ನವದೆಹಲಿ: ಆಯಮ್‌ವೇ, ಟಪ್ಪರ್‌ವೇರ್ ಹಾಗೂ ಓರಿಫ್ಲೇಮ್‌ ರೀತಿಯ ನೇರ ಮಾರಾಟ ಕಂಪನಿಗಳು ಪಿರಮಿಡ್ ಸ್ಕೀಂಗಳಿಗೆ ಅಥವಾ ಹಣ ಚಲಾವಣೆಯ ಸ್ಕೀಂಗಳ ಪ್ರಚಾರ ಮಾಡುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಕಂಪನಿಗಳು 90 ದಿನಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಉತ್ಪನ್ನಗಳ ನೇರ ಮಾರಾಟ ಅಥವಾ ಸೇವೆಗಳಿಂದ ಎದುರಾಗುವ ಕುಂದು ಕೊರತೆಗಳಿಗೆ (ಅಹವಾಲು) ಕಂಪನಿಗಳು ಹೊಣೆಗಾರರಾಗಿರುತ್ತಾರೆ. ಗ್ರಾಹಕ ಸಂರಕ್ಷಣಾ (ನೇರ ಮಾರಾಟ) ನಿಯಮಗಳು, […]

ಕೊಲ್ಹಾಪುರ (ಮಹಾರಾಷ್ಟ್ರ): ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ಜಲಾಶಯ ಗೇಟ್ ರಿಪೇರಿ ವೇಳೆ ಅವಘಡ ಸಂಭವಿಸಿದ್ದು, ತಾಂತ್ರಿಕ ದೋಷದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದುಬಂದಿದೆ. ಸುಮಾರು 18 ಅಡಿಗಳಷ್ಟು ಗೇಟ್ ಎತ್ತರಿಸಿ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ, ಅಧಿಕಾರಿಗಳ ಎಡವಟ್ಟಿನಿಂದ ನದಿ ತೀರದ ಜನರು ಕಂಗೆಟ್ಟು ಹೋಗಿದ್ದು, ಇಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ವೇದಗಂಗಾ ನದಿ ತೀರದ […]

ಎಸ್​ಡಿಪಿಐ ಕಾರ್ಯಕರ್ತರಿಗೆ ಆರ್​ಎಸ್​ಎಸ್​ ಕಾರ್ಯಕರ್ತರ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಕೇರಳದ ಪೊಲೀಸ್​ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.‌ ಕರಿಮನ್ನೂರು ಪೊಲೀಸ್​ ಠಾಣೆಯ ಸಿಪಿಓ ಪಿಕೆ ಅನಸ್​ರನ್ನು ಆಂತರಿಕ ತನಿಖೆಗೆ ಒಳಪಡಿಸಿದ ಪೊಲೀಸರು ಪ್ರೈವೇಟ್​ ಚಾಟ್​ ಗ್ರೂಪ್​ಗಳಿಗೆ ಪೊಲೀಸ್​ ಡೇಟಾ ಬೇಸ್​ನಲ್ಲಿದ್ದ ಮಾಹಿತಿಗಳನ್ನು ಸೋರಿಕೆ ಮಾಡಿರೋದು ಸಾಬೀತಾದ ಹಿನ್ನೆಲೆಯಲ್ಲಿ ಅನಸ್​​ರನ್ನು ಅಮಾನತುಗೊಳಿಸಲಾಗಿದೆ. ಸಿಪಿಓ ಅನಸ್​​ರನ್ನು ಇಡುಕ್ಕಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇದು ದೀರ್ಘ ತನಿಖೆಯ ಬಳಿಕ ಅಮಾನತುಗೊಳಿಸಿ ಆದೇಶ ನೀಡಲಾಗಿದೆ. […]

ಚಿತ್ತಾಪುರ: ‘ಕಾನೂನು ಬಾಹಿರ ಚಟುವಟಿಕೆ ಮತ್ತು ಅಪರಾಧ ಕೃತ್ಯ ಎಸಗುವವರೊಂದಿಗೆ ಸಂಪರ್ಕ ಇರುವ ಪೊಲೀಸ್ ಸಿಬ್ಬಂದಿ ವಿರುದ್ದ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದರು. ತಾಲ್ಲೂಕಿನ ದಂಡೋತಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ‘‍ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಹಿನ್ನೆಯಲ್ಲಿರುವ ಹಾಗೂ ಕಾನೂನು ಬಾಹಿರ ಚಟುವಟಿಕೆ ಮತ್ತು ಕೃತ್ಯ ಎಸಗುವವರೊಂದಿಗೆ ಐದಾರು ಜನ ಪೊಲೀಸ್ ಸಿಬ್ಬಂದಿ […]

ಬೆಂಗಳೂರು: ನಗರದ ಮಾಜಿ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಭಾಸ್ಕರ್ ರಾವ್  ಅವರು ಸ್ವಯಂ ನಿವೃತ್ತಿಗಾಗಿ ಅರ್ಜಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಐಪಿಎಸ್ ಅಧಿಕಾರಿಗ ಭಾಸ್ಕರ್ ರಾವ್ ಅವರು ಸಲ್ಲಿಸಿದ್ದಂತ ಸ್ವಯಂ ನಿವೃತ್ತಿಯ ಅರ್ಜಿಗೆ ರಾಜ್ಯ ಸರ್ಕಾರ  ಅನುಮೋದನೆ ಸೂಚಿಸಿದೆ ಎಂಬುದಾಗಿ ತಿಳಿದು ಬಂದಿದೆ. ಸ್ವಯಂ ನಿವೃತ್ತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದ ಕಾರಣ, ಭಾಸ್ಕರ್ ರಾವ್ ಅವರು ಡಿಸೆಂಬರ್ 31ರಂದು ಸ್ವಯಂ ನಿವೃತ್ತಿಯಾಗಲಿದ್ದಾರೆ. 2019-20ರ ಅವಧಿಯಲ್ಲಿ […]

  ಬೆಂಡೆಕಾಯಿಯಲ್ಲಿ ಸಾಕಷ್ಟು ಔಷಧಿ ಗುಣಗಳಿವೆ ಎಂಬುದನ್ನು ಈಗಾಗ್ಲೇ ನಾವು ನಿಮಗೆ ಹೇಳಿದ್ದೇವೆ. ಆರೋಗ್ಯ ವೃದ್ಧಿಗೆ ಬೆಂಡೆಕಾಯಿ ಸೇವನೆ ಒಳ್ಳೆಯದು. ಹಾಗೆ ಬೆಂಡೆಕಾಯಿಯನ್ನು ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ. ತುಂಬಾ ಸಮಯ ಬಿಸಿಲಿನಲ್ಲಿದ್ದಾಗ ನಮ್ಮ ಚರ್ಮ ಕಪ್ಪಾಗುತ್ತದೆ. ಇದರಿಂದ ನೆಮ್ಮದಿ ಪಡೆಯಬೇಕೆಂದಾದಲ್ಲಿ ಬೆಂಡೆಕಾಯಿ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಬೆಂಡೆಕಾಯಿ ಒಳ್ಳೆಯ ಸ್ಕಿನ್ ಮಾಯಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಮುಖದ ಸುಕ್ಕುಗಳನ್ನು ತೊಡೆದು ಹಾಕುವ ಗುಣ ಇದರಲ್ಲಿದೆ. ಬೆಂಡೆಕಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ […]

ಅಮರಾವತಿ: ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ 70 ರೂಪಾಯಿಗೆ ಮದ್ಯ ಕೊಡಲಾಗುತ್ತದೆ. ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅದರಲ್ಲಿಯೂ ಲಾಭ ಬಂದರೆ ಕೇವಲ 50 ರೂಪಾಯಿ ಕೊಡುತ್ತೇವೆ ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಹೇಳಿಕೆ ನೀಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇತ್ತೀಚಿನ […]

ಉದ್ಯೋಗಿಗಳ ರಾಜ್ಯ ವಿಮಾ ನಿಗಮವು ಉನ್ನತ ವಿಭಾಗದ ಕ್ಲರ್ಕ್​(ಯುಡಿಸಿ), ಸ್ಟೆನೋಗ್ರಾಫರ್​(ಸ್ಟೆನೋ) ಹಾಗೂ ಮಲ್ಟಿ ಟಾಸ್ಕಿಂಗ್​ ಸ್ಟಾಫ್​( ಎಂಟಿಎಸ್​) ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಇಎಸ್​ಐಸಿ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾದ ಅಧಿಸೂಚನೆಯ ಪ್ರಕಾರ ವಿವಿಧ ವಿಭಾಗಗಳಲ್ಲಿ ಒಟ್ಟು 3800 ಹುದ್ದೆಗಳು ಖಾಲಿ ಇದೆ ಎಂದು ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಅಧಿಕೃತ ವೆಬ್​ಸೈಟ್ https://www.esic.nic.in ಗೆ ಭೇಟಿ ನೀಡಬಹುದಾಗಿದೆ. ಇಎಸ್​ಐಸಿ ನೇಮಕಾತಿ : ಖಾಲಿ ಇರುವ […]

ರಾಜಾವರ್‌ (ಬಿಹಾರ): ಏಕಾಏಕಿಯಾಗಿ ಮನೆಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಒಂದೇ ಕುಟುಂಬ ಐದು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ್​ ಗ್ರಾಮದಲ್ಲಿ ನಡೆದಿದೆ. ಅಡುಗೆ ಸಿಲಿಂಡರ್‌ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ ಇದಕ್ಕೆ ನಿಖರ ಕಾರಣ ತಿಳಿದುಬಂದಿದೆ. ಸ್ಥಳದಲ್ಲಿ ಸಿಲಿಂಡರ್‌ ಸುಟ್ಟುಕರಕಲಾಗಿರುವುದು ಕಂಡುಬಂದಿದೆ. ಆದರೆ ಅದರ ಸ್ಫೋಟದಿಂದಲೇ ಈ ಘಟನೆ ಸಂಭವಿಸಿರುವುದು ಇನ್ನೂ ದೃಢಪಟ್ಟಿಲ್ಲ. ಘಟನೆಯಲ್ಲಿ ಮೃತಪಟ್ಟವರನ್ನು ಅಂಕುಶ್​ ಕುಮಾರ್​ (10), ಶಿವಾನಿ ಕುಮಾರಿ​ (9), […]

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಕಂಪನಿಯ ನಾಯಕತ್ವದಲ್ಲಿ ಬದಲಾವಣೆಗಳು ಆಗುವ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನೂ ಸೇರಿದಂತೆ ಕಂಪನಿಯ ಹಿರಿಯರು ಯುವ ತಲೆಮಾರಿಗೆ ದಾರಿ ಮಾಡಿಕೊಡುವ ಮೂಲಕ ಈ ಬದಲಾವಣೆ ಆಗಬೇಕಿದೆ ಎಂದು ಹೇಳಿದ್ದಾರೆ. ‘ರಿಲಯನ್ಸ್ ಕಂಪನಿಯು ಈಗ ಮಹತ್ವಪೂರ್ಣವಾದ ನಾಯಕತ್ವ ಬದಲಾವಣೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇದೆ’ ಎಂದು ಹೇಳಿದ್ದಾರೆ. ಆಕಾಶ್ ಮತ್ತು ಅನಂತ್ ಅವರು ಅಂಬಾನಿ ಅವರ ಪುತ್ರರು, ಇಶಾ ಅವರು ಅಂಬಾನಿ […]

Advertisement

Wordpress Social Share Plugin powered by Ultimatelysocial