ಬೆಳಗಾವಿಯಲ್ಲಿ ಕಲ್ಲು ತೂರಾಟ; 3 ಪ್ರಕರಣ ದಾಖಲು 27 ಜನರ ಬಂಧನ: 144 ನಿಷೇಧಾಜ್ಞೆ ಜಾರಿ

ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಪ್ರಕರಣ ದಾಖಲಾಗಿದ್ದು, ಈವರೆಗೆ 27 ಜನರನ್ನು ಬಂಧಿಸಲಾಗಿದೆ.ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದಿರುವ ಘಟನೆಯನ್ನು ನೆಪವಾಗಿಸಿಕೊಂಡು ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆ ನೇತೃತ್ವದಲ್ಲಿ ಪುಂಢರು ಸಂಭಾಜಿ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಕಲ್ಲು ತೂರಾಟ ನಡೆಸಿ ಪೊಲೀಸ್ ವಾಹನ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸ ಮಾಡಿದ್ದರು.ಈ ಸಂಬಂಧ ಖಡೇಬಜಾರ್, ಕ್ಯಾಂಪ್ ಹಾಗೂ ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈವರೆಗೆ 27 ಜನರನ್ನು ಬಂಧಿಸಲಾಗಿದ್ದು, ಇನ್ನೂ ಬಂಧನ ಪ್ರಕ್ರಿಯೆ ಮುಂದುವರಿದಿದೆ.ಬೆಳಗಾವಿ ತಾಲೂಕಿನಾದ್ಯಂತ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರ: ಎಂಇಎಸ್ ಪೌರುಷಗಳು ಕೇವಲ ತಾತ್ಕಾಲಿಕ :ಸಚಿವ ಡಾ.ಅಶ್ವಥ್ ನಾರಾಯಣ 

Sat Dec 18 , 2021
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರ ನೆಲಮಂಗಲದಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ…ರಾಜ್ಯದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸುವಂತಾಗಬೇಕು, ವೈ ಮನಸ್ಸು ಬಿಡಬೇಕು.ಬೆಳಗಾವಿ ಎಂದೆಂದೂ ಕರ್ನಾಟಕದ ಅವಿಭಾಜ್ಯ ಅಂಗ,ಇನ್ನೂ ರೀತಿಯಲ್ಲಿ ಮಾಡುತ್ತಿರುವುದು ದುರದೃಷ್ಟಕರ.ಗಲಾಟೆ ಪುಂಡಾಟಿಕೆ ಯಾವಾಗಲೂ ಪ್ರಯೋಜನಕ್ಕೆ ಬರಲ್ಲ ತೊಡೆ ತಟ್ಟೊದ್ರಿಂದ ಏನೂ ಆಗಲ್ಲ.ಈ ಎಂಇಎಸ್ ಪೌರುಷಗಳು ಕೇವಲ ತಾತ್ಕಾಲಿಕ.ಸದನ ನಡೆಯುವ ವೇಳೆ ಈ ರೀತಿಯಲ್ಲಿ ಹಾಗುವುದು ಸಾಮಾನ್ಯ.ಪುಂಡಾಟಿಕೆಯನ್ನ ನಾನು ಖಂಡಿಸುತ್ತೇನೆ..ಏನೇ ತಲೆಕೆಳಗಾದ್ರು ಏನೂ ಹಾಗಲ್ಲ ವಿಫಲ ಪ್ರಯತ್ನ ಮಾಡಿ ಮೈ […]

Advertisement

Wordpress Social Share Plugin powered by Ultimatelysocial