ಬಸ್ ನಲ್ಲಿ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾದ ಪ್ರಯಾಣಿಕರು : 10 ರೂ. ಕೋಳಿ ಮರಿಗೆ ಅರ್ಧ ಚಾರ್ಜ್ 52 ರೂ. ಟಿಕೆಟ್

ಬಸ್ ನಲ್ಲಿ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾದ ಪ್ರಯಾಣಿಕರು: 10 ರೂ. ಕೋಳಿ ಮರಿಗೆ ಅರ್ಧ ಚಾರ್ಜ್ 52 ರೂ. ಟಿಕೆಟ್
ಶಿವಮೊಗ್ಗ: 10 ರೂಪಾಯಿ ಕೋಳಿ ಮರಿಗೆ ಬಸ್ ನಲ್ಲಿ ಅರ್ಧ ಚಾರ್ಜ್ ಮಾಡಿ 52 ರೂಪಾಯಿ ಟಿಕೆಟ್ ನೀಡಿದ ಘಟನೆ ನಡೆದಿದೆ.

ಅಲೆಮಾರಿ ಕುಟುಂಬವೊಂದು ಬೈಂದೂರು ತಾಲೂಕಿನ ಶಿರೂರಗೆ ತೆರಳುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೋಳಿ ಮರಿ ಖರೀದಿಸಿದೆ.

10 ರೂಪಾಯಿ ಕೊಟ್ಟು ಕೋಳಿಮರಿ ಖರೀದಿಸಲಾಗಿದ್ದು, ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಿರೂರಗೆ ತೆರಳಲು ಸರ್ಕಾರಿ ಬಸ್ ಹತ್ತಿದ್ದಾರೆ.

ಮೂವರು ಇದ್ದ ಅಲೆಮಾರಿ ಕುಟುಂಬದವರು ಕೋಳಿ ಮರಿ ಜೊತೆಗೆ ಒಯ್ಯುತ್ತಿರುವುದನ್ನು ಕಂಡ ಬಸ್ ಕಂಡಕ್ಟರ್ ಮೂವರ ಜೊತೆಗೆ ಕೋಳಿ ಮರಿಗೆ ಅರ್ಧ ಚಾರ್ಜ್ ನೀಡಿ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ನಿಯಮದ ಪ್ರಕಾರ ಅರ್ಧ ಟಿಕೆಟ್ ತೆಗೆದುಕೊಳ್ಳಬೇಕೆಂದು ಕಂಡಕ್ಟರ್ ಹೇಳಿದ್ದು, ಅಲೆಮಾರಿ ಕುಟುಂಬದವರು ಅರ್ಧ ಚಾರ್ಜ್ 52 ರೂಪಾಯಿ ಕೊಟ್ಟು ಕೋಳಿಮರಿಗೆ ಟಿಕೆಟ್ ಪಡೆದಿದ್ದಾರೆ.

10 ರೂಪಾಯಿ ಕೋಳಿ ಮರಿ ಜೊತೆಗೆ ಕೊಂಡೊಯ್ಯಲು ಅಲೆಮಾರಿ ಕುಟುಂಬದವರು 52 ರೂಪಾಯಿ ಟಿಕೆಟ್ ಪಡೆದ ಈ ವಿಚಾರ ಬಸ್ ಲ್ಲಿದ್ದ ಪ್ರಯಾಣಿಕರಿಗೂ ಸೋಜಿಗವೆನಿಸಿದೆ. ಟಿಕೆಟ್ ಪಡೆದ ಕೋಳಿ ಮರಿಯನ್ನು ಮಹಿಳೆ ಪಕ್ಕದ ಸೀಟ್ ನಲ್ಲೇ ಬಿಟ್ಟಿದ್ದಾರೆ. ಈ ಸ್ವಾರಸ್ಯಕರ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

25 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ : ಸಾಲದ ನಿರೀಕ್ಷೆಯಲ್ಲಿದ್ದ ಎಲ್ಲಾ ವರ್ಗದವರಿಗೆ ಇಲ್ಲಿದೆ ಗುಡ್ ನ್ಯೂಸ್

Sun Jan 2 , 2022
ಮಡಿಕೇರಿ: 2021-22 ನೇ ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ(ಪಿಎಂಇಜಿಪಿ) ಕಾರ್ಯಕ್ರಮದಡಿ ಕೈಗಾರಿಕೆ, ಉತ್ಪಾದನ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕ, ಅಂಗವಿಕಲರು, ಮಹಿಳೆಯರು, ಸಾಮಾನ್ಯ ವರ್ಗ, ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ವಉದ್ಯೋಗ ಕೈಗೊಳ್ಳುವವರಿಗೆ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನೀಂದ ಗರಿಷ್ಟ 25 ಲಕ್ಷ ರೂ.ವರೆಗೆ […]

Advertisement

Wordpress Social Share Plugin powered by Ultimatelysocial