ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ( BJP Leader ) ಬದಲಾವಣೆಯ ಪ್ರಶ್ನೆಯೇ ಇಲ್ಲ.

 

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂಬರುವ ವಿಧಾನಸಭಾ ಚುನಾವಣೆ  ಎದುರಿಸಲಾಗುತ್ತದೆ ಎಂಬುದಾಗಿ ಬಿಜೆಪಿ ನಾಯಕರು ಹೇಳ್ತಾ ಇದ್ದಾರೆ.

ಆದ್ರೇ.. ಈ ನಡುವೆಯೂ ನಾಯಕತ್ಚ ಬದಲಾವಣೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬದಲಾವಣೆ ಕುರಿತು ಮಹತ್ವದ ಚರ್ಚೆ ಕೂಡ ತೆರೆ ಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಈ ನಾಯಕತ್ವ ಬದಲಾವಣೆ ಕುರಿತು ಬಿಜೆಪಿ ಹೈಕಮಾಂಡ್ ನಾಯಕರು ಚರ್ಚಿಸಿದ್ದಾರಾ ಎನ್ನುವಂತ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿ.ಎಲ್ ಸಂತೋಷ್ ನಡುವೆ ಪರಸ್ಪರ ಮಾತುಕತೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿಯಿದೆ. ಈ ಹಂತದಲ್ಲಿ ಬೊಮ್ಮಾಯಿ ಬದಲಾವಣೆಗೆ ಕೈ ಹಾಕಿದರೆ ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗಲಿದೆಯಾ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನಗಳ ಜೊತೆಗೆ ನಾಯಕತ್ವ ಬದಲಾವಣೆಯ ಮಹತ್ವದ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ.

ಬೊಮ್ಮಾಯಿ ಬದಲಾವಣೆ ನಂತರ ಆಗುವ ರಾಜಕೀಯ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಬೊಮ್ಮಾಯಿ ನೇತೃತ್ವದಲ್ಲಿ ನಾಯಕತ್ವ ಮುಂದುವರೆಸಬೇಕಾ ಬೇಡವಾ ? ಮುಂದುವರೆಸಬೇಕಾದರೆ ಏನು ಬದಲಾವಣೆ ಮಾಡಬೇಕು ? ಬದಲಾವಣೆ ಮಾಡಿದರೆ ಯಾರನ್ನ ಸಿಎಂ ಸ್ಥಾನದಲ್ಲಿ ಕೂರಿಸಿದರೆ ಪಕ್ಷಕ್ಕೆ ಒಳಿತು.? ಯಡಿಯೂರಪ್ಪ ಮಾತಿಗೆ ಮನ್ನಣೆ ನೀಡಬೇಕಾದರೆ ಏನು ಮಾಡಬೇಕು.? ಚುನಾವಣೆಗೆ ಹೇಗೆ ಬಳಸಿಕೊಳ್ಳಬೇಕು. ? ಹೀಗೆ ಹಲವು ದೃಷ್ಟಿಕೋನದಲ್ಲಿ ರಹಸ್ಯವಾಗಿ ಚರ್ಚಿಯನ್ನು ಬಿಜೆಪಿ ಹೈಕಮಾಂಡ್ ಹಾಗೂ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

1xbet Зеркало Рабочее на сегодня прямо сейчас 1хбет работающее зеркало сейчас

Sat Apr 23 , 2022
1xbet Зеркало Рабочее на сегодня прямо сейчас 1хбет работающее зеркало сейчас 1хбет зеркало рабочее Актуальное на сегодня 1xbet зеркало Content Как сделать ставку через приложение 1xbet? Достоинства и недостатки конторы Игровые автоматы 1 Икс Бет казино 🏒 Простые советы, как увеличить шансы на выигрыш на сайте 1xBet 🔎 Где найти […]

Advertisement

Wordpress Social Share Plugin powered by Ultimatelysocial