ಹೊಸ ವರ್ಷ ಬರಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಹೊಸ ವರ್ಷಾಚರಣೆಗೆ ಜನ ಪರದಾಡುತ್ತಿದ್ದಾರೆ. ಆದರೆ, ಸಾಮಾನ್ಯವಾಗಿ ಜನರು ಹೊಸ ವರ್ಷದ ಆಚರಣೆಗಳು ಮತ್ತು ಪಾರ್ಟಿಗಳಲ್ಲಿ ಮದ್ಯ ಸೇವಿಸುತ್ತಾರೆ. ಅದರ ನಂತರ ಮದ್ಯದ ಹ್ಯಾಂಗೊವರ್ ಮರುದಿನ ತೊಂದರೆಗೊಳಗಾಗುತ್ತದೆ. ಅತಿಯಾದ ಕುಡಿತವೇ ಹ್ಯಾಂಗೊವರ್‌ಗೆ ಕಾರಣ. ಹ್ಯಾಂಗೊವರ್ ಏಕೆ ಸಂಭವಿಸುತ್ತದೆ ಮತ್ತು ಅದರ ಅನನುಕೂಲಗಳು ಯಾವುವು?. ಅಲ್ಲದೆ, ಹ್ಯಾಂಗೊವರ್ ತೊಡೆದುಹಾಕಲು ಅಥವಾ ಅದನ್ನು ಕಡಿಮೆ ಮಾಡಲು ಯಾವ ಆಹಾರವನ್ನು ಸೇವಿಸಬೇಕು ಇಲ್ಲಿದೆ. […]

ಕೆಎನ್‌ಎನ್ ಡಿಜಿಟಲ್ ಡೆಸ್ಕ್: ಗ್ರೀಸ್ ನ ಕ್ರೀಟ್ ನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಜಿಯೋಡೈನಾಮಿಕ್ ಇನ್ಸ್ಟಿಟ್ಯೂಟ್ ತಿಳಿಸಿದೆ. ಈ ಸದ್ಯಕ್ಕೆ ಯಾವುದೇ ಹಾನಿಯ ವರದಿಯಾಗಿಲ್ಲ. ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮೊಲಾಜಿಕಲ್ ಸೆಂಟರ್ ಈ ಹಿಂದೆ 6.1 ಕ್ಕೆ ಕಂಪನವನ್ನು ದಾಖಲಿಸಿದೆ. ದೇಶದ ಕೆಲವು ನಗರಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಈಜಿಪ್ಟ್ ಅಧಿಕಾರಿಗಳು ವರದಿ ತಿಳಿಸಿದ್ದಾರೆ. ಕ್ರೀಟ್ ನಲ್ಲಿದ್ದ ಜಿಯೋಡೈನಾಮಿಕ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಅಕಿಸ್ ಸೆಲೆಂಟಿಸ್, ಅಧಿಕಾರಿಗಳು […]

ಬೆಳಗಾವಿ: ಡಿಸೆಂಬರ್ 31ರಂದು ಕರ್ನಾಟಕ ಬಂದ್ ಈಗಾಗಲೇ ನಿಗದಿ ಪಡಿಸಲಾಗಿದೆ. ನಿಗದಿಯಂತೆ ಡಿಸೆಂಬರ್ 31ರಂದು ಕರ್ನಾಟಕ ಬಂದ್  ನಡೆಸಲಾಗುತ್ತಿದೆ. ಕನ್ನಡಿಗರೆಲ್ಲರೂ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುವಂತೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕ ಬಂದ್ ನಿಗದಿಯಾಗಿ ಹೋಗಿದೆ. ಅದರಲ್ಲಿ ಬದಲಾವಣೆಯ ಮಾತೇ ಇಲ್ಲ. ಕರ್ನಾಟಕ ಬಂದ್ ಗೆ ಎಲ್ಲರೂ ಕೈಜೋಡಿಸಿ. ಡಿಸೆಂಬರ್ 31ರಂದು ಬೆಳಿಗ್ಗೆ 6 ರಿಂದ […]

ಜೇನುನೊಣಗಳ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಅವು ಗೂಡನ್ನು ಕಟ್ಟುವ ಬಗ್ಗೆ , ಜೇನನ್ನು ತಯಾರಿಸುವ ಬಗ್ಗೆ ಹೀಗೆ ಎಲ್ಲಾ ಮಾಹಿತಿ ನಿಮಗಿದ್ದಿರಬಹುದು. ಆದರೆ ಎಂದಾದರೂ 20 ಸಾವಿರ ಜೇನುನೊಣಗಳು ಒಂದು ಕಾರನ್ನು ಹಿಂಬಾಲಿಸಿದ ಬಗ್ಗೆ ನೀವು ಕೇಳಿದ್ದೀರೇ..? ಕೇಳಿಲ್ಲ ಎಂದಾದರೆ ನೀವು ಈ ವಿಚಿತ್ರ ಸ್ಟೋರಿಯನ್ನು ಓದಲೇಬೇಕು. ಜೇನುಗಳ ಗುಂಪಿನಲ್ಲಿ ರಾಣಿ ಜೇನಿಗೆ ತುಂಬಾನೇ ಮಹತ್ವ ಇರುತ್ತೆ.ಇದೇ ರೀತಿ ಬ್ರಿಟನ್​​ನ ನಗರವೊಂದರಲ್ಲಿ ರಾಣಿ ಜೇನಿನ ಹುಡುಕಾಟದಲ್ಲಿದ್ದ ಜೇನಿನ ಗುಂಪೊಂದು […]

ತಿರುವನಂತಪುರಂ,ಡಿ.29- ತಾಯಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಸಂಬಂಧಿಯೊಬ್ಬನನ್ನು ಆಕೆಯ ಇಬ್ಬರು ಹೆಣ್ಣು ಮಕ್ಕಳು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಬಾವಿಗೆ ಬಿಸಾಡಿ, ಪೊಲೀಸರಿಗೆ ಶರಣಾಗಿರುವ ಘಟನೆ ಕೇರಳದ ಅಂಬಾಲವಯಲ್ ಪ್ರದೇಶದಲ್ಲಿ ನಡೆದಿದೆ. ಮುಹಮ್ಮದ್ ಕೊಯ ಕೊಲೆಯಾದ ವ್ಯಕ್ತಿ. ಮೊಹಮ್ಮದ್ ಕೊಯ ಈ ಇಬ್ಬರು ಹುಡುಗಿಯರ ತಂದೆಯ ಚಿಕ್ಕಮ್ಮನ ಪತಿಯಾಗಿದ್ದು, ಈತ ತನ್ನ ತಾಯಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ಮನವಿ ಮಾಡಿದರೂ ಕೇಳದಿದ್ದಾಗ ಕೊಡಲಿಯಿಂದ ಕೊಲೆ ಮಾಡಿ, ದೇಹವನ್ನು […]

ವಿಜಯವಾಡ: ನಟ ಅಲ್ಲು ಅರ್ಜುನ್​ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪ: ದಿ ರೈಸ್​ ಬಿಡುಗಡೆ ಆದಾಗಿನಿಂದ ಒಂದಲ್ಲ ಒಂದು ವಿವಾದಕ್ಕೀಡಾಗುತ್ತಲೇ ಇದೆ. ಸಮಂತಾ ಸೊಂಟ ಬಳುಕಿಸಿದ್ದ ‘ಊ ಅಂಟಾವಾ ಮಾವ’ ಹಾಡಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಡಬ್ಬಿಂಗ್​ ಭಾಷೆಗಿಂತ ಮೂಲ ಭಾಷೆಯಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದು ಕೂಡ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಡಬ್ಬಿಂಗ್​ ಮಾಡದೇ ಕನ್ನಡಿಗರ ವಿರೋಧ ಕಟ್ಟಿಕೊಂಡಿತ್ತು. ಸಾಕಷ್ಟು […]

ಬೆಂಗಳೂರು : ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ದಿಲ್ಲಿಯಲ್ಲೇ ಈ ಷಡ್ಯಂತ್ರದ ರೂಪುರೇಷೆ ಹೆಣೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ತಮ್ಮ ವಿರುದ್ಧ ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕುಮಾರಸ್ವಾಮಿ ದಿಲ್ಲಿಗೆ ಹೋಗಿ ನನ್ನ ವಿರುದ್ಧ ಏನೇನು ಮಾಡಿದ್ದಾರೆಂಬುದು ಗೊತ್ತಿದೆ. ಎರಡು ಪಕ್ಷದವರು ಸೇರಿ ದಿಲ್ಲಿಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಈ […]

ನವದೆಹಲಿ: 2020-21ನೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್‌) ಆನ್‌ಲೈನ್‌ ದೃಢೀಕರಣ (ಇ-ವೇರಿಫಿಕೇಷನ್‌) ಮಾಡದೇ ಇರುವ ತೆರಿಗೆದಾರರಿಗೆ 2022ರ ಫೆಬ್ರುವರಿ 28ರ ಒಳಗಾಗಿ ಆ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಡಿಜಿಟಲ್‌ ಹಸ್ತಾಕ್ಷರ ಇಲ್ಲದೇ ವಿದ್ಯುನ್ಮಾನ ಮಾರ್ಗದ ಮುಲಕ ಐಟಿಆರ್‌ ಸಲ್ಲಿಸಿದರೆ 120 ದಿನಗಳ ಒಳಗಾಗಿ ಆಧಾರ್ ಒಟಿಪಿ ಅಥವಾ ನೆಟ್‌ ಬ್ಯಾಂಕಿಂಗ್ ಅಥವಾ ಡಿಮ್ಯಾಟ್‌ ಖಾತೆಗೆ ಬರುವ ಕೋಡ್‌ ಬಳಸಿ […]

ನವದೆಹಲಿ : ಒಮಿಕ್ರಾನ್ ಕಳವಳದ ನಡುವೆ ಜನವರಿ 6ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಮತ್ತು ಕುವೈತ್ ಭೇಟಿಯನ್ನು ರದ್ದು ಪಡಿಸಲಾಗಿದೆ. ಸೌತ್ ಬ್ಲಾಕ್ ಮೂಲಗಳ ಪ್ರಕಾರ, ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಭೇಟಿಯನ್ನ ಮರು ನಿಗದಿಪಡಿಸಬೇಕಾಗಿದ್ದು, ಫೆಬ್ರವರಿಯಲ್ಲಿ ನಿಗದಿಯಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್ʼನ ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಉಲ್ಬಣಗೊಳ್ಳುತ್ತಿದ್ದು, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಯುಎಸ್ʼನಲ್ಲಿ, ಒಮಿಕ್ರಾನ್ ಈಗ ಪ್ರಬಲ […]

ರಾಂಚಿ: ಸಹಾಯಧನ ನೀಡುವ ಮೂಲಕ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ ₹25ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಿಸಿದ್ದಾರೆ. ದರ ಕಡಿತವು 2022ರ ಜನವರಿ 26ರಿಂದ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಚಾರವಾಗಿ ಜಾರ್ಖಂಡ್ ಮುಖ್ಯಮಂತ್ರಿಗಳ ಕಾರ್ಯಾಲಯ ಟ್ವೀಟ್ ಮಾಡಿದ್ದು, ‘ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು ಬಡವರು, ಮಧ್ಯಮ ವರ್ಗದ ಜನರು ಹೆಚ್ಚು ತೊಂದರೆಗೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು […]

Advertisement

Wordpress Social Share Plugin powered by Ultimatelysocial