ಪ್ರಪಂಚದಲ್ಲಿ ಪ್ರತಿದಿನವೂ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ.

 

 

 

ಬಾಗಲಕೋಟೆ:ಪ್ರಪಂಚದಲ್ಲಿ ಪ್ರತಿದಿನವೂ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲ ವಿಷಯಗಳನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. 2 ಮುಖ, 5 ಕಾಲಿನ ಕರುಗಳು ಮತ್ತು ಪ್ರಾಣಿಗಳನ್ನು ನೀವು ನೋಡೇ ಇರುತ್ತೀರಿ. ಒಂದೇ ಬಾರಿಗೆ 2 ಕರುಗಳಿಗೆ ಜನ್ಮನೀಡಿದ ಹಸುಗಳನ್ನೂ ನೀವು ಕಂಡಿರುತ್ತೀರಿ.

ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದ್ದು, ಅಚ್ಚರಿ ಮೂಡಿಸಿದೆ.

ಹೌದು, ಅಚ್ಚರಿಯಾದರೂ ಇದು ನಿಜ .ಬಾಗಲಕೋಟೆಜಿಲ್ಲೆಯ ಆಸಂಗಿ ಗ್ರಾಮದಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದೆ. ಈ ಘಟನೆ ಸ್ಥಳೀಯರಲ್ಲಿ ದೊಡ್ಡ ಅಚ್ಚರಿಯನ್ನುಂಟುಮಾಡಿದೆ. ಜನಿಸಿದ 4 ಕರುಗಳು ಸಹ ಆರೋಗ್ಯವಾಗಿದ್ದು, ಹಸುವಿನ ಮಾಲೀಕರ ಮೊಗದಲ್ಲಿ ಸಂತಸ ಮೂಡಿದೆ.

ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ರವೀಂದ್ರ ಬಾಳಪ್ಪ ಶಿರಹಟ್ಟಿ ಎಂಬುವರಿಗೆ ಸೇರಿದ ಈ ಆಕಳು 4 ಕರುಗಳಿಗೆ ಜನ್ಮ ನೀಡಿದೆ. ಇದರಲ್ಲಿ 2 ಹೆಣ್ಣು ಕರುಗಳಾದರೆ, 2 ಹೋರಿ ಕರುಗಳಿವೆ. ಹೈನುಗಾರಿಕೆ ಮಾಡುತ್ತಿದ್ದ ರವೀಂದ್ರರ ಹಸು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿರುವುದು ಮನೆಮಂದಿಯ ಖುಷಿಯನ್ನು ಹೆಚ್ಚಿಸಿದೆ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಅಚ್ಚರಿಯ ಜೊತೆಗೆ ಬಹಳಷ್ಟು ಸಂತೋಷವಾಗಿದೆ ಎಂದು ರೈತ ರವೀಂದ್ರ ಅವರು ಖುಷಿ ಹಂಚಿಕೊಂಡಿದ್ದಾರೆ.

ನಮ್ಮ ಕುಟುಂಬ ಹಲವು ತಲೆಮಾರುಗಳಿಂದ ಒಕ್ಕಲುತನದ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬರುತ್ತಿದೆ. ತಾಯಿ ಸೇರಿದಂತೆ ಕರುಗಳು ಆರೋಗ್ಯದಿಂದ ಇವೆ. 4 ಕರುಗಳಿಗೆ ಏಕಕಾಲಕ್ಕೆ ಜನ್ಮ ನೀಡಿದ ಹಸುವಿಗೆ ಇದೇ ಮೊದಲ ಹೆರಿಗೆ. ಈ ರೀತಿಯ ವಿಶೇಷ ಹೆರಿಗೆ ಒಮ್ಮೆಯೂ ಆಗಿಲ್ಲವೆಂದು ಅವರು ಹೇಳಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IAS ಪಾಸ್​ ಮಾಡಲು ಎಷ್ಟು ಗಂಟೆ ಓದಬೇಕು?

Sun Jan 15 , 2023
    ನವದೆಹಲಿ: ಐಎಎಸ್​ ಅಧಿಕಾರಿಯಾಗಲು ದಿನಕ್ಕೆ ಎಷ್ಟು ಗಂಟೆ ಅಧ್ಯಯನ ಮಾಡಬೇಕು ಎಂ ವಿದ್ಯಾರ್ಥಿನಿಯ ಪ್ರಶ್ನೆಗೆ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಅವರು ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಟೀನಾ ಡಾಬಿ ಅವರು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್​ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಯೋನಿರ್​ ಜೈಸನ್ ಶಕ್ತಿ (ಮಹಿಳೆಯರು ಮೊದಲು) ಕಾರ್ಯಕ್ರಮದ ಭಾಗವಾಗಿ ಜೈಸಲ್ಮೇರ್​ನ ಇಂಧಿರಾ ಗಾಂಧಿ ಇಂದೋರ್​ ಸ್ಟೇಡಿಯಂನಲ್ಲಿ ವಿದ್ಯಾರ್ಥಿನಿಯರಿಗೆ ವೃತ್ತಿ ಸಮಾಲೋಚನೆ ಕುರಿತು […]

Advertisement

Wordpress Social Share Plugin powered by Ultimatelysocial