಮಾಡಿಕೊಳ್ಳಬೇಕು. ಮುಂದಿನ‌ ಚುನಾವಣೆಯಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬಂದೇ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.ನಗರದ ದರ್ಬಾರ್ ಶಾಲಾ ಮೈದಾನದಲ್ಲಿ‌ ಕಾಂಗ್ರೆಸ್‌ನಿಂದ ಶುಕ್ರವಾರ ಆಯೋಜಿಸಿದ್ದ ಕೃಷ್ಣಾ ಜಲಾಂದೋಲನ ಸಮಾವೇಶದಲ್ಲಿ ಮಾತನಾಡಿ, ನಮ್ಮ‌ ಸರ್ವೇ ತಂಡ ವಿಜಯಪುರ ಜಿಲ್ಲೆಯಲ್ಲಿ ಎಂಟರಲ್ಲಿ ಆರು ಸ್ಥಾನಗಳನ್ನು ಗೆಲ್ಲುತ್ತದೆ ಎಂದು […]

Advertisement

Wordpress Social Share Plugin powered by Ultimatelysocial