ಭಾರತದಲ್ಲಿ CBR650R ಬಿಡುಗಡೆ ಮಾಡಿದ ಹೋಂಡಾ;

ತನ್ನ ಪ್ರೀಮಿಯಂ ಬೈಕ್‌ಗಳ ಬಿಗ್‌ವಿಂಗ್ ಶೋರೂಂ ಮೂಲಕ CBR300R ಬೈಕುಗಳ ಮಾರಾಟ ಆರಂಭಿಸಿರುವ ಹೋಂಡಾ, ಇದರ ಬೆನ್ನಿಗೇ 2022 ಹೋಂಡಾ CBR650R ಮಾಡೆಲ್ ‌ಅನ್ನೂ ಸಹ ಲಾಂಚ್‌ ಮಾಡಿದೆ.

ಮಧ್ಯಮಗಾತ್ರದ ಸ್ಪೋರ್ಟ್ ವರ್ಗದ ಗ್ರಾಹಕರಿಗೆ ಈ ಬೈಕ್ ಅಭಿವೃದ್ಧಿ ಮಾಡಲಾಗಿದೆ.

ಇದೇ ವೇಳೆ ತನ್ನ ಹೊಸ ಬೈಕ್‌ಗಳ ಲಾಂಚ್‌ ಆದ ಬೆನ್ನಿಗೇ ಅವುಗಳಿಗೆ ಬುಕಿಂಗ್ ಗವಾಕ್ಷಿಯನ್ನೂ ಹೋಂಡಾ ತೆರೆದಿದೆ.

2022 CBR650R ಬೈಕ್‌ನಲ್ಲಿ ಕಿತ್ತಳೆ ಬಣ್ಣದ ಹೊಸ ಹೈಲೈಟ್‌ಗಳು ಇದ್ದು, ಸ್ಪೋರ್ಟಿ ಗ್ರಾಫಿಕ್ಸ್‌ಗಳಿಂದ ಕಂಗೊಳಿಸುತ್ತಿದೆ. ಮೇಲ್ಮುಖ ಹಾಗೂ ಕೆಳಮುಖದ ಫೇರಿಂಗ್ ‌ಗಳಿಂದ ಬೈಕ್‌ಗೆ ಆಜಾನುಬಾಹುವಿನ ಲುಕ್ ಸಿಕ್ಕಿದೆ.

649ಸಿಸಿ, ಡೊಓಎಚ್‌ಸಿ 16-ವಾಲ್ವ್‌, ನಾಲ್ಕು ಸಿಲಿಂಡರ್‌ ಎಂಜಿನ್ ಹೊಂದಿರುವ CBR650R 12,000 ಆರ್‌ಪಿಎಂನಲ್ಲಿ 64ಕಿವ್ಯಾಗಳಷ್ಟು ಗರಿಷ್ಠ ಶಕ್ತಿ ಉತ್ಪಾದಿಸಬಲ್ಲದು. 8,500 ಆರ್‌ಪಿಎಂನಲ್ಲಿ ಗರಿಷ್ಠ 57.5 ಎನ್‌ಎಂ ಟಾರ್ಕ್‌ ಸಹ ಉತ್ಪಾದನೆ ಮಾಡುತ್ತದೆ ಈ ಬೈಕ್.

9,35,427 ರೂ.ಗಳು (ಎಕ್ಸ್‌ಶೋರೂಂ ಬೆಲೆ, ಗುರುಗ್ರಾಮ) ಬೆಲೆ ಇರುವ ಈ ಬೈಕ್‌ನ ಬುಕಿಂಗ್ ಇಂದಿನಿಂದಲೇ ಆರಂಭಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಗನ್ ಮೋಹನ್ ರೆಡ್ಡಿ:ಆಂಧ್ರ ಪ್ರದೇಶದಲ್ಲಿ 13 ಹೊಸ ಜಿಲ್ಲೆ ಅಸ್ತಿತ್ವಕ್ಕೆ;

Wed Jan 26 , 2022
ಬೆಂಗಳೂರು: ಆಡಳಿತ ಸುಧಾರಣೆಯ ಕ್ರಮವಾಗಿ ಆಂಧ್ರ ಪ್ರದೇಶದ ಸಿಎಂ ಜಗನ್‌ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹೊಸದಾಗಿ 13 ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಯೋಜನೆಗಳ ಸುಗಮ ಜಾರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲ ಕಲ್ಪಿಸಿ, ಜನರಿಗೆ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹೊಸ ಜಿಲ್ಲೆಗಳ ಪೈಕಿ, ಎನ್‌ಟಿಆರ್ (ವಿಜಯವಾಡ), ಅಲ್ಲೂರಿ ಸೀತಾರಾಮ ರಾಜು (ಪಡೇರು), ಶ್ರೀ ಸತ್ಯಸಾಯಿ (ಪುಟ್ಟಪರ್ತಿ) ಅನ್ನಮಯ್ಯ (ರಾಯಚೋಟಿ) […]

Advertisement

Wordpress Social Share Plugin powered by Ultimatelysocial