ಬಿಜೆಪಿ ಮತಾಂತರ ನಿಷೇಧ ಮಸೂದೆ ಮಂಡನೆ ಮೂಲಕ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಯತ್ನ:ಡಿ.ಕೆ ಶಿವಕುಮಾರ್‌

ಚಳಿಗಾಲದ ಅಧಿವೇಶನದಲ್ಲಿಂದು ಪ್ರಸ್ತಾವಿತ ಮತಾಂತರ ನಿಷೇಧ ಮಸೂದೆ ಮಂಡನೆ ಮಂಡಿಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಲು ಅನುಮೋದನೆ ಪಡೆಯಲಾಗಿದೆ.ಈ ನಡುವೆ ವಿವಾದಿತ ವಿಧೇಯಕದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಕಾಯಿದೆಯಿಂದ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ ಎಂದಿದ್ದಾರೆ.ಮತಾಂತರ ಕಾಯ್ದೆ ನಿಷೇಧದ ಬಗ್ಗೆ ಇಂದು ವಿರೋಧ ಮಾಡುತ್ತಿರುವವರೇ ಅಂದು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟ್ಟಿದ್ದರು. 2017 ರಲ್ಲಿ ಕಾಂಗ್ರೆಸ್‌ನವರು ಮತಾಂತರ ಕಾಯ್ದೆ ನಿಷೇಧ ಜಾರಿಗೆ ತರಲು ಹೊರಟ್ಟಿದ್ದನ್ನು ಪ್ರಸ್ತಾಪಿಸಿ ಸಿಎಂ ಬೊಮ್ಮಾಯಿ ಈಗಾಗಲೇ ತಿರುಗೇಟು ನೀಡಿದ್ದಾರೆ.ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ”ಬಿಜೆಪಿ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡನೆ ಮೂಲಕ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಈ ಕಾಯಿದೆಯು ರಾಜ್ಯಕ್ಕೆ ಒಂದು ಕಪ್ಪುಚುಕ್ಕೆಯಾಗಲಿದೆ. ಮಸೂದೆಗೆ ಖಡಾಖಂಡಿತ ವಿರೋಧ ಇದೆ, ಈ ಬಗ್ಗೆ ಸದನದಲ್ಲಿ ತಕ್ಕ ಉತ್ತರ ನೀಡುತ್ತೇವೆ,  ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಕೆದಾಟಿಗಾಗಿ ಪಾದಯಾತ್ರೆ ಮಾಡೇ ಮಾಡ್ತೀವಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ 

Tue Dec 21 , 2021
ಮೇಕೆದಾಟು ಪಾದಯಾತ್ರೆಗೆ  ಸುಪ್ರೀಂ ಕೋರ್ಟ್ ನಿರ್ದೇಶನ ಇದೆ ಜನವರಿ9-19 ರವರೆಗೆ ಪಾದಾಯಾತ್ರೆ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ…9 ರಂದು ಪಾದಯಾತ್ರೆ ಪ್ರಾರಂಭ ಮಾಡ್ತಿವಿ,ಐದು ದಿನ ಸಿಟಿಯಲ್ಲಿ ಪಾದಯಾತ್ರೆ ಮಾಡ್ತಿವಿ,ಅಪಾರ್ಟ್ಮೆಂಟ್ ನಲ್ಲಿರೋ ಹಾಗೂ ಇತರ ಜನರು ಕಾಲ್ ಮಾಡ್ತೊದ್ದಾರೆ.ಪಾದಯಾತ್ರೆಯಲ್ಲಿ ಪಾರ್ಟಿಸಿಪೇಟ್ ಮಾಡ್ತಿವಿ ಅಂತೊದ್ದಾರೆ.ಸಮಾಜ ಸೇವಕರು ಸಾಹಿತಿಗಳು ಇದ್ರಲ್ಲಿ‌ ಪಾರ್ಟಿಸಿಪೇಟ್ ಮಾಡಲು ಆಹ್ವಾನ ನೀಡ್ತಿದ್ದೇವೆಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡ್ತಿವಿ,ಯಾವ ಸಂಘಟನೆ ಯಾರಾದ್ರು ಈ […]

Advertisement

Wordpress Social Share Plugin powered by Ultimatelysocial