H3N8 Virus: ಕೋವಿಡ್‌ ಅಬ್ಬರದ ನಡುವೆ ಮಾನವನಿಗೆ ಮತ್ತೊಂದು ರೋಗ! ಜಗತ್ತಿಗೆ ಏನು ಮಾಡಲು ಹೊರಟಿದೆ ಚೀನಾ?

 

ಬೀಜಿಂಗ್, ಚೀನಾ: ಕೊರೋನಾ ವೈರಸ್ (Corona Virus) ಹರಡಿ, ಜಗತ್ತನ್ನೇ ತಲ್ಲಣಗೊಳಿಸಿದ, ಮತ್ತು ತಲ್ಲಣ ಗೊಳಿಸುತ್ತಿರುವ ಚೀನಾ (China) ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ (Shocking News) ಕೊಟ್ಟಿದೆ. ಇದೇ ಮೊದಲ ಬಾರಿಗೆ ಮಾನವನಲ್ಲಿ ಹಕ್ಕಿ ಜ್ವರದ (bird flu) ಸೋಂಕು (infection) ಪತ್ತೆಯಾಗಿದ್ದಾಗಿ ಚೀನಾ ವರದಿ ಮಾಡಿದೆ.
ಚೀನಾದ ಹೆನಾನ್ (Henan) ಪ್ರಾಂತ್ಯದ 4 ವರ್ಷದ ಬಾಲಕನಲ್ಲಿ H3N8 ವೈರಾಣು ಇರೋದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಇದರೊಂದಿಗೆ ಕೋವಿಡ್ (Covid) ಆತಂಕದಲ್ಲಿದ್ದ ಚೀನಾಕ್ಕೆ ಮತ್ತೊಂದು ಶಾಕ್ ಎದುರಾದಂತಾಗಿದೆ. ಇನ್ನು ಚೀನಾದಲ್ಲಿ ರೋಗ ಕಾಣಿಸಿಕೊಂಡರೆ ಅದು ಜಗತ್ತಿಗೆ ಹರಡೋದಕ್ಕೆ ಎಷ್ಟು ಸಮಯ ಬೇಕು? ಹೀಗಾಗಿಯೇ ವಿಶ್ವದಾದ್ಯಂತ ಈಗ ಸಣ್ಣಗೆ ಆತಂಕ, ಭಯ ಶುರುವಾಗಿದೆ.
4 ವರ್ಷದ ಬಾಲಕನಲ್ಲಿ ಹಕ್ಕಿ ಜ್ವರ ಪತ್ತೆ
ಚೀನಾದ ಮಧ್ಯ ಪ್ರಾಂತ್ಯದ ಹೆನಾನ್ ಪ್ರಾಂತ್ಯದ 4 ವರ್ಷದ ಬಾಲಕನಲ್ಲಿ ಹಕ್ಕಿಜ್ವರದ ಸೋಂಕು ಇರುವುದು ಕಂಡುಬಂದಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಆ ಬಾಲಕನಲ್ಲಿ ಜ್ವರ ಮತ್ತು ಇತರ ರೋಗ ಲಕ್ಷಣಗಳು ಕಂಡು ಬಂದಿದ್ದವು. ಅವನನ್ನು ತೀವ್ರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತನಲ್ಲಿ H3N8 ವೈರಸ್ ಇರುವುದು ದೃಢಪಟ್ಟಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕುದುರೆ, ನಾಯಿಗಳಲ್ಲಿ ಕಂಡುಬರುವ H3N8 ವೈರಸ್
ಎಚ್‌3ಎನ್‌8 ವೈರಸ್ 2002ರಿಂದಲೂ ವಿವಿಧ ದೇಶಗಳಲ್ಲಿ ಹರಿದಾಡುತ್ತಿದೆ. ಉತ್ತರ ಅಮೆರಿಕದಲ್ಲಿನ ನೀರಿನ ಪಕ್ಷಿಗಳಲ್ಲಿ ಇದು ಮೊದಲ ಬಾರಿ ಪತ್ತೆಯಾಗಿತ್ತು. H3N8 ರೂಪಾಂತರಿ ವೈರಸ್ ಸಾಮಾನ್ಯವಾಗಿ ಕುದುರೆಗಳು ಮತ್ತು ನಾಯಿಗಳಲ್ಲಿ, ಕೆಲವೊಮ್ಮೆ ಸಾಮಾನ್ಯವಾಗಿ ಸೀಲ್‌ ಪ್ರಾಣಿಗಳಲ್ಲಿಯೂ ಸಹ ಕಂಡುಬರುತ್ತದೆ. ಆದರೆ H3N8ನ ಯಾವುದೇ ಮಾನವ ಪ್ರಕರಣಗಳು ವರದಿಯಾಗಿರಲಿಲ್ಲ. ಇದೀಗ ಚೀನಾದ ಈ ಬಾಲಕನಲ್ಲಿ ಕಂಡು ಬಂದಿದ್ದು, ಇದು ಮೊದಲ ಪ್ರಕರಣವಾಗಿದೆ.
ಮನೆಯ ಪಕ್ಷಿಗಳಿಂದ ಹರಡಿತಾ ಸೋಂಕು?
ಈ 4 ವರ್ಷದ ಮಗು ತನ್ನ ಮನೆಯಲ್ಲಿ ಕೋಳಿ ಮತ್ತು ಕಾಗೆಗಳನ್ನು ಬೆಳೆಸಿತ್ತು. ಅದರೊಂದಿಗೆ ಸದಾಕಾಲ ಆಟವಾಡುತ್ತಾ ಕಾಲ ಕಳೆಯುತ್ತಿತ್ತು. ಹೀಗೆ ಮನೆಯಲ್ಲಿ ಬೆಳೆಸಿದ ಕೋಳಿ ಮತ್ತು ಕಾಗೆಗಳೊಂದಿಗೆ ಸಂಪರ್ಕದಿಂದಲೇ ವೈರಸ್ ಸೋಂಕು ತಗುಲಿರಬಹುದು ಅಂತ ತಜ್ಞರು ವಿಶ್ಲೇಷಿಸಿದ್ದಾರೆ.
ಸೋಂಕು ಮತ್ತೊಬ್ಬರಿಗೆ ಹರಡುವ ಅಪಾಯ ಕಡಿಮೆ
ಇದು ಕೋವಿಡ್‌ ಸೋಂಕಿನಂತೆ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ ಎನ್ನಲಾಗಿದೆ. ಇದು ಜನರಲ್ಲಿ ಹರಡುವ ಅಪಾಯ ಕಡಿಮೆಯಾಗಿದೆ ಎಂದು ಚೀನಾದ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
ಬಾಲಕನ ಸಂಪರ್ಕಿತರಲ್ಲಿ ಕಂಡು ಬಂದಿಲ್ಲ ರೋಗಲಕ್ಷಣ
ಬಾಲಕನ ಬಹು ಸಮೀಪದ ಮನುಷ್ಯ ಸಂಪರ್ಕಗಳಲ್ಲಿ ಯಾವುದೇ ‘ಅಸಹಜತೆ’ ಕಂಡುಬಂದಿಲ್ಲ ಎಂದು ಪರೀಕ್ಷೆ ಬಳಿಕ ಎನ್‌ಎಚ್‌ಸಿ ಹೇಳಿದೆ. ಬಾಲಕನ ಪ್ರಕರಣವು ವಿಭಿನ್ನ ತಳಿ ಪ್ರಸರಣದ್ದಾಗಿದೆ. ಭಾರಿ ಪ್ರಮಾಣದ ಪ್ರಸರಣದ ಅಪಾಯವು ಬಹಳ ಕಡಿಮೆ ಇದೆ. ಹಾಗೆಂದು ಜನರು ಮೈಮರೆಯುವುದು ಬೇಡ. ಸತ್ತ ಅಥವಾ ಅನಾರೋಗ್ಯಕ್ಕೆ ಒಳಗಾದ ಹಕ್ಕಿಗಳಿಂದ ದೂರ ಇರಬೇಕು ಮತ್ತು ಜ್ವರ ಅಥವಾ ಉಸಿರಾಟದ ಲಕ್ಷಣಗಳಿಗೆ ತಕ್ಷಣದ ಚಿಕಿತ್ಸೆಗೆ ಒಳಗಾಗಬೇಕು ಎಂದು ಸಾರ್ವಜನಿಕರಿಗೆ ಅದು ಎಚ್ಚರಿಕೆ ನೀಡಿದೆ.
ಪ್ರಾಣಿಗಳ ಮಾರಣಹೋಮಕ್ಕೆ ಕಾರಣವಾಗಿದ್ದ ಸೋಂಕು
ಎಚ್‌5ಎನ್‌1 (H5N1) ಮತ್ತು ಎಚ್‌7ಎನ್‌9 (H7N9) ಹಕ್ಕಿ ಜ್ವರದ ತಳಿಗಳಾಗಿದ್ದು, ಕ್ರಮವಾಗಿ 1997 ಮತ್ತು 2013ರಲ್ಲಿ ಪತ್ತೆಯಾಗಿದ್ದವು. ಹಕ್ಕಿ ಜ್ವರದಿಂದ ಮನುಷ್ಯರ ಅನಾರೋಗ್ಯಕ್ಕೆ ಕಾರಣವಾದ ಬಹುತೇಕ ಪ್ರಕರಣಗಳಿಗೆ ಈ ತಳಿಗಳು ಮೂಲವಾಗಿವೆ. 2012ರಲ್ಲಿ ಎಚ್‌3ಎನ್‌8 ತಳಿಯು ಅಮೆರಿಕದ ಈಶಾನ್ಯ ಕರಾವಳಿಯಲ್ಲಿ ಮಾರಣಾಂತಿಕ ನ್ಯುಮೋನಿಯಾಕ್ಕೆ ಕಾರಣವಾಗಿದ್ದು, ಸುಮಾರು 160 ಸೀಲ್‌ಗಳ ಸಾವಿಗೆ ಕಾರಣವಾಗಿತ್ತು.
ಸೋಂಕಿತ ಪ್ರಾಣಿಗಳು ಮತ್ತು ಕಲುಷಿತ ಪರಿಸರದ ಮೂಲಕ ಮನುಷ್ಯರಿಗೆ ನೇರ ಸಂಪರ್ಕದಲ್ಲಿ ಇನ್‌ಫ್ಲೂಯೆಂಜಾಗಳು ಹರಡುತ್ತವೆ. ಆದರೆ ಜನರ ನಡುವಿನ ಸಂಪರ್ಕದಲ್ಲಿ ಈ ವೈರಸ್‌ಗಳು ಅಷ್ಟು ಪರಿಣಾಮಕಾರಿಯಾಗಿ ಹರಡುವುದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗಿದೆ.

Mon May 2 , 2022
ಕಾರ್ಮಿಕರ ದಿನಾಚರಣೆ ಅಂಗವಾಗಿ ಕೆಲವೊಂದು ಸಂಸ್ಥೆಗಳು ಕೊಡುಗೆಗಳನ್ನು ಸಹ ನೀಡಿವೆ. ಇದರ ಮಧ್ಯೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಆಲಳ್ಳಿಯಲ್ಲಿ ವ್ಯಕ್ತಿಯೊಬ್ಬರು ವಿಶಿಷ್ಟವಾಗಿ ಕಾರ್ಮಿಕ ದಿನಾಚರಣೆ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ಕಬ್ಬಿನ ಹಾಲು ವ್ಯಾಪಾರ ಮಾಡುವ ಪುಟ್ಟಪ್ಪ ಬಲೆಗಾರು ಅವರು ಮೇ 1ರ ಭಾನುವಾರದಂದು ಕಾರ್ಮಿಕರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಬ್ಬಿನ ಹಾಲು ವಿತರಿಸಿದ್ದಾರೆ. ಈ ಕುರಿತು […]

Advertisement

Wordpress Social Share Plugin powered by Ultimatelysocial