ಕಾಂಗ್ರೆಸ್​ ಶಾಸಕ ರಮೇಶ್​​ ಕುಮಾರ್​ ಮಹಿಳೆಯರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ದೊಡ್ಡ ಬಿರುಗಾಳಿಯನ್ನೇ ಬೀಸಿದೆ. ರಮೇಶ್‌ ಕುಮಾರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ. ರಮೇಶ್​ ಕುಮಾರ್​ ಮಾತುಗಳಿಗೆ ಕಾಂಗ್ರೆಸ್ ನಾಯಕತ್ವ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಮಾತುಗಳಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ ಇವುಗಳು ಸಮರ್ಥನೆಗೆ ಮೀರಿದ್ದಾಗಿದೆ.ಇಂತಹ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಪಕ್ಷದ ಚುನಾವಣಾ ಕಾರ್ಯತಂತ್ರದ ಮೇಲೂ ಪರಿಣಾಮ ಬೀರಲಿದೆ. ಉತ್ತರ ಪ್ರದೇಶದಲ್ಲಿ ಲಡಕಿ ಹೂಂ ಲಡ್ ಸಕ್ತಾ […]

ಬೆಳಗಾವಿ ನಗರದಲ್ಲಿಂದು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿರುವ ಖಂಡಿಸಿ ಕನ್ನಡಪರ ಸಂಘಟನೆಗಳು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು ಆದರೆ 144 ಕಲಂ ಜಾರಿಯಾಗಿರುವುದರಿಂದ ಪೊಲೀಸರು ಕನ್ನಡಪರ ಸಂಘಟನೆಗಳನ್ನು ಪ್ರತಿಭಟನೆ ಮಾಡಲು ಪರವಾನಗಿ ನೀಡದೇ ಕಾರಣ ಸಂಘಟನೆ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿ ಮುಂದು ಹೋಗಲು ಪ್ರಯತ್ನಿಸಿದರು ಆದರೆ ಪೊಲೀಸರು ಕನ್ನಡ ಸಾಹಿತ್ಯ ಭವನ ಗೇಟಿನ ಹೊರಗಡೆ ಹೋಗದಂತೆ ತಡೆಹಿಡಿದರು ಕೆಲವೊತ್ತು ವಾಗ್ವಾದ ಸರ್ಕಾರದ ವಿರುದ್ಧ ಘೋಷಣೆಗಳು […]

ಯುದ್ಧ ಸ್ಥಿತಿಯ ಸ್ವರೂಪವು ಮೂಲಭೂತ ಬದಲಾವಣೆಗೊಳಪಟ್ಟಿದೆ ಎಂದು ಗುರುತಿಸಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್‍ರಾವ್ ಚೌಧರಿ ಅವರು ಭಾರತದ ಭದ್ರತಾ ಕ್ರಿಯಾತ್ಮಕತೆ ಬಹುಮುಖಿ ಬೆದರಿಕೆಗಳು ಮತ್ತು ಸವಾಲುಗಳನ್ನು ಒಳಗೊಂಡಿದ್ದು ಬಹುಕ್ಷೇತ್ರೀಯ ಸಾಮಥ್ರ್ಯಗಳನ್ನು ನಿರ್ಮಿಸುವ ಅಗತ್ಯವಿದೆ ಎಂದ ಹೇಳಿದ್ದಾರೆ.ಇಲ್ಲಿನ ದುಂಡ್‍ಗಲ್ ಸಮೀಪ ವಾಯುಪಡೆ ಅಕಾಡೆಮಿಯಲ್ಲಿ ನಿರ್ಗಮಿತ ಸಂಯುಕ್ತ ಪದವೀಧರರ ಪಥಸಂಚಲನದಲ್ಲಿ ಭಾಷಣ ಮಾಡಿದ ಚೌಧರಿ ಅವರು ಭಾರತೀಯ ವಾಯುಪಡೆಯು ಪರಿವರ್ತನೆಯ ಶೃಂಗದಲ್ಲಿದ್ದು ರಫೇಲ್ ಯುದ್ದ ವಿಮಾನಗಳು, ಅಪಾಚೆ […]

ಹುಡುಗಿಯರಿಗೆ ಮದುವೆಯಾಗಲು ಕನಿಷ್ಠ ವಯೋಮಾನದ ಅರ್ಹತೆಯನ್ನು 21 ವರ್ಷಕ್ಕೇರಿಸಲು ಕೇಂದ್ರ ಸಂಪುಟ ಅಸ್ತು ಎಂದಿರುವ ಬೆನ್ನಿಗೇ ಈ ವಿಚಾರವಾಗಿ ದೇಶಾದ್ಯಂತ ಪರ-ವಿರೋಧಗಳ ಚರ್ಚೆಗಳು ಕೇಳಿ ಬರುತ್ತಿವೆ.ಕೇಂದ್ರದ ನಡೆಯನ್ನು ವಿರೋಧಿಸಿರುವ ಸಮಾಜವಾದಿ ಪಾರ್ಟಿಯ ಸಂಸದ ಎಸ್‌.ಟಿ.ಹಸನ್, ಹುಡುಗಿಯರು 16ನೇ ವಯಸ್ಸಿಗೆ ಮದುವೆಯಾಗುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.ಹುಡುಗಿಯರು ಫಲವತ್ತತೆಯ ವಯಸ್ಸಿಗೆ ಬಂದ ಕೂಡಲೇ ಮದುವೆಯಾಗಬೇಕು. ಪ್ರೌಢ ಹುಡುಗಿಯೊಬ್ಬಳು 16ನೇ ವಯಸ್ಸಿಗೆ ಮದುವೆಯಾಗುವುದು ತಪ್ಪೇನಿಲ್ಲ. ಹುಡುಗಿಯೊಬ್ಬಳು 18ನೇ ವಯಸ್ಸಿಗೆ ಮತದಾನ ಮಾಡಬಹುದಾದರೆ ಮದುವೆ ಏಕಾಗಬಾರದು? ಎಂದು […]

ಕರ್ನಾಟಕ- ಮಹಾರಾಷ್ಟ್ರದ ನಡುವೆ ಸಂಘರ್ಷ ಮಾಡುವ ಸಂಚು ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಸಂಘರ್ಷ ಮಾಡುವ ಉದ್ದೇಶದಿಂದ, ಅರಾಜಕತೆವಾದಿಗಳು ಸೃಷ್ಟಿ ಮಾಡಿರುವ ಸಾಧ್ಯತೆಯಿದೆ. ಅರಾಜಕತವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.ಸುದ್ದಿಗಾರರೊದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.ಕೆಲವರು ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟರು, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? […]

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ, ಈ ಪಕ್ಷ ಆಧುನಿಕ ಈಸ್ಟ್ ಇಂಡಿಯಾ ಕಂಪನಿ ಎಂದು ಆರೋಪಿಸಿದ್ದಾರೆ.ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿನ ಸಂಪತ್ತನ್ನು ಲೂಟಿ ಮಾಡುವ ಸಂಚು ಮಾಡಿದೆ.ಅಷ್ಟೇ ಅಲ್ಲ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ ಹಸುವಿನ ಹಾಲು ಕರೆಯುವುದು ಹೇಗೆಂಬುದು ಕೂಡಾ ತಿಳಿದಿಲ್ಲ ಎಂದು ಚನ್ನಿ ಟೀಕಿಸಿದ್ದಾರೆ.ಪಂಜಾಬ್ ನಲ್ಲಿ […]

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಬೀಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಯಲ್ಲಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ ಎಂದು ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಸಿಎಂ ಬಸವರಾಜಬೊಮ್ಮಾಯಿ […]

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರು ಕರ್ನಾಟಕ ನಾಡ ಧ್ವಜವನ್ನು ಸುಟ್ಟು ಹಾಕಿದ್ದು ವಿರೋಧಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಸೇನೆ ಕಾರ್ಯಕರ್ತರು ಚಿಂಚೋಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು .ತಾಲ್ಲೂಕು ಅಧ್ಯಕ್ಷ ಮಜರ್ ಸೌದಾಗರ ಮಾತನಾಡಿ ಯಾವುದೇ ನಾಡಿನ ಧ್ವಜ ಸುಡುವುದು ಕಾನೂನು ಬಾಹಿರವಾಗಿದೆ ಅಲ್ಲದೆ ಬೆಳಗಾವಿ ಜಿಲ್ಲೆಯು ಕರ್ನಾಟಕ ಕರ್ನಾಟಕದ್ದು ನಾಡ ಧ್ವಜ ಸುಟ್ಟುಹಾಕಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ […]

ಕೋಲಾರ ಜಿಲ್ಲೆಯಲ್ಲಿ ಹಣದ ರಾಜಕಾರಣ ಮಾಡುವ ಮೂಲಕ ರಾಜಕೀಯ ಪಾವಿತ್ರ್ಯತೆಯನನು ಹಾಳು ಮಾಡಿದ್ದೇ ಕೊತ್ತೂರು ಮಂಜುನಾಥ್ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಕಿಡಿಕಾರಿದ್ದಾರೆ.ಅವರು ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಷ್ಟು ದಿನ ಕೊತ್ತೂರು ಮಂಜುನಾಥ್ ಎಲ್ಲಿದ್ರು..? ಈಗ ದಿಢೀರ್ ಅಂತ ಬಂದು ಕೋಲಾರ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಾನೇ ಅಂತ ಹೇಳಿಕೆ ನೀಡಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಕೋಲಾರ ಕ್ಷೇತ್ರದ ಭವಿಷ್ಯ ನೆನೆದು ಆತಂಕ […]

ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ರೂ ನಿಮಗೆ ಏನೂ ಅನ್ನಿಸ್ತಿಲ್ವಾ ಎಂದು ಸಿಟಿ ರವಿ, ಶಶಿಕಲಾ ಜೊಲ್ಲೆ ವಿರುದ್ಧ ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ….ನಮ್ಮದು ಕನ್ನಡ ಪರ ಸರ್ಕಾರವ ಅನ್ನೊ ಅನುಮಾನ ಬರ್ತಿದೆ.ನಮ್ಮ ಕನ್ನಡ ಸಂಘಟನೆಗಳ ಕಾರ್ಯಕರ್ತರ ಮೇಲೆ 307 ಕೇಸ್ ಹಾಕಿದ್ದೀರಾ..25 ಎಂಪಿಗಳಿದ್ದೀರಿ ..ಏನ್ ಮಾಡ್ತಿದ್ದೀರಿ..ಬಿಜೆಪಿ ಸರ್ಕಾರ ಕನ್ನಡಿಗರ ಪರ ಇಲ್ಲದೇ ಎಂಇಎಸ್ ಪರ ಇದ್ದಂತೆ ಇದೆ..ಎಂಇಎಸ್ ನಮ್ಮ ಸರ್ಕಾರದ ಶವ ಯಾತ್ರೆ ಮಾಡಿದ್ರೂ ನಿಮಗೆ ಏನೂ ಅನ್ನಿಸ್ತಿಲ್ವಾ..ಬೆಂಗಳೂರಿನ […]

Advertisement

Wordpress Social Share Plugin powered by Ultimatelysocial