ಬಾಲಿವುಡ್‌ನಿಂದ ‘777 ಚಾರ್ಲಿ’ ರಿಮೇಕ್‌ಗೆ ಬೇಡಿಕೆ?

ನಟ ರಕ್ಷಿತ್ ಅಭಿನಯದ ‘777 ಚಾರ್ಲಿ’ ಸಿನಿಮಾ ರಿಲೀಸ್ ಜೂನ್ 10ರಂದು ತೆರೆಕಂಡಿದೆ. ‘777 ಚಾರ್ಲಿ’ ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ವಿಭಿನ್ನವಾಗಿ ನಿಲ್ಲುತ್ತದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು.

ಬಾಕ್ಸಾಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿದೆ.

ಕನ್ನಡದ ನಟ ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದು. ಕನ್ನಡ ಸೇರಿದಂತೆ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ಕೂಡ ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಸಿನಿಮಾಗೆ ಉತ್ತಮ ಪ್ರಶಂಸೆ ಸಿಕ್ಕಿದೆ.

ಕನ್ನಡದ ಚಾರ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದರೂ, ಕೂಡ ಚಿತ್ರಕ್ಕೆ ರಿಮೇಕ್ ಬೇಡಿಕೆ ಬಂದಿದೆಯಂತೆ. ಅರೆ ಈ ಸಿನಿಮಾ ಬೇರೆ ಭಾಷೆಗಳಿಗೂ ಡಬ್ ಆಗಿದೆ. ಆದರೂ ರಿಮೇಕ್ ರೈಟ್ಸ್ ಯಾಕೆ ಎಂದುಕೊಂಡರೆ ಅದು ನಿಜ. ಆದರೂ ಕೂಡ ಚಾರ್ಲಿ ರಿಮೇಕ್ ಹಕ್ಕು ಪಡೆಯಲು ಮಾತುಕತೆ ಶುರುವಾಗಿದೆಯಂತೆ.

ಬಾಲಿವುಡ್‌ನಲ್ಲಿ ‘777 ಚಾರ್ಲಿ’ ರಿಮೇಕ್?
‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿ 3 ವಾರಗಳು ಕಳೆದಿವೆ. ವಿಶ್ವದಾದ್ಯಂತ ರಿಲೀಸ್ ಆದ ಈ ಸಿನಿಮಾ ಪ್ರೇಕ್ಷಕರನ್ನು ಭಾವನಾತ್ಮಕನಾಗಿ ಸೆಳೆದಿದೆ. ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದೆ. ಆದರೂ ಕೂಡ ಈ ಸಿನಿಮಾದ ರಿಮೇಕ್ ಹಕ್ಕಿಗೆ ಬೇಡಿಕೆ ಬಂದಿದೆಯಂತೆ. ಹಿಂದಿಗೆ ಸಿನಿಮಾ ರಿಮೇಕ್ ಮಾಡಲು ಬೇಡಿಕೆ ಬಂದಿದೆಯಂತೆ. ಆದರೆ ಯಾರು ಚಾರ್ಲಿಗಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನುವುದನ್ನು ಚಿತ್ರತಂಡವೇ ಧೃಡಪಡಿಸಬೇಕಿದೆ.

17 ದಿನ ಪೂರೈಸಿದ ‘777 ಚಾರ್ಲಿ’!

ಚಾರ್ಲಿ ಸಿನಿಮಾ 17 ದಿನಗಳನ್ನೂ ಪೂರೈಸಿದೆ. ಬಾಕ್ಸಾಫೀಸ್‌ನಲ್ಲೂ ಕೂಡ ಮೊದಲ ದಿನದಿಂದ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಇನ್ನು ಸಿನಿಮಾ 17 ದಿನಗಳನ್ನು ಪೂರೈಸುವ ನಿಟ್ಟಿನಲ್ಲಿ ಅಂದಾಜು 80 ಕೋಟಿ ರೂ. ಗಡಿಯನ್ನು ದಾಟಿದೆ ಎನ್ನಲಾಗಿದೆ. ಇನ್ನು 100 ಕೋಟಿ. ರೂ ಗಳಿಕೆಗೆ ಕೆಲವೇ ದಿನಗಳು ಬಾಕಿದೆ. ಇದರ ಜೊತೆಗೆ ಚಾರ್ಲಿಗೆ ರಿಮೇಕ್ ಬೇಡಿಯೂ ಬಂದಿದೆಯಂತೆ.

ಚಾರ್ಲಿ ಮೂಲಕ ರಕ್ಷಿತ್ ಶೆಟ್ಟಿ ದಾಖಲೆ!

777 ಚಾರ್ಲಿ ಸಿನಿಮಾ ನಟ ರಕ್ಷಿತ್ ಶೆಟ್ಟಿಗೆ ಉತ್ತಮ ಗೆಲುವು ತಂದುಕೊಟ್ಟಿದೆ. ರಕ್ಷಿತ್ ಶೆಟ್ಟಿಯ ಕೆರಿಯರ್‌ನಲ್ಲಿ ಅತಿ ಹೆಚ್ಚು ಗ್ರಾಸ್ ಕಂಡ ಸಿನಿಮಾ ಇದು. ಜೊತೆಗೆ ಗಳಿಕೆಯಲ್ಲೂ ಈ ಸಿನಿಮಾದ ಮೂಲ ನಟ ರಕ್ಷಿತ್ ಶೆಟ್ಟಿ ದಾಖಲೆ ಮಾಡಿದ್ದಾರೆ. ಧರ್ಮ ಮತ್ತು ಚಾರ್ಲಿ ಜಂಜಾಟದ ಕಥೆ ತಮ್ಮದೇ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದಿದೆ. 100 ಕೋಟಿ ರೂ. ಮಾಡಿ ದಾಖಲೆ ಬರೆಯುವುದೊಂದೇ ಇನ್ನೂ ಬಾಕಿ ಇದೆ.

ರಕ್ಷಿತ್ ಕೈಯಲ್ಲಿ ಸಾಲು, ಸಾಲು ಸಿನಿಮಾ!

ನಟ ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಕ್ಷಿತ್ ಮುಂದಿನ ಸಿನಿಮಾ ‘ಸಪ್ತ ಸಾಗರದಾಚೆ ಎಲ್ಲೋ’. ಈಗಾಗಲೇ ಈ ಚಿತ್ರದ ಶೂಟಿಂಗ್ ಕೂಡ ಬಹುತೇಕ ಮುಗಿದಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ರಕ್ಷಿತ್ ಲುಕ್ ಕೂಡ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಬಳಿಕ ರಕ್ಷಿತ್ ಶೆಟ್ಟಿ ‘ರಿಚರ್ಡ್ ಆಂಟನಿ’ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ

Tue Jun 28 , 2022
ಪ್ರೆಗ್ನೆಂಟ್ ಆದ ನಂತರ ನಟನೆ ಸಾಧ್ಯವಿಲ್ಲ. ಮಗು ಜನಿಸಿದ ನಂತರ ಒಂದಷ್ಟು ಕಾಲ ಅದರ ಆರೈಕೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಹೀಗಾಗಿ, ಒಂದಷ್ಟು ವರ್ಷ ಚಿತ್ರರಂಗದಿಂದ ಗ್ಯಾಪ್ ಆಗೋದು ಪಕ್ಕಾ.ನಟರಣಬೀರ್ ಕಪೂರ್  ಹಾಗೂ ನಟಿ ಆಲಿಯಾ ಭಟ್ ದಂಪತಿ ಶೀಘ್ರವೇ ತಂದೆ-ತಾಯಿ ಆಗುತ್ತಿದ್ದಾರೆ. ಕಪೂರ್ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಆಗುತ್ತಿರುವ ವಿಚಾರ ಸಾಕಷ್ಟು ಜನರಿಗೆ ಖುಷಿ ನೀಡಿದೆ. ಆದರೆ, ಆಲಿಯಾ ಭಟ್ ಇಷ್ಟು ಬೇಗ ಮಗು ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದು ಅನೇಕರಲ್ಲಿ ಅಚ್ಚರಿ […]

Advertisement

Wordpress Social Share Plugin powered by Ultimatelysocial