ಶಾಲೆಗೆ ಬರಲು ಸಾಧ್ಯವೇ?’ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಚಿಕ್ಕಮಗಳೂರು: ‘ಹೆಣ್ಣು ಮಕ್ಕಳು ಸೀರೆ ಉಡಬಹುದು. ಬಿಕಿನಿ, ಜೀನ್ಸ್​ ಸೇರಿದಂತೆ ಇಷ್ಟ ಬಂದ ಡ್ರೆಸ್​ ಹಾಕಬಹುದು ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅವರು ಹೇಳಿದ್ದು ಸರಿ. ಆದರೆ ಬಿಕಿನಿ ಹಾಕಿಕೊಂಡು ಸ್ವಿಮ್ಮಿಂಗ್​ಪೂಲ್​, ಬೀಚ್​ಗೆ ಹೋಗಬಹುದೇ ಹೊರತು ಶಾಲೆಗೆ ಬರಲು ಸಾಧ್ಯವೇ?’ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ‘ಮನೆಯಲ್ಲಿ ಗಂಡನ ಎದುರು ಹೆಂಡತಿ ಹೇಗೆ ಬೇಕಾದರೂ ಇರಬಹುದು. ಆದರೆ ನನ್ನಿಷ್ಟ ಎಂದು ಬೀದಿಗೆ ಬರಲು ಸಾಧ್ಯವಾ? ಆಗ ಜನ ಬೇರೆಯದೇ ಮಾತನಾಡುತ್ತಾರೆ. ಶಾಲಾ ಕಾಲೇಜುಗಳಿಗೆ ಒಂದು ವಸ್ತ್ರಸಂಹಿತೆ ಇದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಇರಬೇಕು’ ಎಂದರು.’ಮತಗಳ ಹಿಂದೆ ಓಡುತ್ತ ಮತಾಂಧತೆಯನ್ನು ಬೆಂಬಲಿಸುವ ಹೀನ ಕೆಲಸಕ್ಕೆ ಕೈಹಾಕಿ ದೇಶವನ್ನು ಸರ್ವನಾಶ ಮಾಡಬೇಡಿ. ಯೂನಿಫಾರ್ಮ್​ ಅರ್ಥವನ್ನು ಹೇಳಿ. ಒಂದು ಕಾಲದಲ್ಲಿ ಸಿರಿಯಾ, ಪರ್ಷಿಯನ್​, ಗಾಂಧಾರದಲ್ಲಿದ್ದಂತಹ ನಾಗರಿಕತೆ ಇಂದಿಲ್ಲ. ಅದಾಗಬಾರದು ಎಂದಿದ್ದರೆ ಶಾಲೆ, ಸಮಾಜ, ವ್ಯವಸ್ಥೆಯಿಂದಲೂ ಮತೀಯವಾದವನ್ನು ಹೊರಗಿಡಬೇಕು. ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ. ಹೊರಗಡೆ ಅವರವರ ಇಚ್ಛೆ’ ಎಂದು ಸಿ.ಟಿ. ರವಿ ಹೇಳಿದರು.’ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಬೇಕು. ಹಿಜಾಬ್​ ಜಾಬ್​ ಕೊಡಿಸುವುದಿಲ್ಲ. ಶಿಕ್ಷಣ, ಜ್ಞಾನ ಮಾತ್ರವೇ ಜಾಬ್​ ಕೊಡಿಸುತ್ತದೆ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಹಾರವು ನಾಳೆಯಿಂದ ಮುಂದಿನ ಆದೇಶದವರೆಗೆ ಎಲ್ಲಾ COVID-19 ನಿರ್ಬಂಧಗಳನ್ನು ತೆಗೆದುಹಾಕುತ್ತದೆ

Sun Feb 13 , 2022
    ಬಿಹಾರವು ನಾಳೆಯಿಂದ ಮುಂದಿನ ಆದೇಶದವರೆಗೆ ಎಲ್ಲಾ COVID-19 ನಿರ್ಬಂಧಗಳನ್ನು ತೆಗೆದುಹಾಕುತ್ತದೆ ಬಿಹಾರದಲ್ಲಿ ಎಲ್ಲಾ COVID-19 ನಿರ್ಬಂಧಗಳನ್ನು ಫೆಬ್ರವರಿ 14 ರಿಂದ ಮುಂದಿನ ಆದೇಶದವರೆಗೆ ತೆಗೆದುಹಾಕಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಹೇಳಿದ್ದಾರೆ. ಪರಿಶೀಲನಾ ಸಭೆಯಲ್ಲಿ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. “COVID-19 ಸೋಂಕಿನ ಪ್ರಸ್ತುತ ಸ್ಥಿತಿಯನ್ನು ಇಂದು ಪರಿಶೀಲಿಸಲಾಗಿದೆ. ಕರೋನಾ ಸೋಂಕಿನ ನಿರಂತರ ಇಳಿಕೆಯ ದೃಷ್ಟಿಯಿಂದ, ಫೆಬ್ರವರಿ 14 […]

Advertisement

Wordpress Social Share Plugin powered by Ultimatelysocial