ಟ್ರಯಲ್ ರೂಂನಲ್ಲಿ ‘ಹಿಡನ್ ಕ್ಯಾಮೆರಾ’ ಪತ್ತೆ ಹಚ್ಚುವುದು ಹೇಗೆ ಗೊತ್ತಾ..? ತಪ್ಪದೆ ಓದಿ

ಟ್ರಯಲ್ ರೂಂನಲ್ಲಿ 'ಹಿಡನ್ ಕ್ಯಾಮೆರಾ' ಪತ್ತೆ ಹಚ್ಚುವುದು ಹೇಗೆ ಗೊತ್ತಾ..? ತಪ್ಪದೆ ಓದಿ

ಯಾವುದೇ ಕೋಣೆಯಲ್ಲಿ ಕ್ಯಾಮೆರಾಗಳಿರುವುದನ್ನು ಪತ್ತೆ ಹಚ್ಚುವುದು ಕಷ್ಟ. ಏಕೆಂದರೆ ಇಂದು ಆಧುನಿಕ ತಂತ್ರಜ್ಞಾನ ಹೊಂದಿರುವ ಅತಿಚಿಕ್ಕ ಕ್ಯಾಮೆರಾಗಳು ನಮ್ಮ ಶರ್ಟಿನ ಬಟನ್ನಿನ ಗಾತ್ರ ಹೊಂದಿದ್ದು ಚಿಕ್ಕ ತೂತಿನ ಮೂಲಕವೂ ನಿಖರವಾಗಿ ದೃಶ್ಯವನ್ನು ಸೆರೆಹಿಡಿಯಬಲ್ಲವು.

ಇದನ್ನು ಹಿಮ್ಮೇಳದ ಯಾವುದೋ ಚುಕ್ಕೆ ಇರುವಂತೆ ಚಿತ್ರದಲ್ಲಿ ಅಳವಡಿಸಿದರೆ, ಉದಾಹರಣೆಗೆ ಹಕ್ಕಿಯ ಕಣ್ಣಿರುವಲ್ಲಿ, ಯಾರಿಗೂ ಅನುಮಾನ ಬರಲು ಸಾಧ್ಯವೇ ಇಲ್ಲ.

ಈ ಕೃತ್ಯ ಎಸಗುವ ಖದೀಮರು ಈ ಕ್ಯಾಮೆರಾದ ಮೂಲಕ ಸೆರೆಹಿಡಿಯುವ ಚಿತ್ರಗಳನ್ನು ಯಾವ ರೀತಿಯಲ್ಲಿ ಬಳಸಿ ಪೀಡಿತರನ್ನು ಯಾವ ರೀತಿ ಗೋಳು ಹೊಯ್ದುಕೊಳ್ಳಬಹುದು ಎಂದು ಅಂದಾಜಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಕೃತ್ಯಕ್ಕೆ ಬಲಿಪಶುವಾಗುವ ಬದಲು ಕೊಂಚ ಜಾಣತನ, ಕೊಂಚ ಜಾಗರೂಕತೆ, ಕೊಂಚ ಸಾಮಾನ್ಯ ಜ್ಞಾನ ಬಳಸಿದರೆ ಇಂತಹ ಕೋಣೆಯಲ್ಲಿ ಕ್ಯಾಮೆರಾ ಇರುವುದನ್ನು ಕಂಡುಕೊಳ್ಳಬಹುದು.

ಇತ್ತೀಚೆಗೆ ಸಚಿವೆ ಸ್ಮೃತಿ ಇರಾನಿಯವರೂ ಇಂತಹ ಒಂದು ಕ್ಯಾಮೆರಾ ಇದ್ದುದನ್ನು ಕಂಡುಹಿಡಿದದ್ದು ತಮ್ಮ ಜಾಗರೂಕತೆಯಿಂದಲೇ. ಕದ್ದು ನೋಡಲು ಖದೀಮರು ಬಳಸುವ ವಿಧಾನಗಳಲ್ಲಿ ಸಾಮಾನ್ಯವಾದವು ಎಂದರೆ ಅಡಗಿಸಿಟ್ಟ ಕ್ಯಾಮೆರಾ, ಒಂದು ಬದಿಯಿಂದ ಕನ್ನಡಿ, ಇನ್ನೊಂದು ಬದಿಯಿಂದ ಪಾರದರ್ಶಕವಾದ ನಿಲುವುಗನ್ನಡಿ ಇತ್ಯಾದಿಗಳು. ಬನ್ನಿ, ಈ ಬಗ್ಗೆ ಜಾಗರೂಕರಾಗಲು ಕೆಳಗಿನ ಸ್ಲೈಡ್ ಶೋ ನಿಮಗೆ ನೆರವಾಗಲಿದೆ.

 

ಮೊಬೈಲ್ ಬಳಸಿ

ಟ್ರಯಲ್ ರೂಂ ಒಳಗೆ ಪ್ರವೇಶ ಪಡೆದ ಬಳಿಕ ಒಂದು ಕರೆಯನ್ನು ಮಾಡಲು ಪ್ರಯತ್ನಿಸಿ. ಒಂದು ವೇಳೆ ಟ್ರಯಲ್ ರೂಂ ಹೊರಗೆ ಸಿಗ್ನಲ್ ಚೆನ್ನಾಗಿದ್ದು ಟ್ರಯಲ್ ರೂಂ ಒಳಗೆ ಸಿಗ್ನಲ್ ಕ್ಷೀಣ ಅಥವಾ ಇಲ್ಲವಾಗಿದ್ದರೆ ಕ್ಯಾಮೆರಾ ಇರುವುದು ಖಚಿತ.

 

ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದರೆ ಕಂಡುಹಿಡಿಯುವುದು ಹೇಗೆ?

ಇನ್ನುಎಲ್ಲ ಲೈಟ್’ಗಳನ್ನು ಆಫ್ ಮಾಡಿ. ಒಟ್ಟಿನಲ್ಲಿ ಕೋಣೆ ಪೂರ್ತಿ ಕತ್ತಲಾಗುವಂತೆ ನೋಡಿಕೊಳ್ಳಿ. ಈಗ ನೀವು ಬರಿಗಣ್ಣಿನಲ್ಲೇ ಎಲ್ಲ ಕಡೆಯೂ ಸೂಕ್ಷ್ಮವಾಗಿ ನೋಡಿ. ಎಲ್ಲಿಯಾದರೂ ರೆಡ್ ಲೈಟ್’ನ ಸಣ್ಣ ಬಿಂದು ಕಾಣಿಸುತ್ತಾ ಎಂದು ಹುಡುಕಿ. ಇದರಲ್ಲಿ ಯಾವುದಾದರೊಂದು ಅಥವಾ ಅನುಮಾನ ದಟ್ಟವಾದರೆ ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಅನುಸರಿಸಿ ಪ್ರಮಾಣಿಸಿ. ಒಂದು ವೇಳೆ ನಿಜವೇ ಅನ್ನಿಸಿದರೆ ಯಾವುದೇ ಅಳುಕಿಲ್ಲದೇ ನಿಮ್ಮ ಮನೆಯ ಹಿರಿಯರಿಗೆ, ಮತ್ತು ಅವರ ಮೂಲಕ ಆಯಾ ಊರಿನ ಪೋಲೀಸರಿಗೆ ಲಿಖಿತ ದೂರು ಸಲ್ಲಿಸಿ ಈ ಖದೀಮರಿಗೆ ತಕ್ಕ ಬುದ್ಧಿ ಕಲಿಸಿ.

 

ಟೂ ವೇ ಮಿರರ್

ಹೌದು,ಟೂ ವೇ ಮಿರರ್ ಅಥವಾ ಒಂದು ಬದಿಯಿಂದ ಕನ್ನಡಿ, ಇನ್ನೊಂದು ಬದಿಯಿಂದ ಪಾರದರ್ಶಕವಾದ ನಿಲುವುಗನ್ನಡಿ. ಈ ಬಗೆಯ ಕನ್ನಡಿಗಳನ್ನು ಕ್ಯಾಮೆರಾ ಬದಲಾಗಿ ಅಳವಡಿಸಲಾಗಿರುತ್ತದೆ. ಅದರ ಹಿಂದೆ ದೊಡ್ಡ ಗಾತ್ರದ ಕ್ಯಾಮೆರಾ ನಿಲ್ಲಿಸಲಾಗಿರುತ್ತದೆ. ಸಾಮಾನ್ಯವಾಗಿ ಈ ಕನ್ನಡಿಗಳು ಗೋಡೆಗೆ ಅಂಟಿಸಿದಂತಿರುತ್ತವೆ. ಕೇವಲ ನೋಡುವ ಮೂಲಕ ಈ ಕನ್ನಡಿ ಟೂ ವೇ ಎಂದು ಕಂಡು ಹಿಡಿಯಲು ಸಾಧ್ಯವಿಲ್ಲ. ಆದರೆ ಇದನ್ನು ಕಂಡುಹಿಡಿಯಲು ಸುಲಭ ವಿಧಾನವೊಂದಿದೆ.

 

ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದರೆ ಕಂಡುಹಿಡಿಯುವುದು ಹೇಗೆ?

ಇಂದು ಹೆಚ್ ಡಿ ಗುಣಮಟ್ಟದ ವೀಡಿಯೋವನ್ನು ಪುಟ್ಟ ಬಟನ್ ಗಾತ್ರದ ಕ್ಯಾಮೆರಾಗಳಿವೆ. ಇದನ್ನು ಸೂಕ್ಷ್ಮವಾಗಿ ಯಾವುದಾದರೂ ಅನುಮಾನ ಬರದ ಚುಕ್ಕೆ ಇರುವಂತಹ ಚಿತ್ರ ಅಥವಾ ಇನ್ನಾವುದೋ ವಸ್ತುಗಳ ಜೊತೆ ಅನುಮಾನ ಬರದಂತೆ ಅಳವಡಿಸಲಾಗುತ್ತದೆ. ಇದನ್ನು ಕಂಡುಹಿಡಿಯಲು ಕೆಲವು ವಿಧಾನಗಳಿವೆ. ಮೊದಲು ಕೋಣೆಯಲ್ಲಿರುವ ರಂಧ್ರವನ್ನ ಹುಡುಕಿ ಕೋಣೆಯ ಕನ್ನಡಿಯ ಫ್ರೇಮ್’ನಲ್ಲಿ ಅಥವಾ ಗೋಡೆಯ ಯಾವುದೇ ಭಾಗದಲ್ಲಿ ಸಣ್ಣ ರಂಧ್ರವೇನಾದರೂ ಇದೆಯಾ ಎಂದು ಗಮನಿಸಿ, ಅಥವಾ ರೂಮಿನ ಕಿಟಕಿ, ಬಾಗಿಲುಗಳೆಲ್ಲವನ್ನೂ ಮುಚ್ಚಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಫೋಟೋ ವೈರಲ್: ಸಿಎಂ ಬಸವರಾಜ ಬೊಮ್ಮಾಯಿ ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ

Mon Dec 27 , 2021
ಬೆಳಗಾವಿ, ಡಿಸೆಂಬರ್ 27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮೊಣಕಾಲು ನೋವಿನ ಸಮಸ್ಯೆ ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಅದರೆ ಇದೀಗ ಬೊಮ್ಮಾಯಿಯವರು ಮೈಸೂರು ಮೂಲದ ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಕೂಡ ಮೊಣಕಾಲು ನೋವಿನ ಸಮಸ್ಯೆ ಬಾಧಿಸಿದ್ದ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದ ನಾಟಿ ವೈದ್ಯ ಲೋಕೇಶ್ […]

Advertisement

Wordpress Social Share Plugin powered by Ultimatelysocial