ಫೋಟೋ ವೈರಲ್: ಸಿಎಂ ಬಸವರಾಜ ಬೊಮ್ಮಾಯಿ ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ

ಫೋಟೋ ವೈರಲ್: ಸಿಎಂ ಬಸವರಾಜ ಬೊಮ್ಮಾಯಿ ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ

ಬೆಳಗಾವಿ, ಡಿಸೆಂಬರ್ 27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮೊಣಕಾಲು ನೋವಿನ ಸಮಸ್ಯೆ ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.

ಅದರೆ ಇದೀಗ ಬೊಮ್ಮಾಯಿಯವರು ಮೈಸೂರು ಮೂಲದ ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಕೂಡ ಮೊಣಕಾಲು ನೋವಿನ ಸಮಸ್ಯೆ ಬಾಧಿಸಿದ್ದ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದ ನಾಟಿ ವೈದ್ಯ ಲೋಕೇಶ್ ಅವರಿಂದ ಬಸವರಾಜ ಬೊಮ್ಮಾಯಿಯವರು ಕೂಡ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಫೋಟೋ ಇದೀಗ ವೈರಲ್ ಆಗಿದೆ.

ನಾಟಿ ವೈದ್ಯರಾಗಿರುವ ಲೋಕೇಶ್ ಬ್ಲ್ಯಾಕ್ ಫಂಗಸ್‌ಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿ ಪ್ರಸಿದ್ಧಿ ಪಡೆದಿದ್ದಾರೆ. ಈ ಬಗ್ಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಿದ್ದರು. ಲೋಕೇಶ್ ಅವರು ಇದಾಗಲೇ ಬ್ಲ್ಯಾಕ್ ಫಂಗಸ್ ಮಾತ್ರವಲ್ಲದೇ ಕ್ಯಾನ್ಸರ್, ಕೊರೊನಾ ಸೇರಿದಂತೆ ವಿವಿಧ ಕಾಯಿಲೆಗಳಿಗೆ ನಾಟಿ ಔಷಧ ನೀಡಿದ್ದಾರೆ. ಅವರಿಂದಲೇ ಈಗ ಮಂಡಿ ನೋವಿನ ಚಿಕಿತ್ಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡೆಯುತ್ತಿದ್ದಾರೆ.

ಬಸವರಾಜ ಬೊಮ್ಮಾಯಿಯವರು ಸದ್ಯ ಗುಣಮುಖರಾಗುತ್ತಿದ್ದು, ಅವರಿಗೆ ದಿನಕ್ಕೆ ಎರಡು ಬಾರಿ ಔಷಧದ ಜೊತೆಗೆ ಮೂಳೆಗಳು ಕ್ಯಾಲ್ಸಿಯಂ ಹೆಚ್ಚಿಸುವ ಹಾಗೂ ವಿಟಮಿನ್ ಡಿ ಅಪಾರ ಪ್ರಮಾಣದಲ್ಲಿ ಇರುವ ಮೇಕೆ ಹಾಲು ಕುಡಿಯುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರೈಲ್ವೇ ಪ್ರಯಾಣಿಕರೇ ಗಮನಿಸಿ 

Mon Dec 27 , 2021
ಈ ಕುರಿತು ಅನೀಶ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ, ಹುಬ್ಬಳ್ಳಿ ಇವರು ಪ್ರಕಟಣೆ ಹೊರಡಿಸಿದ್ದು, ಈ ಕೆಳಕಂಡಂತೆ ರೈಲು ಸೇವೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. 1) ದಿನಾಂಕ 07.01.2022 ರ ರೈಲು ಸಂಖ್ಯೆ 17392 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಕೆ.ಎಸ್.ಆರ್ ಬೆಂಗಳೂರು ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು. 2) ದಿನಾಂಕ 07.01.2022 ರ ರೈಲು ಸಂಖ್ಯೆ […]

Advertisement

Wordpress Social Share Plugin powered by Ultimatelysocial