FIPOLO:ಬೆಂಗಳೂರಿಗೆ ಎಂಟ್ರಿ ಕೊಟ್ಟ ಫಿಪೋಲಾ ಮಾಂಸ ಮಾರಾಟ ಸಂಸ್ಥೆ;

Bengaluru ಮಾಂಸವನ್ನು ಖರೀದಿಸುವ ಮೊದಲು, ಜನ ಸಾಮಾನ್ಯವಾಗಿ ನಿರೀಕ್ಷೆ ಮಾಡುವುದು ಆರೋಗ್ಯ, ನೈರ್ಮಲ್ಯ ಮತ್ತು ತಾಜಾತನ. ಈ ವಿಚಾರದಲ್ಲಿ ಫಿಪೋಲಾ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಫಿಪೋಲಾದಲ್ಲಿ ಗ್ರಹಿಕ ಮತ್ತು ಅನುಭವವು ಜತೆಯಾಗಿ ಸಾಗುತ್ತವೆ.

ಹೀಗಾಗಿ, ದಕ್ಷಿಣ ಭಾರತದ ಅತಿದೊಡ್ಡ ಬ್ರಾಂಡ್​​ನಲ್ಲಿ ಇದೂ ಒಂದೆನಿಸಿದೆ. ಸುವಾಸನೆಯ, ತಾಜಾ ಮತ್ತು ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮಾಂಸಕ್ಕೆ ಹೆಸರುವಾಸಿಯಾದ ಬ್ರಾಂಡ್​ ಇದಾಗಿದ್ದು, ಮುಂದಿನ 3 ವರ್ಷಗಳ ಅವಧಿಯಲ್ಲಿ ತನ್ನ ವ್ಯಾಪ್ತಿಯಲ್ಲಿ ದೇಶದೆಲ್ಲೆಡೆ ಹರಡಲು ಸಿದ್ಧವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ದಕ್ಷಿಣ ಭಾರತ ಮೂಲದ, ಓಮ್ನಿ-ಚಾನಲ್ ಡಿ2ಸಿ (ಗ್ರಾಹಕರಿಗೆ ನೇರವಾಗಿ) ಮಾಂಸ ಮತ್ತು ಸಮುದ್ರಾಹಾರ ಚಿಲ್ಲರೆ ಬ್ರಾಂಡ್​ ಫಿಪೋಲಾ ರಿಟೇಲ್‌ ಇಂಡಿಯಾ ಡಿಸೆಂಬರ್ 2015ರಲ್ಲಿ ಸ್ಥಾಪನೆಯಾಯಿತು. ಉತೃಷ್ಣ ಉತ್ಪನ್ನಗಳನ್ನು ವಿತರಿಸುವ ಮೂಲಕ ದೇಶದಲ್ಲಿ ಮಾಂಸದ ಚಿಲ್ಲರೆ ವ್ಯಾಪಾರವನ್ನು ಮರುವ್ಯಾಖ್ಯಾನಿಸುವುದು ಮತ್ತು ಆರೋಗ್ಯಕರ ಮತ್ತು ಅನುಕೂಲಕರ ಶಾಪಿಂಗ್‌ ಪರಿಸರದಲ್ಲಿ ಉತ್ತಮ ಗುಣಮಟ್ಟದ ಗ್ರಾಹಕ ಸೇವೆ ಒದಗಿಸುವುದು ಫಿಪೋಲಾದ ಉದ್ದೇಶವಾಗಿತ್ತು, ವ್ಯಾಪಕವಾದ ವಿಸ್ತರಣೆ ಯೋಜನೆಯೊಂದಿಗೆ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ ಎಂದು ಸಂಸ್ಥೆ ಹೇಳಿದೆ.

ಮಾರ್ಚ್ 2022ರ ಕೊನೆಯಲ್ಲಿ ದಕ್ಷಿಣ ಭಾರತದಾದ್ಯಂತ 100ಕ್ಕೂ ಹೆಚ್ಚು ಹಾಗೂ 2023-24ರ ವೇಳೆಗೆ ದೇಶದೆಲ್ಲೆಡೆ 250ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದುವ ಗುರಿಯೊಂದಿಗೆ ಫಿಪೋಲಾ ಮುನ್ನುಗ್ಗುತ್ತಿದೆ. ತಾಜಾ ಮಾಂಸ ಮತ್ತು ಸಮುದ್ರಾಹಾರ ರೀಟೇಲ್ ಕಂಪಗಳ ಪೈಕಿ ಆಯ್ಕೆಯ ಬ್ರಾಂಡ್​ ಎಂದು ಫಿಪೋಲಾ ಈಗ 2 ಹೊಸ ಮಳಿಗೆಗಳೊಂದಿಗೆ ಬೆಂಗಳೂರಿನಾದ್ಯಂತ ವಿಸ್ತರಣೆಗೊಳ್ಳಲಿದೆ ಎಂದಿದೆ. ಎಚ್.ಎಸ್.ಆರ್ ಲೇಔಟ್, ಎಂಇಸಿಎಸ್ ಲೇಔಟ್, ಬನಶಂಕರಿ, ವೈಟ್ ಫೀಲ್ಡ್ ಬಳಿಯ ವರ್ತೂರು ರಸ್ತೆ, ಬಿಟಿಎಂ ಲೇಔಟ್, ಇಂದಿರಾನಗರ, ಕೆ.ಆರ್.ಪುರ,

ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಜೆ.ಪಿ. ನಗರ, ಯಶವಂತಪುರ, ಆರ್.ಟಿ. ನಗರ, ಫ್ರೆಜರ್ ಟೌನ್, ಕಮನ್ನಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ರಾಮಮೂರ್ತಿ ನಗರ, ಕಗ್ಗದಾಸಪುರ, ಜಯನಗರ, ಬನ್ನೇರುಘಟ್ಟ, ಕೋರಮಂಗಲ, ಸರ್ಜಾಪುರ ರಸ್ತೆ, ಚಂದ್ರಾ ಲೇಔಟ್ ಮತ್ತು ಆರ್.ಆರ್. ನಗರ ಸೇರಿದಂತೆ ಹೊಸ ರೀಟೇಲ್ ಮತ್ತು ವಿತರಣಾ ಮಳಿಗೆಗಳನ್ನು ಫಿಪೋಲಾ ಅನಾವರಣಗೊಳಿಸಿದೆ. ಮಾರ್ಚ್ 2022ರ ವೇಳೆಗೆ ದಕ್ಷಿಣ ಭಾರತದ ಉಳಿದ ಭಾಗಗಳಲ್ಲಿ 34ಕ್ಕೂ ಹೆಚ್ಚು ಹೊಸ ಮಳೆಗಳನ್ನು ಪ್ರಾರಂಭಿಸಲು ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಯೋಜಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Tata Ace Gold Diesel + ಉದ್ಯಮದಲ್ಲೇ ಮೊದಲು ಎಂಬ ಹಲವು ಸೌಲಭ್ಯಗಳೊಂದಿಗೆ ಬರುತ್ತಿದೆ;

Sun Jan 2 , 2022
ಭಾರತೀಯ ವಾಣಿಜ್ಯ ವಾಹನ ಉದ್ಯಮವು ಬದಲಾಗುತ್ತಿದೆ ಮತ್ತು ಅದು – ಡೀಸೆಲ್, CNG ಮತ್ತು ಈಗ ಪೆಟ್ರೋಲ್‌ನಂತಹ ವಿವಿಧ ಇಂಧನ ವೇರಿಯಂಟ್‌ಗಳ ಮೂಲಕ ಸೌಲಭ್ಯ ಒದಗಿಸುತ್ತಿದೆ. ಭವಿಷ್ಯದಲ್ಲಿ ದೊರೆಯಬಹುದಾದ ಎಲೆಕ್ಟ್ರಿಕ್ ಆಯ್ಕೆಯ ಬಗ್ಗೆಯೂ ಗ್ರಾಹಕರು ಎದುರು ನೋಡುತ್ತಿದ್ದಾರೆ. ಆದರೆ ಹೀಗೆ ಹೇಳುವುದು ತಪ್ಪಾಗಲಾರದು, ಸದ್ಯದ ಮಟ್ಟಿಗಾದರೂ, ವಾಣಿಜ್ಯ ವಾಹನಗಳ ಖರೀದಿಯ ವಿಚಾರಕ್ಕೆ ಬಂದರೆ ನಮ್ಮ ದೇಶವು ಡೀಸೆಲ್ ವಾಹನಗಳೊಂದಿಗೆ ಸಂಯೋಜಿತವಾಗಿದೆ ಮತ್ತು ಅದನ್ನು ‘Dil se Diesel’ ಎಂದು ಹೇಳಬಹುದು. […]

Advertisement

Wordpress Social Share Plugin powered by Ultimatelysocial