‘ಬಾಗ್ಲು ತೆಗಿ ಮೇರಿ ಜಾನ್’ ,ನವರಸ ನಾಯಕ ಜಗ್ಗೇಶ್;

ನವರಸ ನಾಯಕ ಜಗ್ಗೇಶ್ ಹಾಗೂ ‘ನೀರ್‌ದೋಸೆ’ ನಿರ್ದೇಶಕ ವಿಜಯ್ ಪ್ರಸಾದ್ ಇಬ್ಬರೂ ಜೊತೆಯಾಗಿದ್ದಾರೆ ಅಂದರೆ, ಅಲ್ಲಿ ಹಾಸ್ಯಕ್ಕೇನು ಕಮ್ಮಿ ಇರುವುದಿಲ್ಲ. ಚೇಷ್ಟೇ, ಕುಚೇಷ್ಟೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡುವ ಈ ಜೋಡಿ ತೋತಾಪುರಿ ಕಥೆಯೊಂದಿಗೆ ತೆರೆಮೇಲೆ ಬರುವುದಕ್ಕೆ ಸಜ್ಜಾಗಿದೆ.

ಈಗ ‘ತೋತಾಪುರಿ’ ಸಿನಿಮಾದ ಹೊಚ್ಚ ಹೊಸ ಹಾಡೊಂದು ಬಿಡುಗಡೆಯಾಗಿದ್ದು, ಕಾಮಿಡಿ ಕಚಗುಳಿ ಇಡುತ್ತಿದೆ.

‘ತೋತಾಪುರಿ’ ನಿರ್ದೇಶಕ ವಿಜಯ್​ ಪ್ರಸಾದ್ ಸಿನಿಮಾ ಆರಂಭದಿಂದಲೂ ಕಚಗುಳಿ ಇಡುವ ಬರಹದಿಂದಲೇ ಪ್ರೇಕ್ಷಕರ ಮುಖದಲ್ಲಿ ನಗು ತರಿಸುತ್ತಿದ್ದಾರೆ. ಈಗ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಕಾಂಬಿನೇಷನ್ ಹಾಡಿನ ಮೂಲಕ ಹಾಸ್ಯದ ಕಚಗುಳಿ ಇಡುತ್ತಿದ್ದಾರೆ. ‘ಬಾಗ್ಲು ತೆಗಿ ಮೇರಿ ಜಾನ್’ ಸಾಂಗ್ ಜಗ್ಗೇಶ್ ವಿಭಿನ್ನ ಮ್ಯಾನರಿಸಂನಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ತೊಟ್ಟು ಬೊಟ್ಟಿನ ಮೊದಲ ಹಾಡು ರಿಲೀಸ್
‘ತೋತಾಪುರಿ’ ಪೋಲಿ ಸಿನಿಮಾ ಅಲ್ಲ. ಇಲ್ಲಿ ಡೈಲಾಗ್ ಹಾಗೂ ದೃಶ್ಯಗಳ ಮೂಲಕ ಚೇಷ್ಟೆ ಮಾಡಲಾಗಿದೆ ಎಂದು ನಿರ್ದೇಶಕರು ಈ ಹಿಂದೆನೇ ಹೇಳಿದ್ದಾರೆ. ಈಗ ರಿಲೀಸ್ ಆಗಿರುವ ‘ತೋತಾಪುರಿ’ ಸಿನಿಮಾದ ಮೊದಲ ಹಾಡಿನಲ್ಲಿಯೂ ಚೇಷ್ಟೆಯೇ ತುಂಬಿ ತುಳುಕುತ್ತಿದೆ. ‘ಚೂತ್ಯಾ’ ಎಂಬ ಪದದಿಂದ ಆರಂಭ ಆಗುವ ಈ ಹಾಡು ಚೇಷ್ಟೇ ಕುಚೇಷ್ಟೆ ಮಾಡಲೆಂದೇ ಸಿನಿಮಾದಲ್ಲಿ ಇಟ್ಟಿರಬಹುದೆಂಬ ಅನುಮಾನ ಮೂಡದೇ ಇರುವುದಿಲ್ಲ.

ಸಾಹಿತ್ದಲ್ಲೂ ಬರೀ ಚೇಷ್ಟೆ-ಕುಚೇಷ್ಟೆ

‘ಬಾಗ್ಲು ತೆಗಿ ಮೇರಿ ಜಾನ್’ ಈ ಹಾಡನ್ನು ‘ತೋತಾಪುರಿ’ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಬರೆದಿದ್ದಾರೆ. ಕಚಗುಳಿ ಇಡುವ ಸಾಹಿತ್ಯಕ್ಕೆ ಅನೂಪ್ ಸೀಳಿನ್ ಟ್ಯೂನ್ ಹಾಕಿದ್ದಾರೆ. ಕನ್ನಡ, ಹಿಂದಿ ಹಾಗೂ ಉರ್ದು ಮಿಶ್ರಿತ ಸಾಂಗ್‌ನಲ್ಲಿ ಆಗಾಗ ಹಿಂದಿ ಸಿನಿಮಾದ ಟೈಟಲ್‌ಗಳೂ ಬಂದು ಹೋಗುತ್ತವೆ. ಬಾಗ್ಲು ತೆಗಿ ಮೇರಿ ಜಾನ್, ಸ್ವಲ್ಪ ತಡಿ ಮೇರಿ ಜಾನ್ ಚಿಲ್ಕ ಟೈಟು ಪ್ಯಾರಿ ಜಾನ್.. ಕ್ಯೂಂಕಿ ಲೈಫು ಗೋಲಿ ಸೋಡಾ, ಗ್ಯಾಸು ಹೋದರೆ ಸಾದಾ ಬೀಡಾ.. ಇಂತಹದ್ದೇ ಒಂದಿಷ್ಟು ಕಚಗುಳಿ ಇಡುವ ಸಾಹಿತ್ಯವನ್ನು ಈ ಹಾಡಿನಲ್ಲಿ ಕೇಳಿಬಹುದು.

ಜಗ್ಗೇಶ್ – ಅದಿತಿ ಮ್ಯಾನರಿಸಂ ಸೂಪರ್

ಈ ಹಾಡಿನ ಹೈಲೈಟ್ ಅಂದರೆ, ನವರಸ ನಾಯಕ ಜಗ್ಗೇಶ್. ಕ್ಷಣಕ್ಕೊಂದು ಭಾವನೆಗಳನ್ನು ಹೊರಹಾಕುವ ಜಗ್ಗೇಶ್ ನೋಡುವರ ಮುಖದಲ್ಲಿ ನಗು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅದಿತಿ ಪ್ರಭುದೇವ ಈ ಹಾಡಿನಲ್ಲಿ ಸುಂದರವಾಗಿ ಕಾಣುತ್ತಾರೆ. ಇವರಿಬ್ಬರ ಕಾಂಬಿನೇಷನ್ ಜೊತೆ ವೀಣಾ ಸುಂದರ್ ಅವರ ಕಾಸ್ಟ್ಯೂಮ್, ಮ್ಯಾನರಿಸಂ ಕೂಡ ಗಮನ ಸೆಳೆಯುತ್ತೆ. ಈ ಸೆಟ್ ಸಾಂಗ್ ಪ್ರೇಕ್ಷಕರಿಗೆ ಕಚಗುಳಿ ಇಡುತ್ತೆ. ಇದೇ ಹಾಡು ಇನ್ನು ಉಳಿದ ನಾಲ್ಕು ಭಾಷೆಗಳಲ್ಲಿ ಹೇಗೆ ಮೂಡಿ ಬಂದಿರಬಹುದು ಎನ್ನವ ಕುತೂಹಲ ಕೂಡ ಇದೆ.

‘ತೋತಾಪುರಿ’ ಹಾಡಿನ ಮೈನಸ್ ಪಾಯಿಂಟ್ ಏನು?

‘ತೋತಾಪುರಿ’ ಸಾಂಗ್ ಸಂಗೀತ ಪ್ರಿಯರಿಗೆ ಇಷ್ಟ ಆಗಬಹುದು. ಆದರೆ, ಈ ಹಾಡಿನಲ್ಲಿ ಹಿಂದಿ ಹಾಗೂ ಉರ್ದು ಭಾಷೆಯ ಬಳಕೆ ಕಡಿಮೆ ಇದ್ದಿದ್ದರೆ, ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಇದೊಂದು ಜಾಲಿ ಮೂಡಿನ ಹಾಡು ಆಗಿರುವ ಕಾರಣಕ್ಕೆ ಗಂಭೀರವಾಗಿ ಪರಿಗಣಿಸುವಂತಿಲ್ಲ. ಸಾಹಿತ್ಯ, ಸಂಗೀತ ಹಾಗೂ ಕಲಾವಿದರ ಮ್ಯಾನರಿಸಂ ಎಲ್ಲವೂ ಕೇವಲ ಜನರ ನಗುವಿಗಾಗಿ ಮಾತ್ರ. ಈ ಕಾರಣಕ್ಕೆ ‘ತೋತಾಪುರಿ’ ಮೊದಲ ಸಾಂಗ್ ಹಾಸ್ಯಪ್ರಿಯರಿಗಂತೂ ಇಷ್ಟ ಆಗಿರುತ್ತೆ ಅಂತ ಭಾವಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ 15: ಶಮಿತಾ ಶೆಟ್ಟಿ ಟ್ವಿಟರ್ನಲ್ಲಿ ಸೆಲೆಬ್ರಿಟಿಗಳ ಬೆಂಬಲ;

Mon Jan 31 , 2022
ದೆಹಲಿ: ತನ್ನ ಮುಂಬರುವ ಚಿತ್ರ ಗೆಹ್ರೈಯಾನ್‌ನ ಪ್ರಚಾರಕ್ಕಾಗಿ ಕಾರ್ಯಕ್ರಮಕ್ಕೆ ಬಂದ ದೀಪಿಕಾ ಪಡುಕೋಣೆ, ಬಿಗ್ ಬಾಸ್ 15 ರ ಫೈನಲ್‌ನಿಂದ ಶಮಿತಾ ಶೆಟ್ಟಿಯನ್ನು ಹೊರಹಾಕುವುದಾಗಿ ಘೋಷಿಸಿದ ನಂತರ ಮತ್ತು ಅವರನ್ನು ಮನೆಯಿಂದ ಹೊರಗೆ ಕರೆತಂದ ನಂತರ ಹಲವಾರು ಹೃದಯಗಳು ಮುರಿದವು. ಬಿಗ್ ಬಾಸ್ 15 ರ ಮನೆಯ ಒಳಗೆ ಮತ್ತು ಹೊರಗೆ ಶಮಿತಾ ಆಗಾಗ್ಗೆ ಚರ್ಚೆಯ ವಿಷಯವಾಗಿದ್ದರು. ವಾಹಿನಿಯು ಆಕೆಗೆ ಒಲವು ತೋರುತ್ತಿದೆ ಎಂಬ ಆರೋಪದಿಂದ ಹಿಡಿದು, ಆಕೆ ತನ್ನ […]

Advertisement

Wordpress Social Share Plugin powered by Ultimatelysocial