ಬಸವಲಿಂಗಯ್ಯ ಹಿರೇಮಠ ಜನಪದ ಕಲಾವಿದ

ಬಸವಲಿಂಗಯ್ಯ ಹಿರೇಮಠ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ಗ್ರಾಮದಲ್ಲಿ 1959ರಲ್ಲಿ ಜನಿಸಿದರು. ತಮ್ಮ ಐದನೇ ವಯಸ್ಸಿನಲ್ಲಿಯೇ ಹಾರ್ಮೋನಿಯಮ್‌ ನುಡಿಸುತ್ತ ಭಜನೆ ಸಂಗೀತದಲ್ಲಿ ಪಾಲ್ಗೊಳ್ಳುತ್ತಿದ್ದರು. ಶಾಲಾ, ಕಾಲೇಜು ದಿನಗಳಲ್ಲಿ ಗ್ರಾಮೀಣ ರಂಗಭೂಮಿ ನಾಟಕಗಳಲ್ಲಿ ನಟನಾಗಿ, ಹಾಡುಗಾರನಾಗಿ ರಾಜ್ಯಾದ್ಯಂತ ಸಂಚರಿಸಿ ಪ್ರದರ್ಶನ ನೀಡಿದ್ದರು. ಜಾನಪದ ವಿಷಯವನ್ನು ಆಯ್ದುಕೊಂಡು ಎಂ. ಎ. ಪದವಿ ಗಳಿಸಿದ್ದರು.
ಬಸವಲಿಂಗಯ್ಯ ಹಿರೇಮಠ ನಟ, ಗಾಯಕ, ಸಂಗೀತ ನಿರ್ದೇಶಕ ಹೀಗೆ ಹತ್ತು ಹಲವು ಪ್ರತಿಭಾನ್ವಿತ ರೂಪ ತಳೆದಿದ್ದವರು. ಇವರು ದಾಸ, ಶರಣ, ತತ್ವಪದಗಳು, ಬಯಲಾಟ ಈ ಎಲ್ಲ ಪ್ರಕಾರದ ಸಾಹಿತ್ಯವನ್ನು ದೇಶ ವಿದೇಶಗಳಲ್ಲಿ ಪಸರಿಸಿದ್ದರು.
ಬಸವಲಿಂಗಯ್ಯ ಹಿರೇಮಠ 1983ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದರು. ಬಿ.ವಿ.ಕಾರಂತರೊಂದಿಗೆ ರಂಗಸಂಗೀತ ಕುರಿತು ಅಭ್ಯಾಸ ಮಾಡಿ, ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ‘ಶ್ರೀ ಕೃಷ್ಣ ಪಾರಿಜಾತ’ವನ್ನು ಮೂರು ಗಂಟೆ ಕಾಲಕ್ಕೆ ಅಳವಡಿಸಿ ಪ್ರೇಕ್ಷಕರಿಗೆ ಮನ ಮುಟ್ಟುವಂತೆ ಮಾಡಿ ಸಾವಿರಾರು ಪ್ರದರ್ಶನಗಳು ಕಾಣುವಂತೆ ಮಾಡಿದರು. ಪತ್ತಾರ ಮಾಸ್ತರರ ‘ಸಂಗ್ಯಾ ಬಾಳ್ಯಾ’ ಪದ್ಯಕ್ಕೆ ರಂಗರೂಪ ನೀಡಿದ್ದರು.
ಬಸವಲಿಂಗಯ್ಯ ಹಿರೇಮಠ ತಾವು ಸ್ಥಾಪಿಸಿದ ಜಾನಪದ ಸಂಶೋಧನಾ ಸಂಸ್ಥೆ ಮೂಲಕ ನೂರಾರು ಯುವ ಕಲಾವಿದರಿಗೆ ಜಾನಪದ ಕಲಾ ತರಬೇತಿ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಹೋದರನಿಗೆ ಠಕ್ಕರ್ ಕೊಡಲು ಸಿದ್ಧವಾದ ರೆಡ್ಡಿ....

Mon Jan 9 , 2023
ಜನಾರ್ಧನರೆಡ್ಡಿ ಆಟದಿಂದ ಸೋಮಶೇಖರ್ ರೆಡ್ಡಿ ಗೆ ಸಂಕಷ್ಟ…? ಮುಸ್ಲಿಂ ಸಮುದಾಯದ ಮುಖಂಡರನ್ನು ಪತ್ನಿ ಮೂಲಕ ಭೇಟಿ ಮಾಡಸ್ತಿರೋ ರೆಡ್ಡಿ….. ಗಂಗಾವತಿಯಲ್ಲಿ ಕುಳಿತು ಬಳ್ಳಾರಿಯ ರಾಜಕಾರಣ… ತಮ್ಮನ ರಾಜಕೀಯ ತಂತ್ರಕ್ಕೆ ಅಣ್ಣ ಕಂಗಾಲು….. ಕೆ ಆರ್ ಪಿ ಪಿ ಪಕ್ಷದ ನಾಯಕಿ ಅರುಣಾ ಲಕ್ಷ್ಮೀ ಮಿಂಚಿನ ಸಂಚಾರ…… ಪಕ್ಷದ ಪ್ರಚಾರದ ವಾಹನದಲ್ಲಿ ತಡರಾತ್ರಿ ಸಂಚಾರ…. ನಗರದ ಸಂಗಮ್ ಸರ್ಕಲ್ ನಲ್ಲಿರೋ ದರ್ಗಾಕ್ಕೆ ಭೇಟಿ…… ಮುಸ್ಲಿಂ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ ಅರುಣಾ […]

Advertisement

Wordpress Social Share Plugin powered by Ultimatelysocial