ಚಳಿಗಾಲದಲ್ಲಿ ಕಿವಿ ನೋವುಗೆ ಮನೆ ಮದ್ದು ಟ್ರೈ ಮಾಡಿ : ಇಲ್ಲದೆ HEALTH TIPS

ಚಳಿಗಾಲ ಅಂದರೆ ಸೂರ್ಯನ ಬೆಳಕು ಅಷ್ಟಾಗಿ ಕಾಣದ ಕಾಲ.
ಮೈಕೊರೆಯುವ ಚಳಿ. ಹಾಸಿಗೆ ಬಿಟ್ಟು ಮೇಲೆ ಹೇಳಲಾಗದ ಪರಿಸ್ಥಿತಿ.
ಬೆಚ್ಚಗಿನ ಹೊದಿಕೆ ಮಲಗಿಕೊಂಡು ಮಲಗಿದ್ದಲ್ಲಿಯೇ ಮಲಗ ಬೇಕು ಎನ್ನುವ ಸೋಮಾರಿತನದ ಭಾವನೆ.ಇದರ ನಡುವೆ ಚಳಿಗಾಲ ಅಂದರೆ ಅನಾರೋಗ್ಯದ ಕಾಲ ಎಂದೇ ಅರ್ಥ. ಮಾಗಿ ಕಾಲದಲ್ಲಿ ಹೆಚ್ಚು ಚಳಿ ಇರುವ ಕಾರಣ ಅನೇಕ ಆರೋಗ್ಯ ಸಮಸ್ಯೆಗಳು ಚಳಿಗಾಲದಲ್ಲಿ ಬಿಟ್ಟು ಬಿಡದೆ ಕಾಡುತ್ತವೆ.

ಅದರಲ್ಲೂ ತಲೆನೋವು, ವೈರಲ್ ಫೀವರ್, ಶೀತ ನೆಗಡಿ ಕೆಮ್ಮು ಸಾಮಾನ್ಯವಾದ ಕಾಯಿಲೆ ಗಳಂತೆ ಕಂಡರು ಚಳಿಗಾಲದಲ್ಲಿ ದೊಡ್ಡದಾಗಿರುತ್ತದೆ. ಇದರ ಜೊತೆಗೆ ಹೆಚ್ಚು ತಳಿ ಕಂಡುಬರುವುದರಿಂದ ಕಿವಿ ನೋವಿನ ಸಮಸ್ಯೆ ಚಳಿಗಾಲದಲ್ಲಿ ಕಂಡುಬರುವುದು.

ಚಳಿಗಾಲದಲ್ಲಿ ಕಾಡುವ ಶೀತ ಹಲವು ಆರೋಗ್ಯ ಸಮಸ್ಯೆಗಳಿಗೆ ಮೂಲ.ಶೀತದಿಂದಾಗಿ, ಮೂಗಿನಿಂದ ಕಿವಿಗೆ ಹೋಗುವ ಯುಸ್ಟಾಚಿಯನ್ ಟ್ಯೂಬ್ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಸೋಂಕು ಹೆಚ್ಚಾಗುತ್ತದೆ ಮತ್ತು ಉರಿಯೂತದ ಸಮಸ್ಯೆಯು ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ.

ಈರುಳ್ಳಿ ರಸ
ಅಡುಗೆಮನೆಯಲ್ಲಿ ಪ್ರತಿನಿತ್ಯ ಸಿಗುವ ಈರುಳ್ಳಿ ಹಲವು ಆರೋಗ್ಯ ಸಮಸ್ಯೆಗಳಿಗೆ ಉಪಯೋಗಕಾರಿ. ಅದರಲ್ಲೂ ಚಳಿಗಾಲದಲ್ಲಿ ಶೀತ ದಿಂದ ಉಂಟಾಗುವ ಕಿವಿ ನೋವಿನ ಸಮಸ್ಯೆ ಶಮನ ಮಾಡಲು ಈರುಳ್ಳಿ ರಸ ಮನೆ ಮದ್ದಾಗಿದೆ.
ಚಳಿಗಾಲದಲ್ಲಿ ಕಿವಿ ನೋವು ಕಾಣಿಸಿಕೊಂಡ ವೇಳೆ ಎರಡರಿಂದ ಮೂರು ಹನಿ ಈರುಳ್ಳಿ ರಸವನ್ನು ಕಿವಿಗೆ ಹಾಕಿಕೊಳ್ಳುವುದರಿಂದ ಕಿವಿ ನೋವು ಉಪಶಮನವಾಗಲಿದೆ.
ಸಾಸಿವೆ ಎಣ್ಣೆ
ಅಡುಗೆ ಮನೆಯಲ್ಲಿ ಸದಾ ಸಿಗುವ ಸಾಸಿವೆ ಎಣ್ಣೆ ಸಹ ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಹಾಯಕವಾಗಿದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಅದರ ಕೆಲವು ಹನಿಗಳನ್ನು ಯಾವ ಕಿವಿ ನೋವಾಗಿದ್ಯೋ ಆ ಕಿವಿಗೆ ಹಾಕಿದರೆ ತಕ್ಷಣಕ್ಕೆ ನೋವುಶಮನ ವಾಗಲಿದೆ.
ಬೆಳ್ಳುಳ್ಳಿ ಎಣ್ಣೆ
ಸಾಮಾನ್ಯವಾಗಿ ನಾವು ಬೆಳ್ಳುಳ್ಳಿಯನ್ನು ಬಹುಉಪಯೋಗಿ ಎಂದರೂ ತಪ್ಪಾಗಲಾರದು. ಅಡುಗೆ ಮಾಡುವುದರಿಂದ ಹಿಡಿದು ಮನೆಯಲ್ಲಿನ ಹಲವು ಸಮಸ್ಯೆಗಳ ನಿವಾರಣೆಗೆ ಬೆಳ್ಳುಳ್ಳಿ ಮದ್ದು. ಚಳಿಗಾಲದಲ್ಲಿ ಶೀತ ದಿಂದ ಉಂಟಾಗುವ ಕಿವಿ ನೋವಿಗೆ ಬೆಳ್ಳುಳ್ಳಿ ಎಣ್ಣೆಯಿಂದ ನಮಗೆ ಪರಿಹಾರ ಸಿಗಲಿದೆ.
ಉಪ್ಪು
ಅಡುಗೆಯಲ್ಲಿ ಉಪ್ಪಿದ್ದರೆ ಅಷ್ಟೇ ಊಟದ ರುಚಿ.ಅಲ್ಲದೇ ಉಪ್ಪು ಮೈಕೈ ನೋವು ಶಮನ ಮಾಡಲು ಸಹಕಾರಿ. ಅದೇ ರೀತಿ ಉಪ್ಪಿನಿಂದ ಕಿವಿನೋವು ಕೂಡ ಕಡಿಮೆ ಮಾಡಿಕೊಳ್ಳಬಹುದು.
ಬಾಣಲೆಯಲ್ಲಿ ಉಪ್ಪನ್ನು ಹಾಕಿ ಬಿಸಿ ಮಾಡಿ. ಇದಾದ ನಂತರ ಬಟ್ಟೆಯಲ್ಲಿ ಹಾಕಿ ಅದನ್ನು ಕಟ್ಟಿ. ಅದರ ಬಿಸಿಯನ್ನು ಕಿವಿಗೆ ಮುಟ್ಟಿಸಿ. ಅದರಿಂದ ಹೊರಹೊಮ್ಮುವ ಶಾಖದಿಂದ ನೋವು ದೂರವಾಗುತ್ತದೆ. ಈ ರೀತಿಯಾಗಿ, ಬಿಸಿನೀರಿನ ಬಾಟಲಿಯನ್ನು ಸಹ ಬಳಸಬಹುದು.
ಇನ್ನು ತೀವ್ರ ಕಿವಿನೋವು ಕಾಣಿಸುತ್ತಿದ್ದರೆ, ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸೂಕ್ತವಾದ ರೀತಿಯ ಪರೀಕ್ಷೆ ಮಾಡಿಸಿಕೊಂಡು, ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರುಚಿಕರವಾದ ಎಗ್ ಬಿರಿಯಾನಿ

Tue Dec 28 , 2021
 ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‍ವೆಜ್ ಅಡುಗೆಯಲ್ಲಿ ಮೊಟ್ಟೆ ಬಿರಿಯಾನಿ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಮೊಟ್ಟೆ ಬಿರಿಯಾನಿ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ. ಬೇಕಾಗುವ ಪದಾರ್ಥಗಳು ಅಕ್ಕಿ- 2ಕಪ್ ಮೊಟ್ಟೆ- 5 ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ- […]

Advertisement

Wordpress Social Share Plugin powered by Ultimatelysocial