ತೆಹ್ರಾನ್​: ಮಲಗಿದ್ದ ವೇಳೆ ಅಪ್ರಾಪ್ತ ಮಗಳ ತಲೆಯನ್ನು ತಂದೆಯೇ ತುಂಡರಿಸಿದ ಆತಂಕಕಾರಿ ಘಟನೆ ಇರಾನ್​ನಲ್ಲಿ ನಡೆದಿದ್ದು, ಇದೊಂದು ಮರ್ಯಾದೆ ಹತ್ಯೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೊಮಿನಾ ಅಶ್ರಫಿ (13) ಮೃತ ದುರ್ದೈವಿ. ಇರಾನ್​ನ ತಲೇಶ್​ ಕೌಂಟಿಯಲ್ಲಿರುವ ತಮ್ಮ ನಿವಾಸದಲ್ಲಿ ರಾತ್ರಿ ಮಲಗಿದ್ದಾಗ ಕುಡುಗೋಲಿನಿಂದ ತಲೆಯನ್ನು ಕತ್ತರಿಸಲಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಆಕೆ ಓಡಿ ಹೋಗಲು ತಯಾರಾಗಿದ್ದಾರಿಂದ ಮರ್ಯಾದೆಗೆ ಅಂಜಿ ಹತ್ಯೆ ಮಾಡಲಾಗಿದೆ.

ಅರ್ಜೆಂಟೀನಾ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಿಳಿಯ ಮಾತನ್ನು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿರುವ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. 46 ವರ್ಷದ ಎಲಿಜಬೆತ್ ಎಂಬ ಮಹಿಳೆ 2018ರ ಡಿಸೆಂಬರ್‌ನಲ್ಲಿ ಕೊಲೆಯಾಗಿದ್ದರು. ಅಪರಾಧ ಸ್ಥಳವನ್ನು ಹುಡುಕುತ್ತಿದ್ದ ಪೊಲೀಸರಿಗೆ ಅವರ ಮನೆಯಲ್ಲಿದ್ದ ಗಿಳಿಯ ಮಾತು ಸುಳಿವೊಂದನ್ನು ನೀಡಿತ್ತು. ಗಿಳಿಯು ತನ್ನ ಮಾಲೀಕರ ಕೊನೆಯ ಮಾತುಗಳನ್ನು ಪುನರಾವರ್ತಿಸುತ್ತಿತ್ತು. ಇದನ್ನು ಪೊಲೀಸರು ನಂಬಿದ್ದಾರೆ.‌ ಜತೆಗೆ ನೆರೆ ಮನೆಯವರೂ ಸಹ ಗಿಳಿಯ ಮಾತನ್ನು ಪುನರುಚ್ಛರಿಸಿದ್ದಾರೆ. At, no, […]

ಬೀಜಿಂಗ್: ಇಯರ್ ಫೋನ್ ಅತಿಯಾಗಿ ಬಳಸುತ್ತಿರುವವರಿಗೆ ಆತಂಕಕಾರಿ ಸುದ್ದಿ ಇಲ್ಲಿದೆ.‌ ಬೀಜಿಂಗ್ ನಗರದಲ್ಲಿ  10 ವರ್ಷದ ಬಾಲಕನ ಕಿವಿಯಲ್ಲಿ ಬ್ಲ್ಯಾಕ್ ಫಾರೆಸ್ಟ್ ಫಂಗಸ್ ಬೆಳೆದಿದ್ದು ತಜ್ಞರು ಅದನ್ನು ಹೊರತೆಗೆದಿದ್ದಾರೆ. ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕ ಇಯರ್ ಫೋನ್ ಅತಿಯಾಗಿ ಬಳಸುತ್ತಿದ್ದ. ಕಳೆದ ತಿಂಗಳು ಆತನ ಕಿವಿಯಲ್ಲಿ ತೊಂದರೆ ಶುರುವಾಯಿತು. ಇಯರ್ ಫೋನ್ ಬಳಕೆಯಿಂದ‌ ಕಿವಿಯಲ್ಲಿ ಉಂಟಾಗುವ ಬಿಸಿ ಗಾಳಿ,‌ ಆರ್ದತೆಯನ್ನು ಸೃಷ್ಟಿಸುತ್ತದೆ. ಇದರಿಂದ ಫಂಗಸ್ ಬೆಳೆಯಲು […]

ಎರಡನೇ ಮಹಾಯುದ್ಧ ಹಾಗೂ  1945 ರಲ್ಲಿ ಬರ್ಲಿನ್  ನಲ್ಲಿ  ನಡೆದ ಕದನದಲ್ಲಿ ಬಾಂಬ್ ಸ್ಫೋಟದ ನಡುವೆಯೂ ಬದುಕುಳಿದ 84 ವರ್ಷದ ಮೊಸಳೆಯೊಂದು ಮಾಸ್ಕೋದ ಮೃಗಾಲಯದಲ್ಲಿ ವಯೋಸಹಜ ಕಾರಣದಿಂದ ಮೃತಪಟ್ಟಿದೆ. ಸಾಮಾನ್ಯವಾಗಿ ಮೊಸಳೆಗಳು ಕಾಡಿನಲ್ಲಿ 30ರಿಂದ 50 ವರ್ಷಗಳ ಅವಧಿಯಲ್ಲಿ  ಜೀವಿಸುತ್ತವೆ.‌ ಮೃಗಾಲಯದಲ್ಲಿರುವ ಮೊಸಳೆಗಳ ಜೀವಿತಾವಧಿ 70 -80 ವರ್ಷಗಳವರೆಗೆ ಇರುತ್ತದೆ. ಯುದ್ಧ ಮುಗಿದ ಬಳಿಕ ಶರ್ಟನ್ ಹೆಸರಿನ ಮೊಸಳೆಯನ್ನು ಬ್ರಿಟಿಷ್ ಸೈನಿಕರು ಸೋವಿಯತ್ ಒಕ್ಕೂಟಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದಲೂ ಮಾಸ್ಕೋ […]

ಲಾಹೋರ್ ನಿಂದ ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ರ‍್ಲೈನ್ಸ್ ಲ್ಯಾಂಡಿಂಗ್ ಆಗುವ ವೇಳೆ ಮಾಡಲ್ ಟೌನ್ ನಗರದಲ್ಲಿ ಪತನಗೊಂಡಿದೆ. ಇದರಿಂದ ನಗರದ ೮ ರಿಂದ ೧೦ ಮನೆಗಳು ಧ್ವಂಸಗೊಂಡಿವೆ ಮತ್ತು ವಿಮಾನದಲ್ಲಿ ೧೦೭ ಮಂದಿ ಪ್ರಯಾಣಿಕರಿದ್ದರೆಂದು ತಿಳಿದುಬಂದಿದೆ.  ವಿಮಾನ ಬಿದ್ದ ಕೂಡಲೇ ಸ್ಥಳದಲ್ಲಿ ಭೀಕರ ಸದ್ದು ಮತ್ತು ಧೂಳು ಎದ್ದಿದ್ದು, ಬಳಿಕ ಹೊಗೆ ಆವರಿಸಿಕೊಂಡಿದೆ. ಹೀಗಾಗಿ ವಿಮಾನದಲ್ಲಿರುವವರ ಸ್ಥಿತಿಗತಿ ಮತ್ತು ಪತನ ಸ್ಥಳದಲ್ಲಿ ಯಾರಾದರೂ ಇದ್ದಿದ್ದರೆ ಅವರ ಪರಿಸ್ಥಿತಿ ಕಷ್ಟವಾಗುತ್ತಿತ್ತು.  […]

ದಕ್ಷಿಣ ಕೊರಿಯಾದ ಖಾಲಿ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿದೆ. ಈ ವೇಳೆ ಖಾಲಿಯಿದ್ದ ಪ್ರೇಕ್ಷಕರ ಖುರ್ಚಿ ಮೇಲೆ ಕುಳಿತ ಗೊಂಬೆಗಳು ಸುದ್ದಿ ಮಾಡಿವೆ. ಖಾಲಿ ಖುರ್ಚಿ ಮೇಲೆ ಸೆಕ್ಸ್ ಡಾಲ್ ಗಳನ್ನು ಕೂರಿಸಲಾಗಿತ್ತು. ಕೊರೊನಾ ವೈರಸ್‌ನಿಂದಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡುವವರಿಗೆ ನಿಷೇಧ ಹೇರಲಾಗಿದೆ. ಕಳೆದ ಭಾನುವಾರದ ನಡೆದ ಪಂದ್ಯದ ವೇಳೆ ಸೆಕ್ಸ್ ಡಾಲ್ಸ್ ಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಲಾಗಿತ್ತು. ಗೊಂಬೆಗಳಿಗೆ ಟೀ ಶರ್ಟ್ ಹಾಕಿದ್ದರು. ಗೊಂಬೆ ಕೈನಲ್ಲಿದ್ದ ಫಲಕಗಳಲ್ಲಿ ಸೆಕ್ಸ್ […]

ಕರೋನವೈರಸ್ ನಿರ್ಬಂಧದಿಂದಾಗಿ ನೇಪಾಳದಲ್ಲಿ ಸಿಲುಕಿರುವ ಚೀನಾದ ಪ್ರಜೆಗಳ ಗುಂಪು ಕಠ್ಮಂಡುವಿನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯನ್ನು ತಲುಪುವ ಪ್ರಯತ್ನದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿತು. ಅವರಲ್ಲಿ 45 ಜನರನ್ನು ಬಂಧಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.  “ಪ್ರತಿಭಟನಾಕಾರರು ನಿಷೇಧಿತ ವಲಯಕ್ಕೆ ಪ್ರವೇಶಿಸಿದಾಗ ಘರ್ಷಣೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಹರಿಬಹಾದೂರ್ ಬಾಸ್ನೆಟ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ” ಎಂದು ನೇಪಾಳ ಪೊಲೀಸ್ ವರಿಷ್ಠಾಧಿಕಾರಿ ಸೋಮಂದ್ರ ಸಿಂಗ್ ರಾಥೋಡ್ ದೂರವಾಣಿ ಮೂಲಕ ಎಎನ್‌ಐಗೆ ತಿಳಿಸಿದ್ದಾರೆ. […]

ಕಾಬೂಲ್ : ಕಳೆದ ೨೪ ಗಂಟೆಯಲ್ಲಿ ೨೧೫ ಹೊಸ ಸೋಂಕು ಪ್ರಕರಣಗಳು ದೇಶದಲ್ಲಿ ಕಂಡು ಬಂದಿವೆ. ಅಲ್ಲದೇ ಆರೋಗ್ಯ ಸಚಿವ ಫಿರೋಜುದ್ದೀನ್ ಫಿರೋಜ್ ಅವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಆಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲೀಗ ಸುಮಾರು ೩,೭೦೦ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈವರೆಗೆ ೧೦೦ಕ್ಕೂ ಹೆಚ್ಚು ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಬರ್ಲಿನ್: ಚಂದ್ರನ ಮೇಲೆ ಕಾಂಕ್ರೀಟ್ ತಯಾರಿಸಲು ಮಾನವ ಮೂತ್ರವು ಒಂದು ದಿನ ಉಪಯುಕ್ತ ಘಟಕಾಂಶ ಆಗಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮೂತ್ರದಲ್ಲಿನ ಸಂಯುಕ್ತವಾದ ‘ಯೂರಿಯಾ’ವು ಅದರ ಗಟ್ಟಿಮುಟ್ಟಾದ ಅಂತಿಮ ಸ್ವರೂಪ ಗಟ್ಟಿ ಆಗುವ ಮೊದಲು ‘ಚಂದ್ರನ ಕಾಂಕ್ರೀಟ್’ ಗೆ ಉಪಯೋಗಕಾರಿಯಾಗಿದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದರಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಚಂದ್ರನ ಮೇಲ್ಭಾಗದಲ್ಲಿ ಲಭ್ಯವಿರುವ ವಸ್ತುಗಳನ್ನು ಮಾತ್ರ ಬಳಸುವುದರಿಂದ ಭೂಮಿಯಿಂದ ಸರಬರಾಜಾಗುವ ಅಗತ್ಯ ಸರಕುಗಳ ಸಾಗಣೆ […]

ವಾಷಿಂಗ್ಟನ್: ವುಹಾನ್‌ನಗರದಲ್ಲಿರುವ ಜೀವಂತ ಪ್ರಾಣಿಗಳ ಮಾರುಕಟ್ಟಯಿಂದಲೇ ಕೊರೊನಾ ಹರಡಿದೆ ಎನ್ನುವ ಆರೋಪಗಳು ಕೇಳಿಬಂದ ಬಳಿಕವೂ ಮಾರುಕಟ್ಟೆಯನ್ನು ಮುಚ್ಚದಿರಲು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಪತ್ರಿಕಾಘೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆಹಾರ ಮತ್ತು ಸುರಕ್ಷತಾ ಮತ್ತು ಪ್ರಾಣಿ ರೋಗತಜ್ಞ ಪೀಟನ್ ಬೆನ್ ಮಾತನಾಡಿ , ಜಾಗತಿಕವಾಗಿ ಲಕ್ಷಾಂತರ ಜನರಿಗೆ ಆಹಾರ ಮತ್ತು ಜೀವನೋಪಾಯವನ್ನು ಒದಗಿಸಲು ಪ್ರಾಣಿ ಮಾರುಕಟ್ಟೆಗಳ ಪಾತ್ರ ನಿರ್ಣಾಯಕವಾಗಿದೆ. ಕೆಲವೊಂದು ಸಮಯದಲ್ಲಿ ಮಾನವರಿಗೆ ಸೋಂಕು ಹರಡಿದರೂ ಕೂಡ ಮಾರುಕಟ್ಟೆಗಳನ್ನು ಮುಚ್ಚು […]

Advertisement

Wordpress Social Share Plugin powered by Ultimatelysocial