ಕಪ್ಪು ಕಲೆ ಹೋಗಲಾಡಿಸಿ ಮುಖದ ಅಂದ ಕಾಪಾಡಿಕೊಳ್ಳಲು ಮನೆಯಲ್ಲಿ ಹೀಗೆ ಮಾಡಿ ಸಾಕು

Beauty Tips: ಕಪ್ಪು ಕಲೆ ಹೋಗಲಾಡಿಸಿ ಮುಖದ ಅಂದ ಕಾಪಾಡಿಕೊಳ್ಳಲು ಮನೆಯಲ್ಲಿ ಹೀಗೆ ಮಾಡಿ ಸಾಕು
ಮುಖದ (Face) ಅಂದ (Beauty) ಕಾಪಾಡಿಕೊಳ್ಳುವುದು ಹೆಂಗಳೆಯರಿಗೆ ದೊಡ್ಡ ತಲೆನೋವು (Headache). ಚರ್ಮದ (Skin) ವಿಚಾರದಲ್ಲಿ ಒಂದಲ್ಲ, ಒಂದು ಸಮಸ್ಯೆಯನ್ನು(Problems) ಹೆಣ್ಣು ಮಕ್ಕಳು (Girls) ಅನುಭವಿಸುತ್ತಾರೆ. ಅದರಲ್ಲೂ ಕಲೆ ರಹಿತ ಚರ್ಮ ಪಡೆಯಲು ಹವಣಿಸುತ್ತಾರೆ.
ಮುಖದ ಮೇಲಿನ ಕಲೆಯಾಗದಂತೆ ಅಥವಾ ಇರೋ ಕಲೆ ಹೋಗಿಸಲು ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಕೆಲವರು ಮುಖದ ಮೇಲೆ ಏನಾದ್ರೂ ಕಪ್ಪು ಕಲೆಗಳು ಕಾಣಿಸಿಕೊಂಡರೆ ಅವರಿಗೆ ಜೀವ ಹೋದಷ್ಟು ಕೀಳರಿಮೆ ಆವರಿಸುತ್ತದೆ. ಯಾವುದೋ ಒಂದು ಕಾರಣದಿಂದ ಮುಖದ ಮೇಲೆ ಕಪ್ಪು ಕಲೆಗಳು, ಮೊಡವೆಯ ಕಲೆಗಳು, ಗಾಯದ ಕಲೆಗಳು ಹಾಗೆ ಉಳಿದು ಬಿಡುತ್ತವೆ. ಈ ಕಪ್ಪು ಕಲೆಗಳು ಮುಖದಲ್ಲಿ ಮೂಡಿದರೆ ನಾವು ಸುಂದರವಾಗಿ ಕಾಣುವುದಿಲ್ಲವೆಂದು ಜಿಗುಪ್ಸೆ, ಬೇಜಾರು ಪ್ರಾರಂಭವಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಕ್ರೀಮ್ ಸೋಪು ಗಳಿಗೆ ನಾವೆಲ್ಲರೂ ಮಾರು ಹೋಗುತ್ತೇವೆ.ಆದ್ರೆ ಇದರ ಬದಲು ಮನೆಯಲ್ಲಿಯೇ ಈ ಕಪ್ಪು ಕಲೆಗಳನ್ನು ಕಡಿಮೆ ಮಾಡಿಕೊಂಡು ಕ್ಲೀನ್ ಮತ್ತು ಕ್ಲಿಯರ್ ಅಂಥಹ ತ್ವಚೆಯನ್ನು ನಿಮ್ಮದಾಗಿಸಿ ಕೊಳ್ಳಲು ಹೀಗೆ ಮಾಡಿದ್ರೆ ಸಾಕು

1) ಸೂರ್ಯನಿಂದ ರಕ್ಷಣೆ: ಮುಖದ ಕಲೆಗಳನ್ನು ತಪ್ಪಿಸಲು, ಮೊದಲನೆಯದಾಗಿ, ಸೂರ್ಯನಿಂದ ರಕ್ಷಣೆ ಅಗತ್ಯ, ಆದ್ದರಿಂದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಬಿಸಿಲಿನಲ್ಲಿ ಹೋಗುವುದು ಅನಿವಾರ್ಯವಾದರೆ, ಛತ್ರಿ, ಸ್ಕಾರ್ಫ್ ಅಥವಾ ಟೋಪಿ ಬಳಸಿ. ಅಲ್ಲದೆ, ಮನೆಯಿಂದ ಹೊರಡುವ ಸುಮಾರು 20 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಅನ್ನು ಬಳಸಿ, ಬಿಸಿಲಿನಲ್ಲಿ ಚರ್ಮವನ್ನು ರಕ್ಷಿಸುತ್ತದೆ. ಸನ್‌ಸ್ಕ್ರೀನ್ ಖರೀದಿಸುವಾಗ, 25 ಮತ್ತು ಅದಕ್ಕಿಂತ ಹೆಚ್ಚಿನ SPF ಹೊಂದಿರುವ ಸನ್‌ಸ್ಕ್ರೀನ್ ಅನ್ನು ಆಯ್ಕೆಮಾಡಿ.

: ನಿಮ್ಮ ಹವ್ಯಾಸಗಳೇ ನಿಮ್ಮ ಯೌವನಕ್ಕೆ ಕುತ್ತು ತರಬಹುದು ಎಚ್ಚರ

2) ನಿಂಬೆ ಹಣ್ಣಿನ ರಸ ಬಳಕೆ: ನಿಂಬೆ ಹಣ್ಣಿಗೆ ನೈಸರ್ಗಿಕವಾದ ಬ್ಲೀಚಿಂಗ್ ಗುಣಲಕ್ಷಣಗಳು ಇರುವುದು ನಿಮಗೆಲ್ಲ ಗೊತ್ತೇ ಇದೆ. ನಮ್ಮ ಚರ್ಮದ ಸಣ್ಣ ಸಣ್ಣ ರಂಧ್ರಗಳಲ್ಲಿ ಕಂಡುಬರುವ ಧೂಳು ಮತ್ತು ಕೊಳೆಯನ್ನು ಹೊರತೆಗೆದು, ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಿ ಚರ್ಮದ ಗಾಢವಾದ ಬಣ್ಣವನ್ನು ಕ್ರಮೇಣವಾಗಿ ತಿಳಿಯಾಗಿಸಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ನಮ್ಮ ತ್ವಚೆಯ ರಕ್ಷಣೆ ಮಾಡುತ್ತದೆ.
ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಅಂಶ ಮತ್ತು ಆಂಟಿಆಕ್ಸಿಡೆಂಟ್ ಅಂಶ ಅಪಾರ ಪ್ರಮಾಣದಲ್ಲಿ ಇರುವುದರಿಂದ ತ್ವಚೆಯ ಬಣ್ಣ ಬದಲಾಗುತ್ತದೆ.

3) ಟೀ ಬ್ಯಾಗ್ ಬಳಕೆ: ಟೀ-ಬ್ಯಾಗ್ ಅನ್ನು ತ್ವರಿತ ಚಹಾ ಮಾಡಲು ಮಾತ್ರವಲ್ಲ, ಅದರೊಂದಿಗೆ ನೀವು ಮುಖದ ಕಪ್ಪುಕಲೆಗಳನ್ನು ಸಹ ತೊಡೆದುಹಾಕಬಹುದು. ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ. ಅದು ತಣ್ಣಗಾದಾಗ, ಅವುಗಳನ್ನು ಕಣ್ಣುಗಳ ಮೇಲೆ ಇರಿಸಿ. ದಿನಕ್ಕೆ ಎರಡು ಬಾರಿಯಾದರೂ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದ್ರೆ ಕಪ್ಪು ಕಲೆ ಹೋಗಲಾಡಿಸಬಹುದು..

4) ಎಳ್ಳೆಣ್ಣೆ ಬಳಕೆ: ತ್ವಚೆ ಒಣಗಿದ್ದರೆ ಸ್ವಲ್ಪ ಹಾಲಿಗೆ ಅರ್ಧ ಚಮಚ ಎಳ್ಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ, ನೀರಿನಲ್ಲಿ ನೆನೆಸಿದ ಹತ್ತಿ ಉಣ್ಣೆಯಿಂದ ಮುಖವನ್ನು ಒರೆಸಿ. ಎಳ್ಳೆಣ್ಣೆ ಸೂರ್ಯನ ಹಾನಿಗೆ ಅತ್ಯುತ್ತಮ ಪರಿಹಾರವಾಗಿದೆ. ಇದು ಕ್ರಮೇಣ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

5) ತಣ್ಣನೆಯ ಹಾಲು: ಚರ್ಮವನ್ನು ಹೊಳೆಯುವಂತೆ ಮಾಡುವುದು ಮಾತ್ರವಲ್ಲದೆ ಕಪ್ಪು ವರ್ತುಲಗಳನ್ನು ಕೂಡ ತೆಗೆದುಹಾಕುತ್ತದೆ. ನೀವು ಬಟ್ಟಲಿನಲ್ಲಿ ಇಟ್ಟಿರುವ ತಣ್ಣನೆಯ ಹಾಲಿನಲ್ಲಿ ಹತ್ತಿಯನ್ನು ಅದ್ದಿ ನಂತರ ಅದನ್ನು ಕಪ್ಪು ಕಲೆ ಪ್ರದೇಶದಲ್ಲಿ ಇರಿಸಿ. ಹತ್ತಿಯನ್ನು 10 ನಿಮಿಷಗಳ ಕಾಲ ಹಾಗೆಯೇ ಇಡಿ ಮತ್ತು ನಂತರ ಸರಳ ನೀರಿನಿಂದ ತೊಳೆಯಿರಿ. ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದ್ರೆ ಕಪ್ಪು ಕಲೆ ಹೋಗಲಾಡಿಸಬಹುದು.

: ಚಳಿಗಾಲದಲ್ಲಿ ತುಟಿ ಒಣಗಿ ಸಿಪ್ಪೆ ಸುಲಿತಿದ್ರೆ ಇವುಗಳನ್ನು ಬಳಸಿ ಸಾಕು

6) ಮೊಸರು ಮತ್ತು ಅರಿಶಿನ: ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಮೊಸರಿನಲ್ಲಿ ಚಿಟಿಕೆ ಅರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ಪ್ರತಿನಿತ್ಯ ಹಚ್ಚಿಕೊಳ್ಳುವುದರಿಂದ ಕಪ್ಪು ಕಲೆಗಳು ತಿಳಿಗೊಂಡು ಚರ್ಮವು ಹೊಳೆಯುತ್ತದೆ. ನಿಮ್ಮ ತ್ವಚೆಯು ಶುಷ್ಕವಾಗಿದ್ದರೆ, ಒಂದು ಚಮಚ ಜೇನುತುಪ್ಪವನ್ನು ಹಾಲಿಗೆ ಬೆರೆಸಿ ಪ್ರತಿದಿನ ಹಚ್ಚಿದ್ರೆ
ಕಪ್ಪು ಕಲೆ ಹೋಗಲಾಡಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಡೈರಿಯಲ್ಲಿತ್ತು ಮಹತ್ವದ ವಿಷಯ: ಅಶ್ವಿನಿ ತೆಗೆದುಕೊಂಡ ನಿರ್ಧಾರಕ್ಕೆ ಶ್ಲಾಘನೆಗಳ ಮಹಾಪೂರ

Thu Dec 23 , 2021
ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಎಲ್ಲರನ್ನೂ ಅಗಲಿ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಅವರು ಮಾಡಿರುವ ಮಹತ್ಕಾರ್ಯದ ಕುರಿತು ಇಂದಿಗೂ ದಿನವೂ ಒಂದೊಂದು ಘಟನೆಗಳು ಹೊರಬರುತ್ತಲೇ ಇವೆ. ಇದೀಗ ಅವರ ಪತ್ನಿ ಅಶ್ವಿನಿಯವರು ಮಾಡಿರುವ ಒಂದು ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಅದೇನೆಂದರೆ, ಅಶ್ವಿನಿಯವರು ಅಪ್ಪು ಅವರ ಡೈರಿಯನ್ನು ಓದಿದಾಗ ಅದರಲ್ಲಿ ಅವರಿಗೆ ಪುನೀತ್‌ ರಾಜ್‌ಕುಮಾರ್‌ ಕೆಲವು ಚಿತ್ರಗಳಿಗೆ ಮುಂಗಡ ಹಣ ಪಡೆದಿರುವುದು ತಿಳಿದಿದೆ. ಒಮ್ಮೆ ಮುಂಗಡವಾಗಿ ಪಡೆದುಕೊಂಡ […]

Advertisement

Wordpress Social Share Plugin powered by Ultimatelysocial