ಮನೆಗೋಡೆ ಕುಸಿದು 7 ಮಂದಿ ಸಾವು..!

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಗುರುವಾರ ರಾತ್ರಿ ಮನೆಯೊಂದರ ಗೋಡೆ ಕುಸಿದು ಆರು ಮಹಿಳೆಯರು ಸಹಿತ ಏಳು ಮಂದಿ ಮೃತಪಟ್ಟಿದ್ದಾರೆ.ಐವರು ಸ್ಥಳದಲ್ಲೇ ಸಾವಿಗೀಡಾದರು ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಕಣ್ಣು ಮುಚ್ಚಿದರು ಅವರಲ್ಲಿ 6 ಮಂದಿ ಒಂದೇ ಕುಟುಂಬದವರು ಬಾಲಕಿ ಮಾತ್ರ ಪಕ್ಕದ ಮನೆಯವಳು ಈ ಸಾವು ಇಡೀ ಊರನ್ನೇ ಶೋಕದಲ್ಲಿ ಮುಳುಗಿಸಿದೆ.ಇನ್ನು ಮೃತರ ಕುಟುಂಬಕ್ಕೆ ಸೇರಿದ ಭೀಮಪ್ಪ ಎಂಬವರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ದುರಂತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಹೆಸರಿನಲ್ಲಿ 5 ಲಕ್ಷ ರೂ ಪರಿಹಾರ ಘೋಷಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಕಿಚ್ಚನ ಸುದ್ದಿ  - ಅಕ್ಟೋಬರ್‌ 11ರಿಂದ ಕೋಟಿಗೊಬ್ಬ 3 ಅಡ್ವಾನ್ಸ್ಡ್ ಟಿಕೆಟ್ ಬುಕಿಂಗ್ ಶುರು

Thu Oct 7 , 2021
ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಕುತೂಹಲ ಮೂಡಿಸಿ ಕಾತುರದಿಂದ ಕಾಯುತ್ತಿರುವ ಚಿತ್ರ ಅಂದ್ರೆ ಕೋಟಿಗೊಬ್ಬ 3 . ಅಭಿನಯ ಚಕ್ರವರ್ತಿ  ಸುದೀಪ ಅಭಿನಯದ ಕೋಟಿಗೊಬ್ಬ3 ರಾಜ್ಯಾದ್ಯಂತ 1,000 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲು  ಸಿದ್ಧತೆ ನಡೆದಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಸದ್ಯಕ್ಕೆ 1,000 ಸ್ಕ್ರೀನ್ ಗಳು ಎಂದುಕೊಂಡಿದ್ದರೂ ಮುಂಬರಲಿರುವ ದಿನಗಳಲ್ಲಿ ಸ್ಕ್ರೀನ್ ಸಂಖ್ಯೆಯನ್ನು ಏರಿಸಲಿದ್ದೇವೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ. ಕೋಟಿಗೊಬ್ಬ3 ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣಪತ್ರ […]

Advertisement

Wordpress Social Share Plugin powered by Ultimatelysocial