ಕಾಶಿ ವಿಶ್ವನಾಥ ಕಾರಿಡಾರ್ ಮಾದರಿ ಶ್ರೀಕೃಷ್ಣ ಜನ್ಮಭೂಮಿ ಮಥುರಾದಲ್ಲೂ ಭವ್ಯ ಮಂದಿರ ಬೇಕು:ಬಿಜೆಪಿ ಸಂಸದೆ ಹೇಮಾ ಮಾಲಿನಿ

ಭಗವಂತ ಕೃಷ್ಣನ ಜನ್ಮಸ್ಥಳವಾದ ಮಥುರಾ ಕ್ಷೇತ್ರವನ್ನು ನಾನು ಸಂಸತ್‌ ನಲ್ಲಿ ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ ಅಲ್ಲಿ ಭವ್ಯವಾದ ಮಂದಿರವೊಂದು ಇರಬೇಕೆಂದು ನಾನು ಆಶಿಸುತ್ತೇನೆ. ಮಥುರಾದಲ್ಲಿ ಈಗಾಗಲೇ ದೇವಾಲಯವಿದೆ. ಅದನ್ನು ಕಾಶಿ ವಿಶ್ವನಾಥ ಕಾರಿಡಾರ್ ರೀತಿ ಅಭಿವೃದ್ಧಿಪಡಿಸಬೇಕು,’ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.ರಾಮ ಜನ್ಮಭೂಮಿ ಮತ್ತು ಕಾಶಿಯ ಮರುಸ್ಥಾಪನೆಯ ನಂತರ, ಸ್ವಾಭಾವಿಕವಾಗಿ ಮಥುರಾವನ್ನು ಅಭಿವೃದ್ಧಿಗೊಳಿಸುವುದು ಮುಖ್ಯವಾಗುತ್ತದೆ, ಎಂದು ಸಂಸದೆ ಭಾನುವಾರ ಇಂದೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದೋರ್‌ಗೆ ಆಗಮಿಸಿದ್ದ ಸಂಸದೆ ಹೇಮಾ ಮಾಲಿನಿ ಕಾಶಿಗೆ ತೆರಳುತ್ತಿರುವುದಾಗಿಯೂ ಹೇಳಿದರು.

ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾದ ಭಗವಾನ್ ಕೃಷ್ಣನ ಜನ್ಮಸ್ಥಳವಾದ ಮಥುರಾದ ಸಂಸದೆಯಾಗಿರುವುದರಿಂದ ಅಲ್ಲಿ ಭವ್ಯವಾದ ದೇವಾಲಯ ಇರಬೇಕು ಎಂದು ನಾನು ಹೇಳುತ್ತೇನೆ. ಈಗಾಗಲೇ ದೇವಸ್ಥಾನವಿದೆ. ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಯಲ್ಲಿ ದೇವಾಲಯದಿಂದ ನದಿಗೆ ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ. ಕಾಶಿಯಂತೇ ಮಥುರಾವನ್ನೂ ಸುಂದರಗೊಳಿಸಬಹುದು, ಎಂದು ಅವರು ಹೇಳಿದರು.ಕಾಶಿ ವಿಶ್ವನಾಥನ ನವೀಕರಣ ಮತ್ತು ಪುನರ್‌ ಅಭಿವೃದ್ಧಿ ಬಹಳ ಕಷ್ಟಕರವಾಗಿತ್ತು. ಇದು ಮೋದಿಯವರ ದೂರದೃಷ್ಟಿಯನ್ನು ತೋರಿಸುತ್ತದೆ. ಅದೇ ಮಥುರಾದಲ್ಲಿಯೂ ಆಗಲಿದೆ, ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಬೈರತಿ ಬಸವರಾಜ ವಿರುದ್ದ ಭೂಕಬಳಿಕೆ ಆರೋಪ ಕಾಂಗ್ರೆಸ್ ಪ್ರತಿಭಟನೆ

Mon Dec 20 , 2021
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರುದ್ಧ ಭೂಕಬಳಿಕೆ ವಿಚಾರವಾಗಿ ಇಂದು ಕೆಆರ್ ಪುರ ಬಿಬಿಎಂಪಿ ಕಚೇರಿಯ ಎದುರು ಕೆಆರ್ ಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು…ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಚಿವ ವಿರುದ್ಧ ಘೋಷಣೆ ಕೂಗಿ, ರಾಜೀನಾಮೆಗೆ ಒತ್ತಾಯಿಸಿದರು.. ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅವರು, ಭೂಕಬಳಿಕೆ ಮಾಡಿದ ಬೈರತಿ ಬಸವರಾಜ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು… ಇತ್ತ ಭೂ ಮಾಲೀಕ ಅಣ್ಣಯ್ಯಪ್ಪ ಅವರ […]

Advertisement

Wordpress Social Share Plugin powered by Ultimatelysocial