ಕರೋನಾ ಮಹಾಮಾರಿ ಕಾರಣಕ್ಕೆ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಹೀಗಾಗಿ ಕಳೆದ ನಲವತ್ತು ದಿನಗಳಿಗೂ ಅಧಿಕ ಕಾಲದಿಂದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಕರೋನಾ ಸೋಂಕಿನ ಆರ್ಭಟ ದಿನೇ ದಿನೇ ಹೆಚ್ಚಳವಾಗುತ್ತಿರುವ ಮಧ್ಯೆಯೂ ಶಾಲಾ-ಕಾಲೇಜು ಆರಂಭದ ಕುರಿತ ಮಾತುಗಳು ಕೇಳಿಬರುತ್ತಿವೆ. ಆದರೆ ಇದಕ್ಕೆ ಬಹುತೇಕ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕರೋನಾ ಸೋಂಕಿನ ಅಪಾಯದ ಅರಿವಿದ್ದರೂ ದೊಡ್ಡವರೇ ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ. ಇನ್ನು ಚಿಕ್ಕವರಿಂದ […]

ಮ್ಯಾಡ್ರಿಡ್: ಕೋವಿಡ್ ಕಾರಣದಿಂದ ಈ ವರ್ಷ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಶೇ. ೬೦ರಿಂದ ೮೦ರಷ್ಟು ಇಳಿಕೆಯಾಗಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಗತ್ತಿನಾದ್ಯಂತ ಪ್ರಯಾಣ ನಿರ್ಬಂಧಗಳು, ವಿಮಾನ ನಿಲ್ದಾಣಗಳ ಚಟುವಟಿಕೆಗಳ ಸ್ಥಗಿತ ಹಾಗೂ ಗಡಿಗಳನ್ನೂ ಮುಚ್ಚಲಾಗಿದೆ. ಇಂಥ ಸಂಕಷ್ಟ ೧೯೫೦ರ ಬಳಿಕ ಬಂದಿರಲಿಲ್ಲ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ. ೨೨ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. […]

ಬ್ಯಾಂಕಾಕ್ : ಕೊರೊನಾ ಸೋಂಕು ಕಾರಣದಿಂದಾಗಿ ಥೈಲ್ಯಾಂಡ್‌ನಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಈ ಕೊರೊನಾ ಬಿಸಿ ತಟ್ಟಿದೆ ಅಂರೆ ತಪ್ಪಾಗಲಾರದು. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರವಾಸಿಗರನ್ನು ಅವಲಂಭಿಸಿರುವ ಆನೆಗಳು ಈಗ ಹಸಿವಿನಿಂದ ತೊಂದರೆಗೊಳಗಾಗಿವೆ. ಈ ಹಿನ್ನೆಲೆ ಅವುಗಳನ್ನು ಮತ್ತೇ ತಮ್ಮ ನೈಸರ್ಗಿಕ ವಾಸಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ೧೦೦ಕ್ಕೂ ಹೆಚ್ಚು ಪ್ರಾಣಿಗಳನ್ನು ೧೫೦ ಕಿ.ಮೀ(೯೫ ಮೈಲಿ) ದೂರದ ತಮ್ಮ ಮೂಲ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಉತ್ತರ ಪ್ರಾಂತ್ಯದ ಚಿಯಾಂಗ್ […]

ವಾಷಿಂಗ್ಟನ್: ಸುಮಾರು ೧.೨೩ ದಶಲಕ್ಷ ಕರೊನಾ ಸೋಂಕಿತರು, ೭೨ ಸಾವಿರಕ್ಕೂ ಅಧಿಕ ಮಂದಿಯ ಸಾವು… ಇದು ಅಮೆರಿಕದ ಇಂದಿನ ಸ್ಥಿತಿ. ದಿನದಿಂದ ದಿನಕ್ಕೆ ಅಮೆರಿಕ ಕರೊನಾ ಸೋಂಕಿನ ಮೃತ್ಯುಕೂಪವಾಗುತ್ತಿದ್ದರೂ, ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ಅಲ್ಲಿಯ ಅಧ್ಯಕ್ಷ ಈಗ ತೆಗೆದುಕೊಳ್ಳುತ್ತಿರುವ  ಒಂದೊಂದು ಕ್ರಮವೂ, ಹೇಳುತ್ತಿರುವ ಒಂದೊಂದು ಮಾತೂ ಇಡೀ ವಿಶ್ವದಲ್ಲಿಯೇ ಚರ್ಚೆಯಾಗುತ್ತಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರು. ಲಾಕ್‌ಡೌನ್ ಸ್ಥಗಿತಗೊಳಿಸುವ ಬಗ್ಗೆ ಘೋಷಣೆ ನೀಡುವ ಮೂಲಕ ಇದಾಗಲೇ […]

ವಾಷಿಂಗ್ಟನ್: ಭಾರತದಲ್ಲಿ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಶಾಲೆಗಳಿಗೆ ನಿರ್ಣಾಯಕ ಹಣಕಾಸು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸಲು ಆರಂಭಿಕ ಹಂತದಲ್ಲಿರುವ ಭಾರತದ ಶಿಕ್ಷಣ ಸಂಸ್ಥೆಗಳಿಗೆ ೧೫ ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ನೀಡಲು ಅಮೆರಿಕ ಹಣಕಾಸು ಸಂಸ್ಥೆ ಒಪ್ಪಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ದೀರ್ಘಕಾಲೀನ ಬಂಡವಾಳದ ಅಗತ್ಯವನ್ನು ಪೂರೈಸುವ ಮೂಲಕ ಹೆಚ್ಚಿನ ಶಾಲೆಗಳನ್ನು ತಲುಪಲು ಬೆಂಗಳೂರು ಮೂಲದ ‘ವರ್ತನಾ’ ಹಣಕಾಸು ಸಂಸ್ಥೆಗೆ ಹಣಕಾಸಿನ ನೆರವು ನೀಡುತ್ತದೆ ಎಂದು […]

ಅಮೆರಿಕನ್ ವಕೀಲರಾಗಿರುವ ಭಾರತೀಯ ಮೂಲದ ಸರಿತಾ ಕೋಮಟಿ ರೆಡ್ಡಿ ನ್ಯೂಯಾರ್ಕ್ ಫೆಡರಲ್ ಕೋರ್ಟ್ನ ಜಡ್ಜ್ ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸರಿತಾರನ್ನ ನಾಮ ನಿರ್ದೇಶನ ಮಾಡಿದ್ದು, ಯುಎಸ್ ಸೆನೆಟ್‌ಗೆ ಕಳಿಸಿಕೊಟ್ಟಿದ್ದಾರೆ. ಸದ್ಯ ಸರಿತಾ, ನ್ಯೂಯಾರ್ಕ್ನ ಈಸ್ಟರ್ನ್ ಡಿಸ್ಟಿçಕ್ಟ್ನ ಯುಎಸ್ ಅಟರ್ನಿ ಕಚೇರಿಯ ಜನರಲ್ ಕ್ರೆöÊಮ್ಸ್ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕೊಲಂಬಿಯಾ ಲಾ ಸ್ಕೂಲ್‌ನಲ್ಲಿ ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸರಿತಾ ಅವರು ಅಂತರಾಷ್ಟಿçÃಯ ನಾರ್ಕೊಟಿಕ್ಸ್ ಮತ್ತು […]

ಪಾಕಿಸ್ತಾನ-ಭಾರತದ ದ್ವೇಷ ದಶಕಗಳಿಂದಲೂ ಮುಂದುವರೆಯುತ್ತಲೆ ಬಂದಿದೆ. ಭಾರತ ಪಾಕಿಸ್ತಾನದೊಂದಿಗೆ ಎಷ್ಟು ಸಂಧಾನಕ್ಕೆ ಅವಕಾಶ ಕೊಟ್ಟರು ಸಹಿತ ಅದು ಬೆನ್ನಿಗೆ ಚೂರಿ ಹಾಕುವುದನ್ನೆ ಕಾಯುತ್ತಿರುತ್ತದೆ. ಅಲ್ಲದೆ ಹಿಂದೂಗಳ ದಬ್ಬಾಳಿಕೆ ನಡೆಯುತ್ತಲೆ ಇರುತ್ತದೆ. ಆದರೆ ಭಾರತೀಯರು ಉದಾರ ಮನಸ್ಸಿನವರು ಎಂಬುವುದಕ್ಕೆ ಈ ಘಟನೆಯೆ ಸಾಕ್ಷಿ. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಪೈಲೆಟ್ ಆಗಿ ಸಿಂಧ್ ಪ್ರಾಂತ್ಯದ ನಿವಾಸಿ ರಾಹುಲ್ ದೇವ್ ಎಂಬುವವರು ಪಾಕಿಸ್ತಾನ ವಾಯುಸೇನೆಯಲ್ಲಿ, ಜನರಲ್ ಡ್ಯೂಟಿ ಪೈಲೆಟ್ ಅಧಿಕಾರಿಯಾಗಿ ನೇಮಕವಾಗಿದ್ದಾರೆ.  ಪಾಕ್‌ನ […]

ನ್ಯೂಯಾರ್ಕ್: ಕೊರೊನಾ ವೈರಸ್ ಮಾನವ ನಿರ್ಮಿತ ಇದು ಚೀನಾ ಲ್ಯಾಬ್‌ನಲ್ಲಿಯೇ ಸೃಷ್ಟಿಯಾಗಿದೆ ಎಂದು ಅಮೆರಿಕ ಹೇಳುತ್ತಿದ್ದು, ಆದರೆ ಯಾವುದೇ ಸಾಕ್ಷ್ಯಗಳು ಅವರ ಬಳಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಮೆರಿಕಾದಲ್ಲಿ ನಾವು ಆತಂಕದಿಂದ ಬದುಕ್ತಿದ್ದೀವಿ, ಭಾರತ ನೋಡಿ ಅಮೆರಿಕಾ ಬುದ್ಧಿ ಕಲಿಯಬೇಕು ಎಂದು ಭಾರತೀಯ ಮೂಲದ ಅಮೇರಿಕಾ ನಿವಾಸಿ ಹೇಳಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಕೊರೊನಾ ನೈಸರ್ಗಿಕವೇ ಅಥವಾ ಮಾನವ ನಿರ್ಮಿತವೇ ಎಂಬ ವಾದ ವಿವಾದಗಳು ನಡೆಯುತ್ತಲೇ […]

ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕಾಯಿಲೆ ಎದುರಿಸಿದ ಸನ್ನೀವೇಶಗಳನ್ನು ಬ್ರಿಟನ್‌ನ ದಿ ಸನ್ ಎಂಬ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬ ಅರಿವಾಗಿದ್ದು, ವೈದ್ಯರು ಸಾವಿನ ಘೋಷಣೆಗೆ ಸಿದ್ಧರಾಗಿದ್ದ ವಿಷಯವನ್ನುಹಂಚಿಕೊಂಡಿದ್ದಾರೆ . ಸ್ಟಾಲಿನ್ ಮಾದರಿಯ ಸಾವಿನ ಸನ್ನಿವೇಶವನ್ನು ನಿಭಾಯಿಸಲು ವೈದ್ಯರು ಸಿದ್ಧತೆ ಮಾಡುತ್ತಿದ್ದರು. ಒಂದು ವೇಳೆ ಪರಿಸ್ಥಿತಿ […]

ಕೊರೊನಾ ವೈರಸ್ ಮಾನವ ನಿರ್ಮಿತ. ಅದು ಯಾವುದೋ ಪ್ರಾಣಿಯೋ ಅಥವಾ ಪಕ್ಷಿಗಳಿಂದ ಸೃಷ್ಟಿಯಾದ ವೈರಸ್ ಅಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳನ್ನು ನೇರವಾಗಿ ಗೆಲ್ಲಲಾಗದ ಚೀನಾ ತನ್ನ ಕಪಟ ಬುದ್ಧಿಯಿಂದ ಜೈವಿಕ ಯುದ್ಧದ ಮೊರೆ ಹೋಗಿ, ಈ ಕೊರೊನಾ ವೈರಸ್‌ಅನ್ನು ಸೃಷ್ಟಿಸಿದೆ. ಚೀನಾದ ಪ್ರಯೋಗಾಲಯದಲ್ಲಿ ಈ ವೈರಸ್ ಲೀಕ್ ಆಗಿದೆ. ಇದರಿಂದಾಗಿ ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಮೊದಲು ತಾನೇ ಬಾಧೆಪಟ್ಟ ಚೀನಾ, ಮತ್ತೆ ಜಗತ್ತಿಗೆ ಸೋಂಕು ಹಬ್ಬಿದೆ. ಹೀಗಾಗಿ ಜಗತ್ತಿನ ಇತರ […]

Advertisement

Wordpress Social Share Plugin powered by Ultimatelysocial