2021-22ನೇ ಸಾಲಿನ ಎಜುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ಶ್ರೇಯಾಂಕಗಳ (EWISR) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಆರು ಅಂತರರಾಷ್ಟ್ರೀಯ ಶಾಲೆಗಳು ಅಗ್ರಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನ ಆರು ಶಾಲೆಗಳು ಭಾರತದ ಅತ್ಯುತ್ತಮ ದಿನ ಮತ್ತು ದಿನ-ಕಮ್-ಬೋರ್ಡಿಂಗ್ ಶಾಲೆಗಳ ಪಟ್ಟಿಯಲ್ಲಿ ಟಾಪ್-10 ರಲ್ಲಿ ಸ್ಥಾನ ಪಡೆದಿವೆ.
ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್ ಭಾರತದ ಅತ್ಯುತ್ತಮ ಅಂತರಾಷ್ಟ್ರೀಯ ಡೇ-ಕಮ್-ಬೋರ್ಡಿಂಗ್ ಶಾಲೆ ಎಂದು ಮನ್ನಣೆ ಪಡೆದಿದೆ. ಇಂಟರ್‌ನ್ಯಾಶನಲ್ ಸ್ಕೂಲ್, ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಮತ್ತು ಸ್ಟೋನ್‌ಹಿಲ್ ಇಂಟರ್‌ನ್ಯಾಶನಲ್ ಸ್ಕೂಲ್ ಕ್ರಮವಾಗಿ ಎರಡು, ಮೂರನೇ ಮತ್ತು ನಾಲ್ಕನೇ ಶ್ರೇಯಾಂಕಗಳನ್ನು ಪಡೆದುಕೊಂಡಿವೆ. ಬೆಂಗಳೂರಿನ ಶರಣ್ಯ ನಾರಾಯಣಿ ಇಂಟರ್‌ನ್ಯಾಶನಲ್ ಸ್ಕೂಲ್ ಇದೇ ವಿಭಾಗದಲ್ಲಿ ಒಂಬತ್ತನೇ ಶ್ರೇಯಾಂಕ ಪಡೆದಿದೆ.
EWISR ಪ್ರಕಾರ ಬೆಂಗಳೂರಿನ ಲೆಗಸಿ ಸ್ಕೂಲ್ ಅಂತರಾಷ್ಟ್ರೀಯ ದಿನದ ಶಾಲೆಗಳ ವಿಷಯದಲ್ಲಿ ದೇಶದಲ್ಲೇ ಎಂಟನೇ-ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದೆ.