ರಾಜ್ಯದ ಪೊಲೀಸ್‌ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡಿ, ಗಡಿ ದಾಟಿಸಿದ್ದಾರೆ.ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಘಟನೆ ನಡೆದಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು, ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿದ್ದರು.ಅವರಿದ್ದ ವಾಹನಕ್ಕೆ ಅಲ್ಲಿನ ಪೊಲೀಸರು ಭದ್ರತೆ ನೀಡಿದ್ದಾರೆ.ಬೆಂಗಳೂರರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ್ದನ್ನು ಖಂಡಿಸಿ ಶಿವಸೇನಾ ಕಾರ್ಯಕರ್ತರು, ಕರ್ನಾಟಕದ ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಾಹನಕ್ಕೆ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ಪಟ್ಟಣ ಪಂಚಾಯತಿ ಕಛೇರಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಸಮೀಕ್ಷೆ ಶಿಬಿರಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಸಮೀಕ್ಷೆಯ ಜಿಲ್ಲಾ ಸಂಚಾಲಕ ಚೆನ್ನರಾಯಪ್ಪ  ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಕೆಲಸ ಮಾಡುತ್ತಿದ್ದರೇ, ಅಂತಹ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ಬಂದು ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.ಬಳಿಕ ತಾಲೂಕು ಸಂಚಾಲಕಿ ಅಮರಾವತಿ ಮಾತನಾಡಿ, ಒಳಚರಂಡಿ/ಮಲವಿಸರ್ಜನೆ(ಪಿಟ್‌ಗಳಲ್ಲಿ) ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳು ಇಳಿಯಬಾರದು ಎಂಬ ಕಾನೂನಿದೆ. ಆದರೂ ಇನ್ನೂ ಕೆಲವೆಡೆ ಈ ಪದ್ದತಿ ಮುಂದುವರಿಯುತ್ತಿದೆ. ಈ […]

ಚಿಕ್ಕೋಡಿ ಜಿಲ್ಲಾ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ, ಇದೂವರೆಗೆ ಯಾರೊಬ್ಬ ಜನಪ್ರತಿನಿಧಿಯು ಇತ್ತಕಡೆಗೆ ಹಾದಿಲ್ಲ, ರೊಚ್ಚಿಗೆದ್ದ ಹೋರಾಟಗಾರರು ಚಿಕ್ಕೋಡಿ ಉಪವಿಭಾಗದ ಸಂಸಧ-ಶಾಸಕರ ಭಾವಚಿತ್ರಗಳನ್ನು ಧಹನ ಮಾಡಿ ಅಕ್ರೋಶ ವ್ಯಕ್ತ ಪಡಿಸಿದರು, ಈ ಸಂಧರ್ಭದಲ್ಲಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಕಾಶೀನಾಥ ಕುರಣಿ ಮಾತನಾಡಿ, ಎಷ್ಟೊಂದು ದುರ್ದೈವ ನೋಡಿ, ಆರೋಗ್ಯ ಸಚಿವರು ಕಾರಿನಿಂದ ಕೆಳಗಿಳಿಯಲಿಲ್ಲ, ಈ ಸಚಿವರ ಕಾರಿನಲ್ಲಿ ನಮ್ಮ ಭಾಗದ ಶಾಸಕ ಗಣೇಶ ಹುಕ್ಕೇರಿ ಇವರೂ ಸಹ ಇದ್ದರು, […]

ಕೊಳ್ಳೇಗಾಲದಲ್ಲಿ ಗ್ಯಾಸ್ಸ್ ‌ ಸಿಲಿಂಡರ್ ಸ್ಪೋಟಗೊಂಡು ಒಂದೇ ಸೂರಿನ ಎರಡು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಸತ್ತೇಗಾಲ ಗ್ರಾಮದಲ್ಲಿ ನಡೆದಿದೆ…ತಾಲ್ಲೂಕಿನ ಸತ್ತೇಗಾಲ ಗ್ರಾಮದ ಪರಿಶಿಷ್ಟ ಸಮುದಾಯದ ಕೋಟೆ ಬೀದಿಯ. ಚಿಕ್ಕರಾವಳಯ್ಯ ಹಾಗೂ ಮಂಜು ಎಂಬುವರ ಮನೆಯು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ…ಬೆಂಕಿ ಕಾಣಿಸಿಕೊಂಡ ವೇಳೆ ಅಪಾಯ ಅರಿತ ಎರಡು ಮನೆಯ ಮಂದಿ ಹೊರಕ್ಕೆ ಧಾವಿಸಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಿಲಿಂಡರ್ ಸ್ಫೋಟದ ತೀವ್ರತೆ ಮನೆ ಯ ಮೇಲ್ಚಾವಣಿ ಹಾರಿಹೋಗಿದೆ. […]

ವಿದ್ಯಾರ್ಥಿಗಳಿಂದ ಮೊಬೈಲ್ ದುರ್ಬಳಕೆ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ದಂಡ ವಸೂಲಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ…ಮೊಬೈಲ್ ಬಳಕೆ ಮಾಡಬಾರದಂತೆ ಕಾಲೇಜ್ ನೋಟಿಸ್ ಬೋರ್ಡಗೆ ಹಾಕಿದ್ದರು ಸಹ ವಿದ್ಯಾರ್ಥಿಗಳು ಮೊಬೈಲ್‌ ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಪ್ರಾಂಶುಪಾಲರು ದಂಡ ವಿಧಿಸಿದ್ದಾರೆ…ಬೋಧನಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಂದ ಟಿಕ್ ಟ್ಯಾಕ್ ವಿಡಿಯೋ. ಸೆಲ್ಫಿ. ಚಲನಚಿತ್ರ ವೀಕ್ಷಣೆ ಈ ರೀತಿಯಾಗಿ ದುರ್ಬಳಕೆ ಮಾಡುತ್ತಿದ್ದು,ಮೊಬೈಲ್ ದುರ್ಬಳಕೆ ಮಾಡುತ್ತಿದ್ದ ವಿದ್ಯಾರ್ಥಿಗಳಿಂದ 500 ದಂಡವನ್ನು […]

ಎಂಇಎಸ್ ಪುಂಡರ ದರ್ಪಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಅದರಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು.ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಟ ದರ್ಶನ್ […]

ಬೀದರ್ : ಬೆಳಗಾವಿ ನಗರದಲ್ಲಿ ಕೆಲ ಪುಂಡರು ಪುಂಡಾಟಿಕೆ ನಡೆಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಮೂರ್ತಿಯನ್ನು ವಿರೂಪಗೊಳಿಸಿದ್ದಾರೆ ಹಾಗೂ ಸರ್ಕಾರಿ ವಾಹನಗಳು ಸೇರಿದಂತೆ ಅನೇಕ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಂಥ ಪುಂಡರ ವಿರುದ್ಧ ಮುಖ್ಯಮಂತ್ರಿಗಳು ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.ಖಾಶೆಂಪುರ್ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ […]

ಕೈಸಾಲಕ್ಕೆ ಹೆದರಿ ಕಾಂಡಿಮೆಂಟ್ಸ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಳಾಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಕಾಲೋನಿಯ ಎಸ್ ವಿಎಸ್ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್ 55 ವರ್ಷದ ವ್ಯಕ್ತಿಯೇ ಮೃತಪಟ್ಟ ದುರ್ದೈವಿ.ಇರಕಸಂದ್ರ ಕಾಲೋನಿಯ ಬಸ್ ನಿಲ್ದಾಣದಲ್ಲಿ ಕಾಂಡಿಮೆಂಟ್ಸ್ ಅಂಗಡಿಯ ವ್ಯಾಪಾರದಲ್ಲಿ ಕುಂಠಿತಗೊಂಡ ಹಿನ್ನೆಲೆಯಲ್ಲಿ ಕೈಸಾಲ ಮಾಡಿಕೊಂಡು ಕಳೆದ ಒಂದು ತಿಂಗಳಿಂದ ಅಂಗಡಿಯನ್ನ ಬಾಗಿಲು ಹಾಕಿದ್ದಾನೆ ಎಂದು ತಿಳಿದು ಬಂದಿದೆ.ಸಾಲ ತಿರಿಸಲು ಸಾಧ್ಯವಾಗದೇ […]

ಕೊರಟಗೆರೆ :- ಬೆಳಗಾವಿಯಲ್ಲಿ ಇತ್ತೀಚೆಗೆ ಎಂ.ಇ.ಎಸ್ ಪುಂಡರು ಕನ್ನಡ ಬಾವುಟವನ್ನು ಸುಟ್ಟು ಹಾಕುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕೂಡಲೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೆಯೇ ಬಂಧಿಸಿರುವ ಕನ್ನಡಿಗರನ್ನು ಕೂಡಲೇ ಬಿಡುಗಡೆಗೊಳಿಸಬೇಕಾಗಿ ಕೊರಟಗೆರೆಯ ಕನ್ನಡಪರ ಸಂಘಟನೆಗಳು ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು .ಕನ್ನಡಿಗರು ಮೌನವಾಗಿದ್ದರೆ ಎಂದರೆ ಶಾಂತ ರೀತಿಯಿಂದ ವರ್ತಿಸುವುದು ಕನ್ನಡಿಗರ ಹುಟ್ಟುಗುಣ ಅದನ್ನು ಎಮ್. ಇ.ಎಸ್ ಪುಂಡರು ಇನ್ನಿತರೆ ನಾಡ […]

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಅದರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಎಂಇಎಸ್ ನವರು ನಡೆಸಿದ ಗಲಾಟಗೆ ಈಗಾಗಲೇ ಪೊಲೀಸರು ಎಲ್ಲಾ ಕಾನೂನು ಕ್ರಮ ಕೈಗೊಂಡಿದ್ದಾರೆ. ಎಂಇಎಸ್ ಬಗ್ಗೆ ಕಠಿಣ ನಿಲುವು ತೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ಮಹಾರಾಷ್ಟ್ರ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಇಂದು ಚರ್ಚೆ ನಡೆಯಲಿದೆ. ಡಿಜಿ, ಹೋಂ ಕಾರ್ಯದರ್ಶಿ […]

Advertisement

Wordpress Social Share Plugin powered by Ultimatelysocial