ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಬ್ಲಿಂಕ್’ ನಟಿ ಚೈತ್ರಾ ಜೆ ಆಚಾರ್ – ದೇವಕಿ ಅರಸ್ ಪಾತ್ರದ ಝಲಕ್ ರಿಲೀಸ್.

 

ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಬ್ಲಿಂಕ್’. ಈಗಾಗಲೇ ಟೀಸರ್ ಮೂಲಕ ಬ್ಲಿಂಕ್ ಸಿನಿಮಾ ಗಮನ ಸೆಳೆದಿದೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಚೈತ್ರಾ ಜೆ ಆಚಾರ್ ಹಾಗೂ ಮಂದಾರ ಬಟ್ಟಲಹಳ್ಳಿ ನಾಯಕಿಯರಾಗಿ ನಟಿಸಿದ್ದಾರೆ. ಇಂದು ನಾಯಕಿ ಚೈತ್ರಾ ಜೆ ಆಚಾರ್ ಹುಟ್ಟುಹಬ್ಬ ಆ ಪ್ರಯುಕ್ತ ‘ಬ್ಲಿಂಕ್’ ಚಿತ್ರತಂಡ ಚಿತ್ರದಲ್ಲಿನ ಚೈತ್ರಾ ಜೆ ಆಚಾರ್ ಪಾತ್ರದ ಸಣ್ಣ ಝಲಕ್ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭ ಹಾರೈಸಿದೆ.‘ಮಹಿರಾ’, ‘ಆ ದೃಶ್ಯ’, ತಲೆದಂಡ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ‘ಬ್ಲಿಂಕ್’ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 90ರ ದಶಕದ ಸೆಮಿ ಮಾಡ್ರೆನ್ ಹಳ್ಳಿ ಹುಡುಗಿಯಾಗಿ ದೇವಕಿ ಅರಸ್ ಪಾತ್ರ ನಿಭಾಯಿಸಿದ್ದಾರೆ. ದೇವಕಿ ಅರಸ್ ಚಿತ್ರದಲ್ಲಿ ತುಂಬಾ ಮಾತನಾಡುವ, ಎಲ್ಲರೊಂದಿಗೆ ಬಹಳ ಬೇಗ ಕನೆಕ್ಟ್ ಆಗುವ ಪಾತ್ರ ಎಂದು ಚಿತ್ರದ ನಿರ್ದೇಶಕ ಶ್ರೀನಿಧಿ ತಿಳಿಸಿದ್ದಾರೆ. ದೇವಕಿ ಅರಸ್ ಪಾತ್ರದ ಸಣ್ಣ ಝಲಕ್ ಜನನಿ ಪಿಚ್ಚರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.ಗಾಯಕಿ ಹಾಗೂ ನಟಿಯಾಗಿರುವ ಚೈತ್ರಾ ಜೆ ಆಚಾರ್ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಸ್ಟ್ರಾಬೆರಿ’ ಸೇರಿದಂತೆ ಹಲವು ಸಿನಿಮಾ ಅವಕಾಶಗಳು ಇವರ ಕೈಯಲ್ಲಿವೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದ ಸೋಜುಗಾದ ಸೂಜಿಮಲ್ಲಿಗೆ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ಹೊಸ ಪ್ರತಿಭೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ. ಸಿನಿಮಾ ಕೆಲಸಗಳು ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಸಿನಿಮಾ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕರೆಂಟ್' ಬಿಲ್ ಜಾಸ್ತಿ ಬರ್ತಿದ್ಯಾ.? ಈ 'ಸಾಧನ' ಅಳವಡಿಸಿ, ಅರ್ಧದಷ್ಟು ಕಡಿಮೆ ಆಗುತ್ತೆ

Sat Mar 4 , 2023
  ಬೇಸಿಗೆ ಶುರುವಾಗಿದ್ದು, ಫ್ಯಾನ್, ಎಸಿ ಅಥವಾ ಕೂಲರ್ ದಿನ ಪೂರ್ತಿ ಇರ್ಲೇಬೇಕು. ಹೀಗಾಗಿ ವಿದ್ಯುತ್ ಬಿಲ್ ಹೆಚ್ಚು ಬರೋದು ಸಾಮಾನ್ಯ. ಆದ್ರೆ, ನೀವು ವಿದ್ಯುತ್ ಬಿಲ್ ಉಳಿಸುವ ಯೋಚನೆಯಲ್ಲಿದ್ರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ವಿದ್ಯುಚ್ಛಕ್ತಿಯನ್ನ ಉಳಿಸುವುದು ಹೇಗೆ ಅನ್ನೋದರ ಕುರಿತು ಕೆಲವು ಸಲಹೆಗಳು ಇಲ್ಲಿವೆ. ಈ ಸಲಹೆಗಳ ಸಹಾಯದಿಂದ ನಿಮ್ಮ ಮನೆಯ ವಿದ್ಯುತ್ ಬಿಲ್’ನ್ನ ಅರ್ಧದಷ್ಟು ಕಡಿತಗೊಳಿಸಬಹುದು. ಆದ್ರೆ, ಶಕ್ತಿಯನ್ನ ಉಳಿಸಲು ನೀವು ಸಾಧನವೊಂದನ್ನ ಅಳವಡಿಸಬೇಕು. ಇದರಿಂದ ಶೇ […]

Advertisement

Wordpress Social Share Plugin powered by Ultimatelysocial