ನವದೆಹಲಿ: ಚೆನ್ನೈ ಮೂಲದ ಔಷಧೀಯ ಕಂಪನಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಯುಎಸ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಣ್ಣಿನ ಹನಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಸಂಭಾವ್ಯ ಬ್ಯಾಕ್ಟೀರಿಯಾದ ಮಾಲಿನ್ಯದಿಂದಾಗಿ ಈ ಕಣ್ಣಿನ ಹನಿಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಆ ದೇಶದ ನಿಯಂತ್ರಕರು ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮತ್ತು ರಾಜ್ಯ ಡ್ರಗ್ ಕಂಟ್ರೋಲರ್ (ಕೇಂದ್ರ ಮತ್ತು ರಾಜ್ಯದಿಂದ ತಲಾ ಮೂರು ಅಧಿಕಾರಿಗಳು) […]

ಚಂಡೀಗಢ: ಶಿಕ್ಷಕರಿಗೆ ವಿದೇಶಗಳಲ್ಲಿ ತರಬೇತಿ ನೀಡುವ ಯೋಜನೆ ಅನುಷ್ಠಾನಕ್ಕೆ ಪಂಜಾಬ್ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಯೋಜನೆಯಡಿ ಶಾಲಾ ಶಿಕ್ಷಣ ಇಲಾಖೆ 2022-23ನೇ ಹಣಕಾಸು ವರ್ಷದಲ್ಲಿ 36 ಮಂದಿ ಪ್ರಾಚಾರ್ಯರ ತಂಡವನ್ನು ಸಿಂಗಾಪುರದ ಪ್ರಿನ್ಸಿಪಾಲ್ಸ್ ಅಕಾಡೆಮಿಗೆ ಹಾಗೂ 30 ಮಂದಿಯನ್ನು ಸಿಂಗಾಪುರದ ನನ್ಯಾಂಗ್ ಟೆಕ್ನಿಕಲ್ ಯೂನಿವರ್ಸಿಟಿಯ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್‌ಗೆ ಕಳುಹಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ. “ಈ ತರಬೇತಿಯು ಇಲ್ಲಿನ ಶಿಕ್ಷಕರಿಗೆ […]

ಕೋಯಿಕ್ಕೋಡ್ ಫೆಬ್ರವರಿ 4: ಕೇರಳದ ಕೋಯಿಕ್ಕೋಡ್‌ನಲ್ಲಿ ಲಿಂಗ ಬದಲಿಸಿಕೊಂಡ ದಂಪತಿ ದೇಶದ ಮೊದಲ ಟ್ರಾನ್ಸ್‌ಜೆಂಡರ್ ಪೋಷಕರಾಗಲಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿ ಗರ್ಭಧಾರಣೆಯ ಮೂಲಕ ಗರ್ಭಿಣಿಯಾದ 23 ವರ್ಷದ ಟ್ರಾನ್ಸ್ ಮ್ಯಾನ್ ಜಹಾದ್ ಪಾವಲ್ ಮಾರ್ಚ್‌ನಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ. ಪಾವಲ್ ಅವರ ಪಾಲುದಾರರಾಗಿರುವ 21 ವರ್ಷದ ಟ್ರಾನ್ಸ್‌ವುಮನ್ ಜಿಯಾ ಗರ್ಭಧಾರಣೆಯ ಬಗ್ಗೆ ತನ್ನ ಇತ್ತೀಚಿನ ಇನ್ಸಾಗ್ರಾಮ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಜಹಾದ್ ಗರ್ಭಧರಿಸಲು ಸಾಧ್ಯವಾಗುತ್ತದೆ ಎಂದು ದಂಪತಿಗಳು ಅರಿತುಕೊಂಡರು. […]

ಚಾಮರಾಜನಗರ, ಫೆಬ್ರವರಿ 4: ಅಡುಗೆ ಮನೆಯ ಕಿಟಕಿ ಸರಳು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರೇಮಿಗಳು ಸೇರಿ ಮೂವರನ್ನು ಚಾಮರಾಜನಗರ ಜಿಲ್ಲೆ ಪೊಲೀಸರು ಜೈಲಿಗಟ್ಟಿದ್ದಾರೆ. ಭರತ್ ಹಾಗೂ ಕಾವ್ಯ, ಲೋಹಿತ್ ಕುಮಾರ್ ಬಂಧಿತ ಆರೋಪಿಗಳು. ಭರತ್ ಹಾಗೂ ಕಾವ್ಯ ಪ್ರೇಮಿಗಳಾದ್ದು, ಹಣದ‌ ಮೋಹಕ್ಕೆ ಬಿದ್ದು ಭರತ್ ಚಿನ್ನವನ್ನು ಕದ್ದು ಕಾವ್ಯಳಿಗೆ ತಂದು ಕೊಟ್ಟಿದ್ದ. ಈ ಪ್ರೇಮಿಗಳಿಗೆ ಲೋಹಿತ್ ಎನ್ನುವಾತ ಸಹಾಯ ಮಾಡಿದ್ದು, ಸದ್ಯ ಆತನೂ ಜೈಲುಪಾಲಾಗಿದ್ದಾನೆ. […]

    ದಾವಣಗೆರೆ, ಫೆಬ್ರವರಿ 4: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಪ್ಪು ಆರ್ಥಿಕ ನೀತಿಗಳಿಂದಾಗಿ ರೈತರು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ತಲೆದೋರಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಆತಂಕ ವ್ಯಕ್ತಪಡಿಸಿದರು. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಮೂರು ದಿನಗಳ ಕಾಲ ಡಾ.ಸಾಯಿಲ್ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಮೈಕ್ರೋಬಿ ಫೌಂಡೇಷನ್ ಹಾಗೂ ಯು.ಎಸ್. ಕಮ್ಯುನಿಕೇಷನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಕೃಷಿ ಮೇಳದ ವೇದಿಕೆ […]

ಬೆಂಗಳೂರು, ಫೆಬ್ರವರಿ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಕೇವಲ 58 ದಿನಗಳಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಬಳಿ ಇರುವ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆಯ ಪುಷ್ ಬಾಕ್ಸ್ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದೆ. ಈ ಕೆಳಸೇತುವೆಯು ಹಳೆಯ ವಿಮಾನ ನಿಲ್ದಾಣ ರಸ್ತೆಯಿಂದ ಹೊರವರ್ತುಲ ರಸ್ತೆ (ORR) ಮೂಲಕ ಸರ್ಜಾಪುರ ರಸ್ತೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಎರಡು ತಿಂಗಳೊಳಗೆ ಪ್ರಿಫ್ಯಾಬ್ರಿಕೇಟೆಡ್ ಪುಶ್ ಬಾಕ್ಸ್ ಅಂಡರ್‌ಪಾಸ್‌ನಲ್ಲಿ ಇಷ್ಟು ವೇಗದ ಗತಿಯ ಕೆಲಸಕ್ಕಾಗಿ, ಬಿಬಿಎಂಪಿ […]

ಮಹಾರಾಷ್ಟ್ರ: ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತನನ್ನು ಕೊಲೆ ಮಾಡಿದ 30 ವರ್ಷದ ವ್ಯಕ್ತಿಯೊಬ್ಬ ಶವವನ್ನು ಘಾಟ್‌ನಿಂದ ಎಸೆಯಲು ಹೋಗಿ ಕಾಲು ಜಾರಿ ತಾನೂ ಸಾವನ್ನಪ್ಪಿದ ವಿಪರ್ಯಾಸ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆದ್ರೆ, ಮೃತ ದೇಹವನ್ನು ಎಸೆಯಲು ವ್ಯಕ್ತಿಗೆ ಸಹಾಯ ಮಾಡುತ್ತಿದ್ದ ಸಹಾಯಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಕೊಲ್ಲಾಪುರದಿಂದ ಸಾವಂತವಾಡಿಯ ಅಂಬೋಲಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಭೌಸೋ ಮಾನೆ ಎಂಬ 30 ವರ್ಷದ ವ್ಯಕ್ತಿ ಹಣಕಾಸಿನ ವಿಚಾರಕ್ಕೆ ತನ್ನ […]

ಮೂಢನಂಬಿಕೆಗೆ ಒಳಗಾಗಿ ಕೆಲವರು ತಮ್ಮ ಮಕ್ಕಳ ಪ್ರಾಣವನ್ನೇ ಪಣವಾಗಿಟ್ಟ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಚಿಕ್ಕ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಾಗ ಆಸ್ಪತ್ರೆಗೆ ಹೋಗುವ ಬದಲು ಮಂತ್ರವಾದಿಯ ಮೊರೆ ಹೋಗುವುದು ಹಾಗೂ ತಮಗೆ ತಿಳಿದ ಮದ್ದು ನೀಡಲು ಯತ್ನಿಸುವುದು ಮಾಡಿ ಮಕ್ಕಳ ಪ್ರಾಣಕ್ಕೆ ಸಂಚಕಾರ ತರುತ್ತಾರೆ. ಈಗ ಮಧ್ಯಪ್ರದೇಶದ ಶಾಡೋಲ್ ಜಿಲ್ಲೆಯಲ್ಲಿ ಅಂತವುದೇ ಒಂದು ಘಟನೆ ನಡೆದಿದ್ದು, ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹೆಣ್ಣು ಮಗುವಿಗೆ ಆಸ್ಪತ್ರೆಗೆ ಕರೆದುಕೊಂಡು […]

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದು ರಾಜಕೀಯ ಪ್ರಜಾಪ್ರಭುತ್ವದ ವಿಷಯವಾಗಿದ್ದು, ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯವಾಗಿದೆ. ಇದನ್ನು ಸಂಸತ್ತಿನಲ್ಲಿ ನಿರ್ಧರಿಸಬೇಕು ಎಂದು ನ್ಯಾ.ಡಿ.ವೈ ಚಂದ್ರಚೂಡ್‌ ನೇತೃತ್ವದ ನ್ಯಾಯ ಪೀಠ ತಿಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ಒಂದಕ್ಕಿಂತ ಹಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕೆಂದು ಕೋರಿ ವಕೀಲೆ ಅಶ್ವಿನಿ ಉಪಧ್ಯಾಯ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ‘ಬೇರೆ ಬೇರೆ […]

ಗುವಾಹಟಿ: ಅಸ್ಸಾಂನಲ್ಲಿ ಇದುವರೆಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 1,800 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ತಿಳಿಸಿದ್ದಾರೆ. ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ವರ್ತಿಸುವಂತೆ ಅಸ್ಸಾಂ ಪೊಲೀಸರನ್ನು ಕೇಳಿದ್ದೇನೆ ಎಂದು ಬಿಸ್ವಾ ಹೇಳಿದರು. ‘ಬಾಲ್ಯ ವಿವಾಹ ನಿಷೇಧ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಸ್ತುತ ರಾಜ್ಯಾದ್ಯಂತ ಬಂಧನಗಳು ನಡೆಯುತ್ತಿವೆ. ಇಲ್ಲಿಯವರೆಗೆ ಸುಮಾರು 1800 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಮಹಿಳೆಯರ ಮೇಲಿನ ಅಕ್ಷಮ್ಯ ಮತ್ತು ಘೋರ […]

Advertisement

Wordpress Social Share Plugin powered by Ultimatelysocial