7.5% ಮೀಸಲಾತಿ ನೀಡುವಂತೆ ಸರಕಾರಕ್ಕೆ ತಹಶಿಲ್ದಾರರ ಮೂಲಕ ಮನವಿ

 

ಬೆಳಗಾವಿ : ಮೋಳೆ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಮಾಜ ಸೇವಾ ಸಂಘದ ವತಿಯಿಂದ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ 7.5% ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮಾಜದ ಮುಖಂಡರ ನೇತೃತ್ವದಲ್ಲಿ ಕಾಗವಾಡ ಚೆನ್ನಮ್ಮ ವೃತ್ತದಿಂದ ನೂರಾರು ಜನರು ಸೇರಿಕೊಂಡು ತಹಶಿಲ್ದಾರ ಕಚೇರಿವರಗೆ ಕಾಲ್ನಡಿಗೆಯ ಮೂಲಕ ತೆರಳಿ ತಹಶಿಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡ ರಮೇಶ ನಾಯಿಕ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟು ಜನಾಂಗದವರನ್ನು ಗುರುತಿಸಲಾಗಿದೆ.  2011ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ರಷ್ಟಿದೆ . ಪರಿಶಿಷ್ಟ ಪಂಗಡದವರು ಸುಮಾರು 7% ರಷ್ಟಿದ್ದಾರೆ.  ಅದಕ್ಕೋಸ್ಕರ ವಾಲ್ಮೀಕಿ ಸಮುದಾಯಕ್ಕೆ 7.5% ಮೀಸಲಾತಿ ಹೆಚ್ಚಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎನ್.ನಾಗಮೋಹನ ದಾಸರವರ ವರದಿ ನೀಡಿತ್ತು.  ಅದ ಪ್ರಕಾರ ವಾಲ್ಮೀಕಿ ಸಮುದಾಯಕ್ಕೆ 7.5% ಮೀಸಲಾತಿ ನೀಡಬೇಕೆಂದು ನಮ್ಮ ತಾಲೂಕಿನ ಸಮುದಾಯದ ವತಿಯಿಂದ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತವೆ ಎಂದು ಹೇಳಿದರು. ಈ ವೇಳೆ ತಾಲೂಕಿನ ಸಮಾಜದ ಮುಖಂಡರಾದ ಸಿದ್ದಪ್ಪ ಹಳಬರ,ಅಶೋಕ‌ ಮಾಕಣ್ಣವರ,ರಮೇಶ ನಾಯಿಕ,ಸಂತೋಷ ಮಗದ್ದುಮ್ಮ,ರಮೇಶ ಪೂಜಾರಿ,ಪೀರಪ್ಪ ನಾಯಿಕ,ಮಾಹಾದೇವ ನಾಯಿಕ,ಹಣಮಂತ ನಾಯಿಕ,ಕುಮಾರ ನಾಯಿಕ,ಶಂಕರ ನಾಯಿಕ,ಸೇರಿದಂತೆ ಹಲವರು ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಬಾನ ದಾರಿಯಲ್ಲಿ' ಸಿನಿಮಾಕ್ಕೆ ತರಬೇತಿ ಪಡೆಯುತ್ತಿರುವ ನಟಿ ರುಕ್ಮಿಣಿ

Sat May 21 , 2022
  ಪ್ರೇಮಕತಾ ಸಿನಿಮಾಗಳ ಮೂಲಕ ತಮ್ಮದೇ ಪ್ರತ್ಯೇಕ ಛಾಪು ಮೂಡಿಸಿರುವ ನಿರ್ದೇಶಕ ಪ್ರೀತಂ ಗುಬ್ಬಿ ಇದೀಗ ಮತ್ತೊಂದು ಪ್ರೇಮಕತೆ ಹೊತ್ತು ತಂದಿದ್ದಾರೆ. ಪ್ರೀತಂ ಗುಬ್ಬಿ ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ್ದು ಹೊಸ ಸಿನಿಮಾ ಘೋಷಿಸಿದ್ದಾರೆ. ಸಿನಿಮಾದ ಹೆಸರು ‘ಬಾನ ದಾರಿಯಲ್ಲಿ’. ಸಿನಿಮಾವು ಅಪ್ಪಟ ಪ್ರೇಮಕತಾ ಸಿನಿಮಾ ಆಗಿರುವ ಜೊತೆಗೆ ಕೆಲವು ವಿಶೇಷತೆಗಳನ್ನು ಸಹ ಒಳಗೊಂಡಿದೆ. ಸಿನಿಮಾದಲ್ಲಿ ಸುಂದರ ನಟಿ ಕಲ್ಯಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರಕ್ಕೆ […]

Advertisement

Wordpress Social Share Plugin powered by Ultimatelysocial