ಅಗತ್ಯವಿದ್ದರೆ ಭಾರತಕ್ಕೆ ಹೆಚ್ಚುವರಿ ರಫೇಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ತಮ್ಮ ದೇಶ ಸಿದ್ಧವಿದೆ ಎಂದು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಹೇಳಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಅಧ್ಯಕ್ಷ ಮತ್ತು ಫ್ರಾನ್ಸ್‌ನ ಭಾರತದ ಮಾಜಿ ರಾಯಭಾರಿ ಡಾ.ಮೋಹನ್ ಕುಮಾರ್ ಅವರೊಂದಿಗೆ ಸಂವಾದದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.ಮೇಕ್ – ಇನ್ ಇಂಡಿಯಾ ಹಲವಾರು ವರ್ಷಗಳಿಂದ ಫ್ರೆಂಚ್ ಉದ್ಯಮಕ್ಕೆ ವಿಶೇಷವಾಗಿ ಜಲಾಂತರ್ಗಾಮಿ ನೌಕೆಗಳಂತಹ ರಕ್ಷಣಾ ಸಾಧನಗಳಿಗೆ […]

ಯುದ್ಧ ಸ್ಥಿತಿಯ ಸ್ವರೂಪವು ಮೂಲಭೂತ ಬದಲಾವಣೆಗೊಳಪಟ್ಟಿದೆ ಎಂದು ಗುರುತಿಸಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್‍ರಾವ್ ಚೌಧರಿ ಅವರು ಭಾರತದ ಭದ್ರತಾ ಕ್ರಿಯಾತ್ಮಕತೆ ಬಹುಮುಖಿ ಬೆದರಿಕೆಗಳು ಮತ್ತು ಸವಾಲುಗಳನ್ನು ಒಳಗೊಂಡಿದ್ದು ಬಹುಕ್ಷೇತ್ರೀಯ ಸಾಮಥ್ರ್ಯಗಳನ್ನು ನಿರ್ಮಿಸುವ ಅಗತ್ಯವಿದೆ ಎಂದ ಹೇಳಿದ್ದಾರೆ.ಇಲ್ಲಿನ ದುಂಡ್‍ಗಲ್ ಸಮೀಪ ವಾಯುಪಡೆ ಅಕಾಡೆಮಿಯಲ್ಲಿ ನಿರ್ಗಮಿತ ಸಂಯುಕ್ತ ಪದವೀಧರರ ಪಥಸಂಚಲನದಲ್ಲಿ ಭಾಷಣ ಮಾಡಿದ ಚೌಧರಿ ಅವರು ಭಾರತೀಯ ವಾಯುಪಡೆಯು ಪರಿವರ್ತನೆಯ ಶೃಂಗದಲ್ಲಿದ್ದು ರಫೇಲ್ ಯುದ್ದ ವಿಮಾನಗಳು, ಅಪಾಚೆ […]

ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಂಭೀರ ಗಾಯಾಳುವಾಗಿ, ಡಿ.15ರಂದು ಕೊನೆಯುಸಿರೆಳೆದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಕಲ ಸರಕಾರಿ ಹಾಗೂ ಸೇನಾ ಗೌರವಗಳೊಂದಿಗೆ ನಡೆಸಲಾಯಿತು.ಅಂತ್ಯಕ್ರಿಯೆಗೂ ಮೊದಲು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ಸೇರಿ ಅನೇಕ ಹಿರಿಯ ನಾಯಕರು ಮತ್ತು ಸೇನಾ ಅಧಿಕಾರಿಗಳು ಕ್ಯಾ| ವರುಣ್‌ ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಅಗಿರುವ ವರುಣ್‌ ಸಿಂಗ್‌ […]

ತಮಿಳುನಾಡು ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಮತ್ತು ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ಭೋಪಾಲ್‌ನಲ್ಲಿ ನಡೆಯಲಿದೆ.ಬೆಳಗ್ಗೆ 11 ಗಂಟೆ ಸುಮಾರಿಗೆ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ.ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ರಾಜ್ಯ ಮತ್ತು ಮಿಲಿಟರಿ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಗುರುವಾರ ಮುಂಜಾನೆ, ಸಿಂಗ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿAದ ಭೋಪಾಲ್ ವಿಮಾನ […]

CDS ಚಾಪರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಐಎಎಫ್ ಕಮಾಂಡ್ ಆಸ್ಪತ್ರೆಯಲ್ಲಿ ವಿಧಿವಶರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥೀವ ಶರೀರವನ್ನು ಅಂತಿಮ ಗೌರವಗಳಿಗಾಗಿ ಇದೀಗ ಯಲಹಂಕ ಏರ್ ಫೋರ್ಸ್ ಸ್ಟೇಷನ್ ಆವರಣದಲ್ಲಿ ಕರೆತರಲಾಗುತ್ತಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಸರ್ಕಾರದ ಪರವಾಗಿ ವ್ರೀತ್ ಮೂಲಕ ಗೌರವ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.

ವಿಜಯ ದಿವಸ್‌ ಕಾರ್ಯಕ್ರಮದಹಿನ್ನೆಲೆ  ಬೆಳಗಾವಿಯ ಎಂಎಲ ಐ ಆರ್ ಸಿ ವಿಜಯ ದಿವಸ ಕಾರ್ಯಕ್ರಮ ದಲ್ಲಿ  ಮಾತನಾಡಿದ ಅವರು,ವಿಜಯ ದಿವಸ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶವನ್ನ ಸಿಎಂ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. ನಾನು ಅತ್ಯಂತ ಹೆಮ್ಮೆ ಮತ್ತು ಸಂತೋಷದಿಂದ ಪಾಲ್ಗೊಂಡಿದ್ದೇನೆ.ಸೈನ್ಯ ಬರಿ ದೇಶದ ಸಂರಕ್ಷಣೆ ಮಾಡುತ್ತಿಲ್ಲ,ಆಂತರಿಕ ಭದ್ರತೆಯನ್ನ ಸಮರ್ಥ ವಾಗಿ ಮಾಡುತ್ತಿದೆ.ಇಂಡೋ ಪಾಕ್ ಯುದ್ಧದಲ್ಲಿ ನಮ್ಮ ಸೈನಿಕರು ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ.3 ಸಾವಿರಕ್ಕೂ ಅಧಿಕ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ.9 ಸಾವಿರಕ್ಕೂ […]

Advertisement

Wordpress Social Share Plugin powered by Ultimatelysocial