ಬಾಯ್‌ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್!:BOLLYWOOD

ಬಾಲಿವುಡ್‌ನಲ್ಲಿ ಬ್ರೇಕಪ್‌ ವಿಚಾರಗಳು ಹೆಚ್ಚಾಗಿ ಸದ್ದು ಮಾಡುತ್ತವೆ. ಬ್ರೇಕಪ್ ಅಥವಾ ವಿಚ್ಛೇದನದ ಸುದ್ದಿಗಳು ಬಾಲಿವುಡ್‌ನಲ್ಲಿ ಸರ್ವೇ ಸಾಮಾನ್ಯ. ಒಬ್ಬ ನಟ ಅಥವಾ ನಟಿ 2, 3 ಬಾರಿ ವಿಚ್ಛೇದನ ಅಥವಾ ಬ್ರೇಕಪ್‌ ಮೂಲಕ ಸುದ್ದಿ ಆಗುತ್ತಾರೆ. ಸದ್ಯ ನಟಿ ಸುಷ್ಮಿತಾ ಸೇನ್‌ ಬ್ರೇಕಪ್ ವಿಚಾರವಾಗಿ ಸುದ್ದಿ ಆಗಿದ್ದಾರೆ.

ಸುಷ್ಮಿತಾ ಸೇನ್‌ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಅದಕ್ಕೂ ಮುನ್ನ ಮಿಸ್‌ ಯುನಿವರ್ಸ್ ಕಿರೀಟ ತೊಟ್ಟಾಕೆ. ಸುಷ್ಮಿತಾ ಅವರ ಸಿನಿ ಬದುಕಿನ ಜೊತೆಗೆ ಅವರ ವೈಯಕ್ತಿಕ ಬದುಕು ಕೂಡ ಅಷ್ಟೇ ಸದಾ ಚರ್ಚೆಯಲ್ಲಿ ಇರುತ್ತಿತ್ತು. ಯಾಕೆಂದರೆ ಸುಷ್ಮಿತಾ ಅವರು ಮದುವೆ ಆಗಿಲ್ಲ. ಹಾಗಾಗಿ ಆಕೆ ಯಾರ ಜೊತೆ ಮದುವೆ ಆಗುತ್ತಾರೆ ಎನ್ನುವ ವಿಚಾರ ಹಲವು ಬಾರಿ ಮುನ್ನೆಲೆಗೆ ಬಂದು ಹೋಗುತ್ತಿತ್ತು.

ಆದರೆ ಆಕೆಯ ಮದುವೆ ಬಗ್ಗೆ ಗಾಸಿಪ್‌ಗಳು ಕಡಿಮೆ ಆಗಿದ್ದು, ಆಕೆಯ ಬಾಳಿನಲ್ಲಿ ಮಾಡಲ್‌ ರೋಹ್‌ಮನ್ ಶಾಲ್ ಎಂಟ್ರಿ ಕೊಟ್ಟರು. ಇದೀಗ ಸುಷ್ಮಿತಾ ರೋಹ್‌ಮನ್ ಶಾಲ್ ಅವರಿಂದ ದೂರ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ.

ಈ ಸಂಬಂಧ ಮುಗಿದು ಹೆಚ್ಚು ಕಾಲವಾಯ್ತು:ನಟಿ ಸುಷ್ಮಿತಾ ಸೇನ್‌ ತಮ್ಮ ಬಹುಕಾಲದ ಗೆಳೆಯನೊಂದಿಗೆ ಬ್ರೇಕಪ್‌ ಮಾಡಿಕೊಂಡಿದ್ದಾರೆ. ಗೆಳೆಯ ಅಂದರೆ ಇವರು ಕೇವಲ ಸ್ನೇಹಿತ ಆಗಿ ಇರಲಿಲ್ಲ. ಬದಲಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಹಾಗಾಗಿ ಈ ಜೋಡಿ ಮದುವೆ ಆಗುತ್ತೆ ಅಂತಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೂ ಮುನ್ನ ಬ್ರೇಕಪ್ ಆಗಿದೆ. ಈ ವಿಚಾರವಾಗಿ ಪೋಸ್ಟ್‌ ಹಂಚಿಕೊಂಡಿರುವ ಸುಷ್ಮಿತಾ ಸೇನ್‌ ” ಈ ಸಂಬಂಧ ಮುಗಿದು ಹೋಗಿದೆ. ಸ್ನೇಹಿತರಾಗಿ ಪಯಣ ಆರಂಭಿಸಿದ್ದೇವೆ. ಇನ್ನೂ ನಾವು ಸ್ನೇಹಿತರು ಮಾತ್ರ, ಪ್ರೀತಿ ಸದಾ ಇರುತ್ತದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರೋಹ್‌ಮನ್ ಶಾಲ್ ಜೊತೆಗಿನ ಫೋಟೊ ಕೂಡ ಹಂಚಿಕೊಂಡಿದ್ದಾರೆ ಸುಷ್ಮಿತಾ ಸೇನ್.

ಸುಷ್ಮಿತಾ ರೋಹ್‌ಮನ್ ನಡುವೆ 15 ವರ್ಷದ ಅಂತರ!

ನಟಿ ಸುಷ್ಮಿತಾ ಸೇನ್‌ ಮತ್ತು ರೋಹ್‌ಮನ್ 2018ರಿಂದ ಜೊತೆಗೆ ಇದ್ದಾರೆ. ರೋಹ್‌ಮನ್ ಒಬ್ಬ ಮಾಡಲ್, ಸಾಕಷ್ಟು ಸೆಲೆಬ್ರೆಟಿ ವಿನ್ಯಾಸಕರ ಉಡುಪುಗಳಿಗೆ ರೋಹ್‌ಮನ್ ರ್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಸುಷ್ಮಿತಾ ಜೊತೆಗೆ ರೋಹ್‌ಮನ್ ಹೆಸರು 2018ರಿಂದ ಕೇಳಿ ಬರುತ್ತಿದೆ. ಸುಷ್ಮಿತಾ ಸೇನ್‌ ರೋಹ್‌ಮನ್‌ಗಿಂತಲೂ ವಯಸ್ಸಿನಲ್ಲಿ 15 ವರ್ಷ ದೊಡ್ಡವರು. ಈ ಬಗ್ಗೆ ಸಾಕಷ್ಟು ಟ್ರೋಲ್‌ ಆಗಿದ್ದವು. ಆದರೆ ಅವರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಇದೀಗ ಇವರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಯಾಗಿದೆ.

ಸುಷ್ಮಿತಾ ಕುಟುಂಬದ ಜೊತೆಗೆ ಖುಷಿಯಾಗಿ ಇದ್ದ ರೋಹ್‌ಮನ್!

ಸುಷ್ಮಿತಾ ಮದುವೆ ಆಗಿಲ್ಲ. ಆದರೆ ಇಬ್ಬರು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಸುಷ್ಮಿತಾ ತಾಯಿ ಆಗಿ ಜೀವನ ಸಾಗಿಸುತ್ತಿದ್ದರು. ಇವರ ಕುಟುಂಬಕ್ಕೆ ಎಂಟ್ರಿ ಕೊಟ್ಟ ರೋಹ್‌ಮನ್ ಶಾಲ್ ಕೂಡ ಅವರೊಂದಿಗೆ ಖುಷಿಯಾಗಿ ಇದ್ದರು. ರೋಹ್‌ಮನ್ ಇರುವ ಹಲವು ಫೋಟೊಗಳನ್ನು ಸುಷ್ಮಿತಾ ಮತ್ತು ಅವರ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೋಹ್‌ಮನ್ ಕೂಡ ಸುಷ್ಮಿತಾ ಕುಟುಂಬದ ಸದಸ್ಯನೇ ಆಗಿ ಬಿಟ್ಟಿದ್ದ. ಜೊತೆಗೆ ಸುಷ್ಮಿತಾ ಅವರ ಜೊತೆಗೆ ಅವರ ಮನೆಯಲ್ಲೇ ವಾಸವಿದ್ದ. ಬ್ರೇಕಪ್‌ ಬಳಿಕ ಮನೆಯಿಂದ ಹೊರ ಬಂದಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

KANGANA:ಎಚ್ಚರಿಕೆ ಬಳಿಕ ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಂಗನಾ;

Wed Dec 29 , 2021
ನ್ಯಾಯಾಲಯದಿಂದ ಹಲವು ಎಚ್ಚರಿಕೆಗಳನ್ನು ನೀಡಲಾದ ಬಳಿಕ, ಬಂಧನದಿಂದ ತಪ್ಪಿಸಿಕೊಳ್ಳಲು ಕೊನೆಗೂ ಕಂಗನಾ ರನೌತ್ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಮಾಡಿದ್ದ ಟ್ವೀಟ್‌ಗೆ ವಿರುದ್ಧವಾಗಿ ಕಂಗನಾ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಮುಂಬೈನಲ್ಲಿ ದಾಖಲಾಗಿದ್ದ ದೂರಿನ ವಿಚಾರಣೆಗೆ ಇಂದು ಕಂಗನಾ ರನೌತ್ ಹಾಜರಾಗಿದ್ದರು. ಕಂಗನಾ ಪೊಲೀಸ್ ಠಾಣೆಗೆ ಬಂದ ವಿಡಿಯೋ ಬಹಳ ವೈರಲ್ ಆಗಿದ್ದು, ಪೊಲೀಸ್ ಠಾಣೆಗೆ ಹಾಜರಾದ ಕಂಗನಾರ ಬಿಂಕ, ‘ಆಟಿಟ್ಯೂಡ್’ ಬಗ್ಗೆ ಜೋರು […]

Advertisement

Wordpress Social Share Plugin powered by Ultimatelysocial