ಎಂಇಎಸ್ ಪುಂಡಾಟಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ:ಮುಖ್ಯಮಂತ್ರಿ ಬೊಮ್ಮಾಯಿ‌

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಅದರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಎಂಇಎಸ್ ನವರು ನಡೆಸಿದ ಗಲಾಟಗೆ ಈಗಾಗಲೇ ಪೊಲೀಸರು ಎಲ್ಲಾ ಕಾನೂನು ಕ್ರಮ ಕೈಗೊಂಡಿದ್ದಾರೆ. ಎಂಇಎಸ್ ಬಗ್ಗೆ ಕಠಿಣ ನಿಲುವು ತೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ಮಹಾರಾಷ್ಟ್ರ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಇಂದು ಚರ್ಚೆ ನಡೆಯಲಿದೆ. ಡಿಜಿ, ಹೋಂ ಕಾರ್ಯದರ್ಶಿ ಮಾತುಕತೆ ನಡೆಸಲಿದ್ದಾರೆ. ಅವಶ್ಯಕತೆ ಬಿದ್ದರೆ ನಾನು‌ ಮಹಾರಾಷ್ಟ್ರದ ಜತೆಗೆ ಮಾತನಾಡುತ್ತೇನೆ ಎಂದರು.
ಬೆಳಗಾವಿ ಘಟನೆಯಲ್ಲಿ ಪೊಲೀಸ್ ವೈಫಲ್ಯದ ಪ್ರಶ್ನೆ ಇಲ್ಲ.ರಾತ್ರಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ. ರಾತ್ರಿ ಬಂದು ಗಲಾಟೆ ಮಾಡಿದ್ದು ಪುರುಷಾರ್ಥನಾ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗೃಹ ಸಚಿವರಿಗೆ ಗಲಾಟೆ ಬಗ್ಗೆ ಈ ತನಿಖೆ ಪ್ರಗತಿ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇನೆ ಎಂದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಧ್ವಜವನ್ನು ಸುಟ್ಟ ಎಂಇಎಸ್ ಪುಂಡರನ್ನು ಬಂಧಿಸುವಂತೆ ಕೊರಟಗೆರೆಯಲ್ಲಿ ಕನ್ನಡಪರ ಸಂಘಟನೆಗಳ ಒತ್ತಾಯ

Sat Dec 18 , 2021
ಕೊರಟಗೆರೆ :- ಬೆಳಗಾವಿಯಲ್ಲಿ ಇತ್ತೀಚೆಗೆ ಎಂ.ಇ.ಎಸ್ ಪುಂಡರು ಕನ್ನಡ ಬಾವುಟವನ್ನು ಸುಟ್ಟು ಹಾಕುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕೂಡಲೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೆಯೇ ಬಂಧಿಸಿರುವ ಕನ್ನಡಿಗರನ್ನು ಕೂಡಲೇ ಬಿಡುಗಡೆಗೊಳಿಸಬೇಕಾಗಿ ಕೊರಟಗೆರೆಯ ಕನ್ನಡಪರ ಸಂಘಟನೆಗಳು ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು .ಕನ್ನಡಿಗರು ಮೌನವಾಗಿದ್ದರೆ ಎಂದರೆ ಶಾಂತ ರೀತಿಯಿಂದ ವರ್ತಿಸುವುದು ಕನ್ನಡಿಗರ ಹುಟ್ಟುಗುಣ ಅದನ್ನು ಎಮ್. ಇ.ಎಸ್ ಪುಂಡರು ಇನ್ನಿತರೆ ನಾಡ […]

Advertisement

Wordpress Social Share Plugin powered by Ultimatelysocial